m-aadhaar ಆಪ್‌ನಲ್ಲಿ ಅಗತ್ಯ ನಾಲ್ಕು ಅಂಕಿಯ ಸುರಕ್ಷತಾ ಪಿನ್

mAadhaar App Passcode: ಆಧಾರ್ ಲಾಕ್/ಅನ್‌ಲಾಕ್, ಬಯೋಮೆಟ್ರಿಕ್ ಲಾಕ್/ಅನ್‌ಲಾಕ್, VID ಜನರೇಟರ್, EKYC ನಂತಹ ಯಾವುದೇ ಆಧಾರ್ ಲಿಂಕ್ ಮಾಡಿದ ಸೇವೆಗೆ ಪಾಸ್‌ಕೋಡ್ ನಿಮಗೆ ಬೇಕಾಗುತ್ತದೆ. 

Written by - Yashaswini V | Last Updated : Sep 29, 2021, 07:40 AM IST
  • ಎಂ-ಆಧಾರ್ ಆಪ್ ಆಂಡ್ರಾಯ್ಡ್ ಮತ್ತು ಐಫೋನ್ ಎರಡಕ್ಕೂ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ನಿಂದ ಡೌನ್ಲೋಡ್ ಮಾಡಲು ಲಭ್ಯವಿದೆ
  • ಭದ್ರತೆಯ ದೃಷ್ಟಿಯಿಂದ ನೀವು ಅದರಲ್ಲಿ ನಾಲ್ಕು-ಅಂಕಿಯ ಭದ್ರತಾ ಪಾಸ್‌ಕೋಡ್ ಅನ್ನು ಹೊಂದಿಸಬೇಕು
  • ಯಾವುದೇ ಆಧಾರ್ ಲಿಂಕ್ ಮಾಡಿದ ಸೇವೆಗಾಗಿ ನಿಮಗೆ ಈ ಪಾಸ್‌ಕೋಡ್ ಅಗತ್ಯವಿದೆ
m-aadhaar ಆಪ್‌ನಲ್ಲಿ ಅಗತ್ಯ ನಾಲ್ಕು ಅಂಕಿಯ ಸುರಕ್ಷತಾ ಪಿನ್ title=
mAadhaar App Passcode: mAadhaar ಆಪ್‌ನಲ್ಲಿ ಪಾಸ್‌ಕೋಡ್ ಹೊಂದಿಸಲು ಇಲ್ಲಿದೆ ಸುಲಭ ಮಾರ್ಗ

mAadhaar App Passcode: ನೀವು  ಎಂ- ಆಧಾರ್ ಆಪ್ (mAadhaar App) ಮೂಲಕ ಆಧಾರ್‌ಗೆ ಸಂಬಂಧಿಸಿದ ಸೌಲಭ್ಯಗಳು ಅಥವಾ ಸೇವೆಗಳನ್ನು ಸಹ ಪಡೆಯಬಹುದು. ಈ ಅಪ್ಲಿಕೇಶನ್ ಒಂದು ಉತ್ತಮವಾದ ಅಪ್ಲಿಕೇಶನ್ ಆಗಿದೆ. ನೀವು ಈ ಆಪ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಬಳಸಬಹುದು. ಆದರೆ ಭದ್ರತೆಯ  ದೃಷ್ಟಿಯಿಂದ ನೀವು ಅದರಲ್ಲಿ ನಾಲ್ಕು-ಅಂಕಿಯ ಭದ್ರತಾ ಪಾಸ್‌ಕೋಡ್ ಅನ್ನು ಹೊಂದಿಸಬೇಕು. ಆಧಾರ್ ಲಾಕ್/ಅನ್‌ಲಾಕ್, ಬಯೋಮೆಟ್ರಿಕ್ ಲಾಕ್/ಅನ್‌ಲಾಕ್, ವಿಐಡಿ ಜನರೇಟರ್, ಇಕೆವೈಸಿ ಮುಂತಾದ ಯಾವುದೇ ಆಧಾರ್ ಲಿಂಕ್ ಮಾಡಿದ ಸೇವೆಗಾಗಿ ನಿಮಗೆ ಈ ಪಾಸ್‌ಕೋಡ್ ಅಗತ್ಯವಿದೆ. 

ನಾಲ್ಕು ಅಂಕಿಯ ಪಾಸ್‌ಕೋಡ್ ಮಾಡುವುದು ಹೇಗೆ ?
ಎಂ-ಆಧಾರ್ ಆಪ್‌ನಲ್ಲಿ (mAadhaar App) ನಾಲ್ಕು-ಅಂಕಿಯ ಪಾಸ್‌ಕೋಡ್ ಅನ್ನು ರಚಿಸಲು, ಬಳಕೆದಾರರು 'ನನ್ನ ಆಧಾರ್ ನೋಂದಾಯಿಸಿ' ಕ್ಲಿಕ್ ಮಾಡಿ ಮತ್ತು ನಾಲ್ಕು-ಅಂಕಿಯ ಪಾಸ್‌ವರ್ಡ್ ಅನ್ನು ರಚಿಸಬೇಕು. ಎಂ-ಆಧಾರ್ ಆಪ್ ಆಂಡ್ರಾಯ್ಡ್ ಮತ್ತು ಐಫೋನ್ ಎರಡಕ್ಕೂ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ನಿಂದ ಡೌನ್ಲೋಡ್ ಮಾಡಲು ಲಭ್ಯವಿದೆ. 

ಇದನ್ನೂ ಓದಿ- mAadhaar App: ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಈ 35 ಕೆಲಸಗಳನ್ನು ಮನೆಯಿಂದಲೇ ಮಾಡಬಹುದು, ಇಲ್ಲಿದೆ ಮಾರ್ಗ

ಇದನ್ನು ಆಪ್‌ನಲ್ಲಿ ನೋಂದಾಯಿಸಬೇಕು : 
ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಮತ್ತು ಅನುಸ್ಥಾಪನೆಯು ಪೂರ್ಣಗೊಂಡ ನಂತರ, ಟರ್ಮ್ಸ್ ಅಂಡ್ ಕಂಡಿಷನ್ಸ್ ಅನ್ನು ಒಮ್ಮೆ ಓದಿ ಒಪ್ಪಿಗೆ ಸೂಚಿಸಿ. ಬಳಿಕ ಎಂಆಧಾರ್  (mAadhaar) ಅಪ್ಲಿಕೇಶನ್‌ನ ಬಳಕೆಯನ್ನು ಆರಂಭಿಸಬಹುದು. ಆಪ್ ಓಪನ್ ಮಾಡಿದ ಮೇಲೆ, ನೀವು ಭಾಷೆಯನ್ನು ಆಯ್ಕೆ ಮಾಡಿಕೊಂಡು ಮುಂದುವರಿಯಬೇಕು. ಈಗ, ಬಳಕೆದಾರರು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಇದನ್ನು ಮಾಡಿದ ನಂತರ, ಬಳಕೆದಾರರು ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP (ಒನ್ ಟೈಮ್ ಪಾಸ್‌ವರ್ಡ್) ಪಡೆಯಲಾಗುವುದು. ಅದನ್ನು OTP ಸ್ಥಳದಲ್ಲಿ ನಮೂದಿಸಿ. ಒಮ್ಮೆ mAadhaar ಅಪ್ಲಿಕೇಶನ್ ಅನ್ನು ಸ್ಥಾಪಿಸಿದ ನಂತರ, ಬಳಕೆದಾರರು ಆಧಾರ್ ಲಿಂಕ್ ಮಾಡಿದ ಸೇವೆಗಳನ್ನು mAadhaar ಅಪ್ಲಿಕೇಶನ್‌ನಿಂದ ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ- Aadhaar Card update: ಮೊಬೈಲ್ ಸಂಖ್ಯೆ ರಿಜಿಸ್ಟರ್ ಮಾಡದೆ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿ, ಹೇಗೆಂದು ತಿಳಿಯಿರಿ…

m ಆಧಾರ್ ಆಪ್ ಅನ್ನು ಎಲ್ಲಿ ಬೇಕಾದರೂ ಬಳಸಬಹುದು:
mAadhaar ಅಪ್ಲಿಕೇಶನ್ ಅನ್ನು ಭಾರತದಲ್ಲಿ ಎಲ್ಲಿಯಾದರೂ ಯಾವಾಗ ಬೇಕಾದರೂ ಬಳಸಬಹುದು. ಇದು ವ್ಯಾಲೆಟ್ ನಲ್ಲಿರುವ ಆಧಾರ್ ಕಾರ್ಡ್ ಗಿಂತ ಹೆಚ್ಚು. ಒಂದೆಡೆ, ಎಂ-ಆಧಾರ್ ಪ್ರೊಫೈಲ್ ಅನ್ನು ವಿಮಾನನಿಲ್ದಾಣವು ಮಾನ್ಯ ಐಡಿ ಪ್ರೂಫ್ ಆಗಿ ಸ್ವೀಕರಿಸುತ್ತದೆ ಮತ್ತು ಮತ್ತೊಂದೆಡೆ, ರೈಲ್ವೆಗಳು ತಮ್ಮ ಇಕೆವೈಸಿ ಅಥವಾ ಕ್ಯೂಆರ್ ಕೋಡ್ ಅನ್ನು ಆಧಾರ್ ಸೇವೆಗಳನ್ನು ಒದಗಿಸಿದ ಸೇವಾ ಪೂರೈಕೆದಾರರೊಂದಿಗೆ ಹಂಚಿಕೊಳ್ಳಲು ಅಪ್ಲಿಕೇಶನ್‌ನಲ್ಲಿನ ವೈಶಿಷ್ಟ್ಯಗಳನ್ನು ಬಳಸಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News