Gold Price Today : ಹೊಸ ಹಣಕಾಸು ವರ್ಷದ ಬಜೆಟ್ ಮಂಡನೆಯಾದ ಮರುದಿನವೇ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಬಜೆಟ್ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ದುಬಾರಿಯಾಗಿದ್ದವು. ಗುರುವಾರ ಕೂಡಾ ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯಲ್ಲಿಯೂ ಭಾರೀ ಏರಿಕೆ ಕಂಡು ಬಂಡಿದೆ. ಈ ಟ್ರೆಂಡ್ ನೋಡಿದರೆ ಬುಲಿಯನ್ ಮಾರುಕಟ್ಟೆಯಲ್ಲೂ ಏರು ಪೇರು ಆಗುವ ಎಲ್ಲಾ ಸಾಧ್ಯತೆ ಇದೆ.
ಭರ್ಜರಿ ಏರಿಕೆ ಕಂಡ ಚಿನ್ನ ಬೆಳ್ಳಿ ಬೆಲೆ :
ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನ 675 ರೂಪಾಯಿ ಏರಿಕೆಯೊಂದಿಗೆ 58560 ರೂಪಾಯಿ ಮಟ್ಟವನ್ನು ತಲುಪಿದೆ. ಇನ್ನು ಬೆಳ್ಳಿ ಬೆಲೆ ಕೆ.ಜಿಗೆ 1,528 ರೂ.ಗಳ ಏರಿಕೆಯೊಂದಿಗೆ 71369 ರೂ. ಮಟ್ಟದಲ್ಲಿ ವಹಿವಾತು ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ : ಹೊಸ ಆದಾಯ ತೆರಿಗೆ ಸ್ಲ್ಯಾಬ್ ಟೇಕ್ ಹೋಂ ಸ್ಯಾಲರಿ ಮೇಲೆ ಬೀರುವ ಪರಿಣಾಮ ಏನು ?
ಬುಲಿಯನ್ ಮಾರುಕಟ್ಟೆ ಬೆಲೆ :
ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಇಂಡಿಯಾ ಬುಲಿಯನ್ಸ್ ಅಸೋಸಿಯೇಷನ್ ( https://ibjarates.com ) ಪ್ರಕಾರ ಬುಧವಾರ ಸಂಜೆ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 57,910 ರೂ. ಮತ್ತು ಬೆಳ್ಳಿ ಕೆಜಿಗೆ 69,445 ರೂ.ಆಗಿತು. ಅದೇ ರೀತಿ, 23 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 57,678 ರೂ., 22 ಕ್ಯಾರೆಟ್ 10 ಗ್ರಾಂಗೆ 53,046 ರೂ. ಮತ್ತು 18 ಕ್ಯಾರೆಟ್ 10 ಗ್ರಾಂಗೆ 43,433 ರೂ.ಗೆ ತಲುಪಿದೆ.
ಇದನ್ನೂ ಓದಿ : ಕೇಂದ್ರ ಬಜೆಟ್‌ನಲ್ಲಿ ಸಿಂಹಪಾಲು ಪಡೆದ ರಕ್ಷಣಾ ಇಲಾಖೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.