PM Kisan: ರೈತರಿಗೆ ನೆಮ್ಮದಿಯ ಸುದ್ದಿ ! ಇ-ಕೆವೈಸಿ ಪೂರ್ಣಗೊಳಿಸಲು ನಿಗದಿಪಡಿಸಿರುವ ಸಮಯ ವಿಸ್ತರಣೆ

PM Kisan e-KYC: ಈ ಮೊದಲು ಈ ದಿನಾಂಕವನ್ನು ಮಾರ್ಚ್ 31ರವರೆಗೆ ನಿಗದಿಪಡಿಸಲಾಗಿತ್ತು.  ಆದರೆ ಈಗ ಈ ಸಮಯಾವಕಾಶವನ್ನು ಮೇ31ರವರೆಗೆ ವಿಸ್ತರಿಸಲಾಗಿದೆ. 

Written by - Ranjitha R K | Last Updated : Mar 25, 2022, 01:21 PM IST
  • ಪಿಎಂ ಕಿಸಾನ್ ಯೋಜನೆಯ ಇ-ಕೆವೈಸಿಗೆ ಹೊಸ ಗಡುವು
  • ಮೇ 31 ರೊಳಗೆ ಇ-ಕೆವೈಸಿ ಪೂರ್ಣಗೊಳಿಸಬಹುದು
  • ಸಂಪೂರ್ಣ ಪ್ರಕ್ರಿಯೆ ಇಲ್ಲಿದೆ
PM Kisan:  ರೈತರಿಗೆ ನೆಮ್ಮದಿಯ ಸುದ್ದಿ ! ಇ-ಕೆವೈಸಿ ಪೂರ್ಣಗೊಳಿಸಲು ನಿಗದಿಪಡಿಸಿರುವ ಸಮಯ ವಿಸ್ತರಣೆ title=
ಪಿಎಂ ಕಿಸಾನ್ ಯೋಜನೆಯ ಇ-ಕೆವೈಸಿಗೆ ಹೊಸ ಗಡುವು (file photo)

ಬೆಂಗಳೂರು : PM Kisan e-KYC : ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸಂಬಂಧಿಸಿದ 12.53 ಕೋಟಿ ರೈತರಿಗೆ ನೆಮ್ಮದಿಯ ಸುದ್ದಿ ಬಂದಿದೆ.  ರೈತರಿಗೆ ಇ-ಕೆವೈಸಿ (E-KYC) ಮಾಡಲು ಮೇ 31 ರವರೆಗೆ ಸಮಯಾವಕಾಶ ನೀಡಲಾಗಿದೆ. ಈ ಮೊದಲು ಈ ದಿನಾಂಕವನ್ನು ಮಾರ್ಚ್ 31ರವರೆಗೆ ನಿಗದಿಪಡಿಸಲಾಗಿತ್ತು.  ಆದರೆ ಈಗ ಈ ಸಮಯಾವಕಾಶವನ್ನು ಮೇ31ರವರೆಗೆ ವಿಸ್ತರಿಸಲಾಗಿದೆ. ಇ-ಕೆವೈಸಿ ಮಾಡಲು ಸಾಧ್ಯವಾಗದ ರೈತರಿಗೆ ಪಿಎಂ ಕಿಸಾನ್ ನ (PM Kisan) ಕೊನೆಯ ಕಂತಿನ 2,000 ರೂ. ಪಡೆಯುವುದು ಸಾಧ್ಯವಾಗದೇ ಇರಬಹುದು. 

ಇ-ಕೆವೈಸಿ ಪೂರ್ಣಗೊಳಿಸುವುದು ಹೇಗೆ ?  
ಹಂತ 1: chrome ನಂತಹ ಮೊಬೈಲ್ ಫೋನ್ ಬ್ರೌಸರ್‌ಗೆ ಹೋಗಿ pmkisan.gov.in ಎಂದು ಟೈಪ್ ಮಾಡಿ. ಇದರೊಂದಿಗೆ  ಪಿಎಂ ಕಿಸಾನ್ (PM Kisan) ಪೋರ್ಟಲ್‌ನ ಹೋಂ ಪೇಜ್ ತೆರೆಯುತ್ತದೆ. ಅಲ್ಲಿ e-KYC ಎಂದು  ಬರೆದಿರುವುದನ್ನು ಕಾಣಬಹುದು. ಇದರ ಮೇಲೆ ಟ್ಯಾಪ್ ಮಾಡಿ ಆಧಾರ್ ಸಂಖ್ಯೆಯನ್ನು ನಮೂದಿಸಿ. ಇದಾದ ನಂತರ ಸರ್ಚ್ ಬಟನ್ ಮೇಲೆ ಟ್ಯಾಪ್ ಮಾಡಿ.

ಇದನ್ನೂ ಓದಿ : ನಾಳೆಯಿಂದ ನಾಲ್ಕು ದಿನ ಬ್ಯಾಂಕ್ ಬಂದ್..! ಇಂದೇ ಪೂರೈಸಿಕೊಳ್ಳಿ ಅಗತ್ಯ ಕೆಲಸ

ಹಂತ 2: ನಂತರ ಆಧಾರ್‌ನೊಂದಿಗೆ (AADHAAR) ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಇದರ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ 4 ಅಂಕಿಗಳ OTP ಬರುತ್ತದೆ. ಇದನ್ನು ಬಾಕ್ಸ್‌ನಲ್ಲಿ ಟೈಪ್ ಮಾಡಿ.

ಹಂತ 3: ಇದರ ನಂತರ, ಆಧಾರ್ ದೃಢೀಕರಣಕ್ಕಾಗಿ ಬಟನ್ ಅನ್ನು ಟ್ಯಾಪ್ ಮಾಡಬೇಕು. ಇದಾದ ನಂತರ  ಮತ್ತೆ 6 ಅಂಕೆಗಳ OTP ಬರುತ್ತದೆ. ಅದನ್ನು ಭರ್ತಿ ಮಾಡಿ  ಸಬ್ಮಿಟ್ ಬಟನ್ ಮೇಲೆ ಟ್ಯಾಪ್ ಮಾಡಿ. ಈ ಸಂಪೂರ್ಣ ಪ್ರಕ್ರಿಯೆಯನ್ನು ಸರಿಯಾಗಿ ಮಾಡಿದರೆ e-kyc ಪೂರ್ಣಗೊಳ್ಳುತ್ತದೆ ಇಲ್ಲದಿದ್ದರೆ Invalid  ಎಂಬ ಮಾಹಿತಿ ಬರುತ್ತದೆ.  ಒಂದು ವೇಳೆ ಈ ಪ್ರಕ್ರಿಯೆ  ಪೂರ್ಣ ಗೊಳ್ಳದಿದ್ದರೆ ಏಪ್ರಿಲ್‌ನಲ್ಲಿ ಬರುವ ನಿಮ್ಮ ಕಂತು ನಿಂತು ಹೋಗಬಹುದು. 

ಇದನ್ನೂ ಓದಿ: Fuel Prices: ಇಂದೂ ಕೂಡ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ, ಪ್ರತಿ ಹಣಕಾಸು ವರ್ಷದಲ್ಲಿ, ಮೋದಿ ಸರ್ಕಾರವು ರೈತರಿಗೆ 6000 ರೂಪಾಯಿಗಳನ್ನು ನೀಡುತ್ತದೆ. ಅದನ್ನು 2000 ದಂತೆ 3 ಕಂತುಗಳಲ್ಲಿ ನೀಡಲಾಗುತ್ತದೆ. . ಈ ವರ್ಷದ ಕೊನೆಯ ಕಂತು ಏಪ್ರಿಲ್ 1 ರ ನಂತರ ಬರಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News