ನವದೆಹಲಿ: ಡೆಲ್ ಟೆಕ್ನಾಲಜೀಸ್ ಇಂಕ್ ಸುಮಾರು 6,650 ಉದ್ಯೋಗಗಳನ್ನು ಅಥವಾ ಅದರ ಜಾಗತಿಕ ಉದ್ಯೋಗಿಗಳ ಶೇಕಡಾ 5 ರಷ್ಟನ್ನು ತೆಗೆದುಹಾಕುತ್ತದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.ಇದರೊಂದಿಗೆ, ಡೆಲ್ ನೌಕರರನ್ನು ವಜಾ ಘೋಷಿಸಿದ ಇತ್ತೀಚಿನ ಟೆಕ್ ಕಂಪನಿಗಳ ಸಾಲಿಗೆ ಸೇರ್ಪಡೆಯಾಗಿದೆ.
ಬ್ಲೂಮ್‌ಬರ್ಗ್ ಉಲ್ಲೇಖಿಸಿದ ಪತ್ರದಲ್ಲಿ ಸಹ-ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜೆಫ್ ಕ್ಲಾರ್ಕ್,ಅವರು ಮಾರುಕಟ್ಟೆಯಲ್ಲಿ ಕಂಪನಿ ಅನಿಶ್ಚಿತ ಭವಿಷ್ಯದ ಕುರಿತಾಗಿ ಹೇಳುತ್ತಾ "ನಾವು ಮುಂಚಿತವಾಗಿ ಆರ್ಥಿಕ ಕುಸಿತವನ್ನು ಗುರುತಿಸಿದ್ದೇವೆ, ಮಾರುಕಟ್ಟೆ ಚೇತರಿಸಿಕೊಂಡಾಗ ಮತ್ತೆ ಸಿದ್ದರಾಗುತ್ತೇವೆ.ಈ ಹಿಂದೆ ಕೊರೊನಾ ಸಂದರ್ಭದಲ್ಲಿಯೂ ಕೂಡ ಕಂಪನಿ ಇದೆ ರೀತಿ ವಜಾಗೊಳಿಸಿತ್ತು” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: “ಮುಸ್ಲಿಂ ಸಮುದಾಯಕ್ಕೆ ಜಮೀರ್ ಗಿಂತ ದೊಡ್ಡ ಶತ್ರು ಬೇರೆ ಯಾರೂ ಇಲ್ಲ”- ಎಚ್.ಡಿ.ಕುಮಾರಸ್ವಾಮಿ
2022 ರ ನಾಲ್ಕನೇ ತ್ರೈಮಾಸಿಕದಲ್ಲಿ ವೈಯಕ್ತಿಕ ಕಂಪ್ಯೂಟರ್ ಸಾಗಣೆಗಳು ತೀವ್ರವಾಗಿ ಕುಸಿದಿವೆ ಎಂದು ಪ್ರಾಥಮಿಕ ಮಾಹಿತಿಯು ತೋರಿಸುತ್ತದೆ ಎಂದು ಐಡಿಸಿ ಹೇಳಿದೆ.2021ರಲ್ಲಿ ಇದೇ ಅವಧಿಗೆ ಹೋಲಿಸಿದರೆ 37 ಶೇಕಡಾದೊಂದಿಗೆ ಡೆಲ್ ಅತಿದೊಡ್ಡ ಕುಸಿತವನ್ನು ಕಂಡಿದೆ. ಡೆಲ್ ಕಂಪನಿಯು ತನ್ನ ಆದಾಯದ ಸುಮಾರು ಶೇ 55 ರಷ್ಟನ್ನು PC ಗಳಿಂದ ಉತ್ಪಾದಿಸುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ಉಂಡ ಮನೆಯ ಗಳ ಇರಿಯುವ ಜಮೀರ್ ಅಹ್ಮದ್: ಜೆಡಿಎಸ್ ಆಕ್ರೋಶ
ನವೆಂಬರ್‌ನಲ್ಲಿ, HP ಮುಂದಿನ ಮೂರು ವರ್ಷಗಳಲ್ಲಿ 6,000 ಉದ್ಯೋಗಗಳನ್ನು ತೊಡೆದುಹಾಕುವುದಾಗಿ ಹೇಳಿತ್ತು, ಇದು ಪರ್ಸನಲ್ ಕಂಪ್ಯೂಟರ್‌ಗಳ ಬೇಡಿಕೆಯು ಲಾಭವನ್ನು ಕಡಿತಗೊಳಿಸಿದೆ. ಇಷ್ಟೇ ಅಲ್ಲ, Cisco Systems Inc. ಮತ್ತು ಇಂಟರ್ನ್ಯಾಷನಲ್ ಬ್ಯುಸಿನೆಸ್ ಮೆಷಿನ್ಸ್ ಕಾರ್ಪೊರೇಷನ್ ಪ್ರತಿಯೊಂದೂ ಸುಮಾರು 4,000 ನೌಕರರನ್ನು ತೆಗೆಯುವುದಾಗಿ ಹೇಳಿದ್ದವು. 2022 ರಲ್ಲಿ ತಂತ್ರಜ್ಞಾನ ವಲಯವು 97,171 ಉದ್ಯೋಗ ಕಡಿತಗಳನ್ನು ಘೋಷಿಸಿದೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 649 ರಷ್ಟು ಹೆಚ್ಚಾಗಿದೆ ಎಂದು ಸಲಹಾ ಸಂಸ್ಥೆ ಚಾಲೆಂಜರ್, ಗ್ರೇ & ಕ್ರಿಸ್ಮಸ್ ಇಂಕ್ ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.