ಏಪ್ರಿಲ್ ನಿಂದ ಹೆಚ್ಚಾಗಲಿದೆ ಪಿಎಂ ಕಿಸಾನ್ ಹಣ.! 6000 ರೂಪಾಯಿ ಬದಲು ಇಷ್ಟಾಗುವುದು ಮೊತ್ತ

PM Kisan Samman Nidhi:ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ರೈತರಿಗೆ ಭರ್ಜರಿ ಗಿಫ್ಟ್ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ರೈತರ ಪಿಎಂ ಕಿಸಾನ್ ನಿಧಿ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಈ ಬಜೆಟ್ ನಲ್ಲಿ ಘೋಷಿಸಬಹುದು ಎನ್ನಲಾಗಿದೆ.

Written by - Ranjitha R K | Last Updated : Jan 10, 2023, 04:14 PM IST
  • ಬಜೆಟ್ ಮೇಲೆ ರೈತರ ನಿರೀಕ್ಷೆ
  • ಎಲ್ಲರ ದೃಷ್ಟಿ ವಿತ್ತ ಸಚಿವೆಯತ್ತ
  • ರೈತರ ಪಾಲಿಗೆ ಸಿಗಲಿದೆ ಸಿಹಿ ಸುದ್ದಿ
ಏಪ್ರಿಲ್ ನಿಂದ ಹೆಚ್ಚಾಗಲಿದೆ ಪಿಎಂ ಕಿಸಾನ್ ಹಣ.! 6000 ರೂಪಾಯಿ ಬದಲು ಇಷ್ಟಾಗುವುದು ಮೊತ್ತ  title=

PM Kisan Samman Nidhi : ಫೆಬ್ರವರಿ 1, 2023 ರಂದು ಮಂಡಿಸಲಿರುವ ಮುಂಬರುವ ಬಜೆಟ್‌ ಮೇಲೆ ಉದ್ಯೋಗಸ್ಥರು ಮತ್ತು ರೈತರು  ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಾರಿ ಎಲ್ಲರ ದೃಷ್ಟಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಘೋಷಣೆಗಳತ್ತ ನೆಟ್ಟಿದೆ. 2024 ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಅನೇಕ ಜನಪರ ಭರವಸೆಗಳನ್ನು ನೀಡುವ ನಿರೀಕ್ಷೆ ಇದೆ. 

ರೈತರ ಪಾಲಿಗೆ ಸಿಗಲಿದೆ ಸಿಹಿ ಸುದ್ದಿ : 
ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ರೈತರಿಗೆ ಭರ್ಜರಿ ಗಿಫ್ಟ್ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ರೈತರ ಪಿಎಂ ಕಿಸಾನ್ ನಿಧಿ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಜೆಟ್ ನಲ್ಲಿ ಘೋಷಿಸಬಹುದು ಎನ್ನಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ರೈತರಿಗೆ ಪ್ರಸ್ತುತ ವರ್ಷಕ್ಕೆ 6 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಈ ಮೊತ್ತವನ್ನು ಮೂರು ಕಂತುಗಳಲ್ಲಿ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಆದರೆ ಈ ಬಜೆಟ್ ನಲ್ಲಿ ಈ ಮೊತ್ತವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿದೆ. 

ಇದನ್ನೂ ಓದಿ : ಈ ಬಾರಿ ಆದಾಯ ತೆರಿಗೆಯ ಬದಲು ವೇತನ ವರ್ಗಕ್ಕೆ ಈ ವಿಭಾಗದಲ್ಲಿ ಸಿಗಲಿದೆ ವಿನಾಯಿತಿ

3ರ ಬದಲು 4 ಕಂತುಗಳಲಿ ಬಿಡುಗಡೆಯಾಗುವುದು ಹಣ: 
ಇಲ್ಲಿಯವರೆಗೆ ರೈತರಿಗೆ ಮೂರು ಕಂತುಗಳಲ್ಲಿ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಇದನ್ನು 4 ಕಂತುಗಳಿಗೆ ಏರಿಸಲಾಗುವುದು ಎನ್ನಲಾಗಿದೆ.  ಅಂದರೆ ಈಗ ರೈತರ ಖಾತೆಗೆ 6 ಸಾವಿರ ರೂಪಾಯಿಗಳನ್ನು ವರ್ಷಕ್ಕೆ ವರ್ಗಾಯಿಸಲಾಗುವುದು. ನಾಲ್ಕು ಕಂತುಗಳಲ್ಲಿ 2 ಸಾವಿರ ರೂಪಾಯಿ ವರ್ಗಾಯಿಸಿದರೆ ಈ ಮೊತ ವರ್ಷಕ್ಕೆ 8 ಸಾವಿರ ರೂಪಾಯಿ ಆಗಿರಲಿದೆ.  

ಪಿಎಂ ಕಿಸಾನ್ ಸಮ್ಮಾನ್ ನಿಧಿಯ 13 ನೇ ಕಂತು ಜನವರಿ 2023 ರಲ್ಲಿ ರೈತರ ಖಾತೆ ಸೇರುವ ನಿರೀಕ್ಷೆ ಇದೆ. ಈ ಹಿಂದೆ 12 ಕಂತುಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗಿದೆ. ಬೀಜ ಮತ್ತು ರಸಗೊಬ್ಬರಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿರುವ ಕಾರಣ ರೈತರಿಗೆ ಹಣದ ಅವಶ್ಯಕತೆ ಕೂಡಾ ಇದೆ. ಪಿಎಂ ಕಿಸಾನ್ ಮೊತ್ತವನ್ನು ಹೆಚ್ಚಿಸಿದರೆ, ಏಪ್ರಿಲ್‌ನಲ್ಲಿ ರೈತರ ಖಾತೆಗೆ ಮತ್ತೆ  2000 ರೂ  ವರ್ಗಾವಣೆಯಾಗಲಿದೆ. 

ಇದನ್ನೂ ಓದಿ : ಹೊಸ ವರ್ಷದಲ್ಲಿ ಕೇವಲ 5 ಲಕ್ಷ ರೂ.ಗಳಿಗೆ ಲಭ್ಯವಾಗುತ್ತಿದೆ ಮಾರುತಿ ಬಲೆನೊ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News