February 2024 Bank Holidays: ಫೆಬ್ರವರಿಯಲ್ಲಿ ಇಷ್ಟು ದಿನ ಬ್ಯಾಂಕ್‌ಗಳಿಗೆ ರಜೆ

February 2024 Bank Holidays: ಫೆಬ್ರವರಿ ತಿಂಗಳಲ್ಲಿ, ದೇಶದ ವಿವಿಧ ವಲಯಗಳಲ್ಲಿ ಒಟ್ಟು 11 ದಿನಗಳವರೆಗೆ ಬ್ಯಾಂಕುಗಳು ಮುಚ್ಚಿರುತ್ತವೆ. ಹಾಗಾಗಿ ಫೆಬ್ರವರಿಯಲ್ಲಿ ನೀವು ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ಹೊಂದಿದ್ದರೆ, ರಜಾದಿನದ ಕ್ಯಾಲೆಂಡರ್ ಅನ್ನು ನೋಡಿ  ನಿಮ್ಮ ಕೆಲಸಗಳನ್ನು ಯೋಜಿಸಿ. 

Written by - Yashaswini V | Last Updated : Jan 26, 2024, 12:48 PM IST
  • ಈ ಬಾರಿ ಫೆಬ್ರವರಿ 29 ದಿನಗಳನ್ನು ಹೊಂದಿದೆ.
  • ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರತಿ ವಾರದ ಭಾನುವಾರ ಮತ್ತು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್ ರಜೆ ಇರುತ್ತದೆ.
  • ಇವುಗಳನ್ನು ಒಳಗೊಂಡಂತೆ ಫೆಬ್ರವರಿ ತಿಂಗಳಿನಲ್ಲಿ ದೇಶದ ಕೆಲವು ಭಾಗಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 11 ದಿನಗಳು ರಜೆ ಇರಲಿದೆ.
February 2024 Bank Holidays: ಫೆಬ್ರವರಿಯಲ್ಲಿ ಇಷ್ಟು ದಿನ ಬ್ಯಾಂಕ್‌ಗಳಿಗೆ ರಜೆ  title=

February 2024 Bank Holidays: ಈ ವರ್ಷದ ಮೊದಲ ತಿಂಗಳು ಅಂದರೆ ಜನವರಿಯಲ್ಲಿ, ವಿವಿಧ ವಲಯಗಳಲ್ಲಿ ಒಟ್ಟು 16 ದಿನಗಳವರೆಗೆ ಬ್ಯಾಂಕ್‌ಗಳಿಗೆ ರಜೆ ಇತ್ತು. ಇನ್ನೈದು ದಿನಗಳ ಬಳಿಕ ವರ್ಷ ಎರಡನೇ ತಿಂಗಳು ಎಂದರೆ ಫೆಬ್ರವರಿ ತಿಂಗಳು ಆರಂಭವಾಗಲಿದೆ. ಫೆಬ್ರುವರಿ ತಿಂಗಳಲ್ಲೂ ಹಲವು ರಜೆಗಳು ಬರಲಿವೆ. 

2024ರ ಫೆಬ್ರವರಿ ತಿಂಗಳಲ್ಲಿ ವಿವಿಧ ವಲಯಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 11 ದಿನಗಳ ರಜೆ ಇರುತ್ತದೆ.  ರಜಾ ದಿನಗಳಲ್ಲಿ ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂ ಸಂಬಂಧಿತ ಸೇವೆಗಳು ಮೊದಲಿನಂತೆಯೇ ಮುಂದುವರಿಯಲಿವೆ. ಆದಾಗ್ಯೂ,  ಫೆಬ್ರವರಿಯಲ್ಲಿ ನೀವು ಯಾವುದೇ ಪ್ರಮುಖ ಬ್ಯಾಂಕ್ ಸಂಬಂಧಿತ ಕೆಲಸವನ್ನು ಹೊಂದಿದ್ದರೆ ಎಂದರೆ ನೀವು ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪೂರ್ಣಗೊಳಿಸಬೇಕಾದ ಕೆಲಸಗಳು ಏನಾದರೂ ಇದ್ದಲ್ಲಿ ರಜಾದಿನದ ಕ್ಯಾಲೆಂಡರ್ ಪರಿಶೀಲಿಸಿ ನಿಮ್ಮ ಕೆಲಸಗಳನ್ನು ಯೋಜಿಸುವುದು ಉತ್ತಮವಾಗಿದೆ. 

ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಹೆಚ್ಚಿನ ಕೆಲಸಗಳನ್ನು ಆನ್‌ಲೈನ್‌ನಲ್ಲಿಯೇ ಪೂರ್ಣಗೊಳಿಸಬಹುದು. ಆದಾಗ್ಯೂ,  ಬ್ಯಾಂಕ್ ಖಾತೆ ತೆರೆಯುವುದು ಮತ್ತು ಸಾಲ ತೆಗೆದುಕೊಳ್ಳುವಂತಹ ಹಲವಾರು ಕೆಲಸಗಳಿಗೆ ಖುದ್ದಾಯಿ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನೀವು ಬ್ಯಾಂಕ್ ರಜೆಗಳ ಪಟ್ಟಿಯನ್ನು ಪರಿಶೀಲಿಸದೆ ಬ್ಯಾಂಕ್ ಶಾಖೆಗೆ ಹೋದಲ್ಲಿ ನಿರಾಶೆಗೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಒಮ್ಮೆ ಆರ್‌ಬಿಐ ಬಿಡುಗಡೆ ಮಾಡಿರುವ ಫೆಬ್ರವರಿ 2024 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಿ. 

ಇದನ್ನೂ ಓದಿ- Budget 2024 : ಮಹಿಳೆಯರ ಪಾಲಿಗೆ ವಿಶೇಷವಾಗಿರಲಿದೆ ಈ ಬಜೆಟ್ !ಈಡೇರಬಹುದು ಈ ನಿರೀಕ್ಷೆಗಳು

ಫೆಬ್ರವರಿ 2024 ರಲ್ಲಿ ಬ್ಯಾಂಕ್ ರಜಾದಿನಗಳು: 
ಈ ಬಾರಿ ಫೆಬ್ರವರಿ 29 ದಿನಗಳನ್ನು ಹೊಂದಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರತಿ ವಾರದ ಭಾನುವಾರ ಮತ್ತು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್ ರಜೆ ಇರುತ್ತದೆ. ಇವುಗಳನ್ನು ಒಳಗೊಂಡಂತೆ ಫೆಬ್ರವರಿ ತಿಂಗಳಿನಲ್ಲಿ ದೇಶದ ಕೆಲವು ಭಾಗಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 11 ದಿನಗಳು ರಜೆ ಇರಲಿದೆ. 

4 ಫೆಬ್ರವರಿ 2024: ಭಾನುವಾರದ ಕಾರಣ ಬ್ಯಾಂಕ್‌ಗಳಿಗೆ ಸಾರ್ವಜನಿಕ ರಜೆ ಇರುತ್ತದೆ.

10 ಫೆಬ್ರವರಿ 2024: ಎರಡನೇ ಶನಿವಾರದ ಕಾರಣ ಈ ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

11 ಫೆಬ್ರವರಿ 2024: ಭಾನುವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

14 ಫೆಬ್ರವರಿ 2024: ಬಸಂತ್ ಪಂಚಮಿ ಅಥವಾ ಸರಸ್ವತಿ ಪೂಜೆಯ ಕಾರಣ ತ್ರಿಪುರಾ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಇದನ್ನೂ ಓದಿ- Mutual Fund vs SSY : ಹೆಣ್ಣು ಮಗುವಿಗೆ ಉತ್ತಮ ಉಳಿತಾಯ ಯೋಜನೆ ಯಾವುದು?

15 ಫೆಬ್ರವರಿ 2024: ಲುಯಿ-ನ್ಗೈ-ನಿ ಕಾರಣ ಈ ದಿನ ಮಣಿಪುರದಲ್ಲಿ ಬ್ಯಾಂಕ್ ರಜೆ ಇರುತ್ತದೆ.

18 ಫೆಬ್ರವರಿ 2024: ಈ ದಿನ ಭಾನುವಾರದ ಕಾರಣ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

19 ಫೆಬ್ರವರಿ 2024: ಈ ದಿನ, ಛತ್ರಪತಿ ಶಿವಾಜಿ ಜಯಂತಿಯ ಕಾರಣ ಮಹಾರಾಷ್ಟ್ರದಲ್ಲಿ ಬ್ಯಾಂಕ್ ರಜೆ ಇರುತ್ತದೆ.

20 ಫೆಬ್ರವರಿ 2024: ಈ ದಿನ, ರಾಜ್ಯ ದಿನದ ಕಾರಣ ಮಿಜೋರಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಬ್ಯಾಂಕ್ ರಜೆ ಇರುತ್ತದೆ.

24 ಫೆಬ್ರವರಿ 2024: ಎರಡನೇ ಶನಿವಾರದ ಕಾರಣ ಈ ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

25 ಫೆಬ್ರವರಿ 2024: ಭಾನುವಾರದ ಕಾರಣ ಈ ದಿನ ಬ್ಯಾಂಕ್‌ಗಳಿಗೆ ಸಾರ್ವಜನಿಕ ರಜೆ ಇರುತ್ತದೆ.

26 ಫೆಬ್ರವರಿ 2024: ನ್ಯೋಕಮ್ ಕಾರಣ ಈ ದಿನ ಅರುಣಾಚಲ ಪ್ರದೇಶದಲ್ಲಿ ಬ್ಯಾಂಕ್ ರಜೆ ಇರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News