7th Pay Commission: ಡಿಎ ಕುರಿತಂತೆ ಹೊರ ಬಂದಿದೆ ಹೊಸ ಅಪ್ಡೇಟ್, ಸರ್ಕಾರಿ ನೌಕರರಿಗೆ ಒಂದೇ ಬಾರಿ ಸಿಗಲಿದೆ 2 ಲಕ್ಷ ರೂಪಾಯಿ

ವರದಿಗಳ ಪ್ರಕಾರ, ಮೋದಿ ಸರ್ಕಾರವು 1.5 ವರ್ಷಗಳ ಅಂದರೆ 18 ತಿಂಗಳವರೆಗೆ  ಡಿಎ ಬಾಕಿಯನ್ನು ಒಂದೇ ಬಾರಿಗೆ ನೀಡಲಿದೆ. ಎನ್ನಲಾಗಿದೆ. ಈ ಮೊತ್ತ ಸುಮಾರು 2 ಲಕ್ಷ ರೂ.ಗಳಷ್ಟು ಆಗಿರಲಿದೆ.    

Written by - Ranjitha R K | Last Updated : Feb 11, 2022, 08:55 AM IST
  • ಕೇಂದ್ರ ನೌಕರರಿಗೆ ಭರ್ಜರಿ ಸಿಹಿ ಸುದ್ದಿ
  • DA ಹೆಚ್ಚಳದ ಬಗ್ಗೆ ದೊಡ್ಡ ಅಪ್ಡೇಟ್
  • ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ
7th Pay Commission: ಡಿಎ  ಕುರಿತಂತೆ ಹೊರ ಬಂದಿದೆ ಹೊಸ ಅಪ್ಡೇಟ್,  ಸರ್ಕಾರಿ ನೌಕರರಿಗೆ ಒಂದೇ ಬಾರಿ ಸಿಗಲಿದೆ 2 ಲಕ್ಷ ರೂಪಾಯಿ  title=
ಕೇಂದ್ರ ನೌಕರರಿಗೆ ಭರ್ಜರಿ ಸಿಹಿ ಸುದ್ದಿ (file photo)

ನವದೆಹಲಿ : 7th Pay Commission: ಸರ್ಕಾರಿ ನೌಕರರ ತುಟ್ಟಿ ಭತ್ಯೆಗೆ (Dearness allowance - DA) ಸಂಬಂಧಿಸಿದಂತೆ ಅಪ್ಡೇಟ್ ಹೊರ ಬಿದ್ದಿದೆ.  ವರದಿಗಳ ಪ್ರಕಾರ, ಮೋದಿ ಸರ್ಕಾರವು (Modi government) 1.5 ವರ್ಷಗಳ ಅಂದರೆ 18 ತಿಂಗಳವರೆಗೆ  ಡಿಎ ಬಾಕಿಯನ್ನು ಒಂದೇ ಬಾರಿಗೆ ನೀಡಲಿದೆ. ಎನ್ನಲಾಗಿದೆ. ಈ ಮೊತ್ತ ಸುಮಾರು 2 ಲಕ್ಷ ರೂ.ಗಳಷ್ಟು ಆಗಿರಲಿದೆ.  

ಕೇಂದ್ರ ನೌಕರರರಿಂದ ಕೇಳಿ ಬರುತ್ತಿದೆ ಒತ್ತಾಯ : 
ಜನವರಿ 2020 ರಿಂದ ಜೂನ್ 2021 ರವರೆಗೆ ತಡೆಹಿಡಿಯಲಾದ ಡಿಎಯನ್ನು (DA) ನೀಡಬೇಕೆಂದು ಕೇಂದ್ರ ನೌಕರರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಡಿಎ ಬಾಕಿ ನೀಡುವ ಬಗ್ಗೆ ಚಿಂತನೆ ನಡೆಸಿ ಶೀಘ್ರವೇ ಪರಿಹಾರ ಕಂಡುಕೊಳ್ಳಲಿದೆ ಎಂದು ಸರಕಾರಿ ನೌಕರರು (Government employtee) ನಿರೀಕ್ಷಿಸಿದ್ದರು. ಜೆಸಿಎಂನ ರಾಷ್ಟ್ರೀಯ ಕೌನ್ಸಿಲ್‌ನ ಕಾರ್ಯದರ್ಶಿ (ಸಿಬ್ಬಂದಿ ವಿಭಾಗ) ಶಿವ ಗೋಪಾಲ್ ಮಿಶ್ರಾ ಅವರ ಪ್ರಕಾರ, ಪರಿಷತ್ತು ಸರ್ಕಾರದ ಮುಂದೆ ತನ್ನ ಬೇಡಿಕೆಯನ್ನು ಇರಿಸಿದೆ.  ಆದರೆ ಇದುವರೆಗೆ ಸರ್ಕಾರದ ವತಿಯಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. 

ಇದನ್ನೂ ಓದಿ : ಇ-ರೂಪಿ ವೋಚರ್‌ಗಳ ಮಿತಿಯನ್ನು 10,000 ರೂ.ನಿಂದ 1 ಲಕ್ಷಕ್ಕೆ ಹೆಚ್ಚಿಸಲು ಆರ್‌ಬಿಐ ಪ್ರಸ್ತಾಪ

ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ : 
ಮಿಶ್ರಾ ಪ್ರಕಾರ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ  (DoPT) ಮತ್ತು ಹಣಕಾಸು ಸಚಿವಾಲಯ, ಲೆಕ್ಕ ಪತ್ರ  ಇಲಾಖೆ ಅಧಿಕಾರಿಗಳೊಂದಿಗೆ JCM ಜಂಟಿ ಸಭೆಯನ್ನು ಶೀಘ್ರದಲ್ಲೇ ನಡೆಸಲಾಗುವುದು. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ (Cabinet meeting) ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಾಮಾನ್ಯವಾಗಿ ಡಿಎಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಈ ಬಾರಿ ಜನವರಿಯಲ್ಲಿ ಆಗಬೇಕಾಗಿರುವ ಡಿಎ ಹೆಚ್ಚಳದ (DA Hike) ಬಗ್ಗೆ ಇನ್ನೂ ಘೋಷಣೆಯಾಗಿಲ್ಲ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರವು ಡಿಎಯನ್ನು ಶೇಕಡಾ 17 ರಿಂದ ಶೇಕಡಾ 31 ಕ್ಕೆ ಹೆಚ್ಚಿಸಿತ್ತು.  2022ರ ಜನವರಿಯ ಡಿಎ ಶೇ.3ರಷ್ಟು (Dearness allowance-DA)ಹೆಚ್ಚಾದರೆ ಡಿಎ ಶೇ.34ಕ್ಕೆ ಏರಿಕೆಯಾಗಲಿದೆ.

ಎಷ್ಟು ಡಿಎ ಬಾಕಿ ಸಿಗಲಿದೆ ?  
ಬರುವ ಸಭೆಯಲ್ಲಿ 18 ತಿಂಗಳ ಬಾಕಿ ಉಳಿಡಿರುವ ಡಿಎ ಬಗ್ಗೆ ನಿರ್ಧಾರ ಕೈಗೊಂಡರೆ ಲೆವೆಲ್-1 ನೌಕರರಿಗೆ 11,880 ರಿಂದ 37,554 ರೂ. ಅದೇ ರೀತಿ, ಲೆವೆಲ್-13 ನೌಕರರು ಒಂದು ಬಾರಿಗೆ 1,44,200 ರಿಂದ 2,18,200 ರೂ. ಡಿಎ ಸಿಗಲಿದೆ. 

ಇದನ್ನೂ ಓದಿ : EPFO : ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ : ಈಗ ನಿಮಗೆ ಮೊದಲಿಗಿಂತ ಹೆಚ್ಚು ಸಿಗಲಿದೆ ಪಿಂಚಣಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News