Edible Oil Price: ಖಾದ್ಯ ತೈಲ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ ಈ ರಾಜ್ಯ ಸರ್ಕಾರ, ಇಲ್ಲಿದೆ ಲೇಟೆಸ್ಟ್ ದರ

Mustard Oil Price Update: ರಾಜ್ಯ ಸರ್ಕಾರವು ಸಾಸಿವೆ ಎಣ್ಣೆಯ ಬೆಲೆಯನ್ನು ಲೀಟರ್‌ಗೆ 37 ರೂ.ಗಳಷ್ಟು ಕಡಿಮೆ ಮಾಡಿದೆ, ಅಂದರೆ ಇದೀಗ ರಾಜ್ಯದ ಜನತೆಗೆ ಅಡುಗೆಗಾಗಿ ಅಗ್ಗದ ಎಣ್ಣೆ ಸಿಗಲಿದೆ.   

Written by - Nitin Tabib | Last Updated : Jun 2, 2023, 07:59 PM IST
  • ಈಗ ಫಲಾನುಭವಿಗಳಿಗೆ ಸಾಸಿವೆ ಎಣ್ಣೆಯನ್ನು ಲೀಟರ್‌ಗೆ ಸುಮಾರು ರೂ.37 ರಷ್ಟು ಕಡಿಮೆಗೊಳಿಸಲಾಗುವುದು ಎಂದು ಹಿಮಾಚಲ ಸಿಎಂ ಹೇಳಿದ್ದಾರೆ.
  • ಅಂತ್ಯೋದಯ ಅನ್ನ ಯೋಜನೆ ಅಡಿಯಲ್ಲಿ, ಜೂನ್ 2023 ಕ್ಕಿಂತ ಮೊದಲು, ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಫಲಾನುಭವಿಗಳಿಗೆ ಸಾಸಿವೆ ಎಣ್ಣೆ ಲೀಟರ್‌ಗೆ ರೂ 142 ನಂತೆ
  • ಮತ್ತು ಬಡತನ ರೇಖೆಗಿಂತ ಮೇಲಿನ (ಎಪಿಎಲ್) ಫಲಾನುಭವಿಗಳು ಲೀಟರ್‌ಗೆ ರೂ 147 ದರದಂತೆ ಸಾಸಿವೆ ಎಣ್ಣೆ ಸಿಗುತ್ತಿತ್ತು.
Edible Oil Price: ಖಾದ್ಯ ತೈಲ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ ಈ ರಾಜ್ಯ ಸರ್ಕಾರ, ಇಲ್ಲಿದೆ ಲೇಟೆಸ್ಟ್ ದರ title=

Mustard Oil Latest Price: ಪ್ರಸ್ತುತ ದೇಶಾದ್ಯಂತ ಸಾಸಿವೆ ಎಣ್ಣೆಯ ಬೆಲೆ ಗಗನಕ್ಕೇರುತ್ತಿದೆ. ಅನೇಕ ನಗರಗಳಲ್ಲಿ ಸಾಸಿವೆ ಎಣ್ಣೆಯ ಬೆಲೆ ಲೀಟರ್‌ಗೆ 150 ರಿಂದ 180 ರೂ.ಗಳಷ್ಟಿದೆ. ಇವೆಲ್ಲವುಗಳ ನಡುವೆ ಸಾಸಿವೆ ಎಣ್ಣೆ ಸೇವಿಸುವ ಮಂದಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟವಾಗಿದೆ. ಹಿಮಾಚಲ ಪ್ರದೇಶದ ರಾಜ್ಯ ಸರ್ಕಾರವು ಸಾಸಿವೆ ಎಣ್ಣೆಯ ಬೆಲೆಯನ್ನು ಲೀಟರ್‌ಗೆ 37 ರೂ.ಗಳಷ್ಟು ಕಡಿಮೆ ಮಾಡಿದೆ, ಅಂದರೆ ಇನ್ಮುಂದೆ ರಾಜ್ಯದ ಜನತೆಗೆ ಅಡುಗೆಗಾಗಿ ಅಗ್ಗದ ದರದಲ್ಲಿ ಸಾಸಿವೆ ಎಣ್ಣೆ ಸಿಗಲಿದೆ ಎಂದರ್ಥ. 

ಹಿಮಾಚಲ ಸಿಎಂ ಘೋಷಣೆ
ಹಿಮಾಚಲ ಪ್ರದೇಶದಲ್ಲಿ ನೆಲೆಸಿರುವ ಜನರಿಗೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಹೌದು ಇನ್ಮುಂದೆ ಅಲ್ಲಿನ ಜನರಿಗೆ ಕೇವಲ 110 ರೂ.ಗೆ ಲೀಟರ್ ಸಾಸಿವೆ ಎಣ್ಣೆ ಸಿಗಲಿದೆ. ಪಡಿತರ ಅಂಗಡಿಗಳ ಮೂಲಕ ಪ್ರತಿ ಲೀಟರ್‌ಗೆ 110 ರೂಪಾಯಿ ದರದಲ್ಲಿ ಸಾಸಿವೆ ಎಣ್ಣೆಯನ್ನು ಜನರಿಗೆ ಲಭ್ಯವಾಗುವಂತೆ ಮಾಡಲು ಹಿಮಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಶುಕ್ರವಾರ ಹೇಳಿದ್ದಾರೆ.

ತೈಲ ಬೆಲೆಯಲ್ಲಿ 37 ರೂ. ಇಳಿಕೆ
ಈಗ ಫಲಾನುಭವಿಗಳಿಗೆ ಸಾಸಿವೆ ಎಣ್ಣೆಯನ್ನು ಲೀಟರ್‌ಗೆ ಸುಮಾರು ರೂ.37 ರಷ್ಟು ಕಡಿಮೆಗೊಳಿಸಲಾಗುವುದು ಎಂದು ಹಿಮಾಚಲ ಸಿಎಂ ಹೇಳಿದ್ದಾರೆ. ಅಂತ್ಯೋದಯ ಅನ್ನ ಯೋಜನೆ ಅಡಿಯಲ್ಲಿ, ಜೂನ್ 2023 ಕ್ಕಿಂತ ಮೊದಲು, ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಫಲಾನುಭವಿಗಳಿಗೆ ಸಾಸಿವೆ ಎಣ್ಣೆ ಲೀಟರ್‌ಗೆ ರೂ 142 ನಂತೆ ಮತ್ತು ಬಡತನ ರೇಖೆಗಿಂತ ಮೇಲಿನ (ಎಪಿಎಲ್) ಫಲಾನುಭವಿಗಳು ಲೀಟರ್‌ಗೆ ರೂ 147 ದರದಂತೆ ಸಾಸಿವೆ ಎಣ್ಣೆ ಸಿಗುತ್ತಿತ್ತು.

ಇದನ್ನೂ ಓದಿ-Share Market Update: ಸತತ ಎರಡು ದಿನಗಳ ಕುಸಿತಕ್ಕೆ ಬಿತ್ತು ಬ್ರೇಕ್, ಲೋಹ-ಆಟೋ ಸೇಕ್ಟರ್ ಗಳಲ್ಲಿ ಭಾರಿ ಖರೀದಿ

ಮುಖ್ಯಮಂತ್ರಿ ಹೇಳಿದ್ದೇನು
ಸಮಾಜದ ಎಲ್ಲ ವರ್ಗದವರಿಗೂ ಪರಿಹಾರ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ 19,74790 ಪಡಿತರ ಚೀಟಿದಾರರಿದ್ದಾರೆ. ಅವರಿಗೆ 5,197 ಅಗ್ಗದ ಧಾನ್ಯದ ಅಂಗಡಿಗಳಿಂದ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ-ICICI ಹಾಗೂ ಪಿಎನ್ಬಿ ಗ್ರಾಹಕರಿಗೊಂದು ಶಾಕಿಂಗ್ ಸುದ್ದಿ, ಹೆಚ್ಚಾಗಲಿದೆ ಇಎಂಐ ಹೊರೆ

ಚಿಲ್ಲರೆ ಮಾರುಕಟ್ಟೆಯಲ್ಲಿ ಗರಿಷ್ಠ ಚಿಲ್ಲರೆ ಬೆಲೆಯನ್ನು (ಎಂಆರ್‌ಪಿ) ಇನ್ನೂ ಹೆಚ್ಚಿರುವ ಕಾರಣ ಗ್ರಾಹಕರು ದುಬಾರಿ ಬೆಲೆಗೆ ಖಾದ್ಯ ತೈಲವನ್ನು ಖರೀದಿಸಬೇಕಾಗುತ್ತದೆ. ಬಂದರಿನಲ್ಲಿ ಸೂರ್ಯಕಾಂತಿ ಸಗಟು ಬೆಲೆ ಲೀಟರ್‌ಗೆ 69 ರೂ.ಗಳಿದ್ದರೂ, ಅದೇ ಸೂರ್ಯಕಾಂತಿ ಎಣ್ಣೆಯು ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ 196 ರೂ.ಗೆ ಮಾರಾಟವಾಗುವ ಸ್ಥಿತಿ ಇದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News