ನಿಮ್ಮ ಬಳಿ ಕೇವಲ 20 ಸಾವಿರ ಹೂಡಿಕೆ ಇದ್ದರೆ ಸಾಕು, ಈ ಉದ್ಯಮ ಆರಂಭಿಸಿ ನೀವೂ ಕೂಡ ಸ್ವಾವಲಂಭಿಯಾಗಬಹುದು!

Busines Concept: ನೀವೂ ಕೂಡ ಅತ್ಯಂತ ಕಡಿಮೆ ಹೂಡಿಕೆಯಲ್ಲಿ ನಿಮ್ಮ ಸ್ವಂತ ವ್ಯವಸಾಯವನ್ನು ಮಾಡಲು ಬಯಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ಇಂದು ನಾವು ನಿಮಗೆ ಹೇಳಲು ಹೊರಟಿರುವ ವ್ಯವಸಾಯದ ಪರಿಕಲ್ಪನೆಯಲ್ಲಿ ನೀವು ಅತ್ಯಂತ ಕಡಿಮೆ ಹೂಡಿಕೆಯನ್ನು ಮಾಡಿ ಲಕ್ಷಾಂತರ ಆದಾಯ ಗಳಿಕೆ ಮಾಡಬಹುದು.   

Written by - Nitin Tabib | Last Updated : Sep 2, 2023, 11:13 PM IST
  • ನೀವು ಕೂಡ ಕಡಿಮೆ ಬಂಡವಾಳದೊಂದಿಗೆ ಈ ವ್ಯವಸಾಯವನ್ನು ಪ್ರಾರಂಭಿಸಬಹುದು.
  • ಆದರೆ, ಈ ವ್ಯವಸಾಯದಲ್ಲಿ ಲಾಭ ಗಳಿಸಲು ನಿಮಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಏಕೆಂದರೆ ಬೋನ್ಸಾಯ್ ಗಿಡ ಸಿದ್ಧವಾಗಲು ಕನಿಷ್ಠ ಎರಡರಿಂದ ಐದು ವರ್ಷ ಬೇಕು.
  • ಇದಲ್ಲದೇ ನರ್ಸರಿಯಿಂದ ಸಿದ್ಧವಾದ ಗಿಡಗಳನ್ನು ತಂದು ಶೇ.30 ರಿಂದ 50ರಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು.
ನಿಮ್ಮ ಬಳಿ ಕೇವಲ 20 ಸಾವಿರ ಹೂಡಿಕೆ ಇದ್ದರೆ ಸಾಕು, ಈ ಉದ್ಯಮ ಆರಂಭಿಸಿ ನೀವೂ ಕೂಡ ಸ್ವಾವಲಂಭಿಯಾಗಬಹುದು! title=

ಬೆಂಗಳೂರು: ನೀವೂ ಕೂಡ ಅತ್ಯಂತ ಕಡಿಮೆ ಹೂಡಿಕೆಯಲ್ಲಿ ನಿಮ್ಮ ಸ್ವಂತ ವ್ಯವಸಾಯವನ್ನು ಮಾಡಲು ಬಯಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ಇಂದು ನಾವು ನಿಮಗೆ ಹೇಳಲು ಹೊರಟಿರುವ ವ್ಯವಸಾಯದ ಪರಿಕಲ್ಪನೆಯಲ್ಲಿ ನೀವು ಅತ್ಯಂತ ಕಡಿಮೆ ಹೂಡಿಕೆಯನ್ನು ಮಾಡಿ ಲಕ್ಷಾಂತರ ಆದಾಯ ಗಳಿಕೆ ಮಾಡಬಹುದು. ಇಂದು ನಾವು ನಿಮಗೆ ಒಂದು ವಿಶೇಷ ಸಸ್ಯದ ಕೃಷಿಯ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ಸಸ್ಯದ ಕೃಷಿಗೆ ಕೇಂದ್ರ ಸರ್ಕಾರವೂ ಕೂಡ ನಿಮಗೆ ಆರ್ಥಿಕ ನೆರವು ನೀಡುತ್ತದೆ. 

ಬೋನ್ಸಾಯಿ ಪ್ಲಾಂಟ್ ಒಂದು ವಿಧದ ಸಸ್ಯವಾಗಿದ್ದು, ಈ ಸಸ್ಯವನ್ನು ಗುಡ್ ಲಕ್ ಪ್ಲಾಂಟ್ ಎಂದೂ ಕೂಡ ಹೇಳಲಾಗುತ್ತದೆ. ಈ ಸಸ್ಯ ಕೃಷಿ ಮೂಲಕ ನೀವು ಒಳ್ಳೆಯ ಆದಾಯ ಗಳಿಕೆ ಮಾಡಬಹುದು. ಈ ಸಸ್ಯದ ಕೃಷಿಯನ್ನು ಹೇಗೆ ಮಾಡಬೇಕು ತಿಳಿದುಕೊಳ್ಳೋಣ ಬನ್ನಿ. ಇನ್ನೊಂದು ಮಹತ್ವದ ವಿಷಯವೆಂದರೆ ಈ ಕೃಷಿ ಮಾಡಲು ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೂಡ ನಿಮಗೆ ಸಹಾಯ ಮಾಡುತ್ತದೆ. 

ಬೋನ್ಸಾಯ್ ಪ್ಲಾಂಟ್ ಅನ್ನು ಅದೃಷ್ಟದ ಸಸ್ಯವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆ ಮತ್ತು ಕಚೇರಿಯಲ್ಲಿ ಅಲಂಕಾರಕ್ಕಾಗಿಯೂ ಬಳಸಲಾಗುತ್ತದೆ. ಹೀಗಾಗಿ ಇತ್ತೀಚಿನ ದಿನಗಳಲಿ ದಿನಗಳಲ್ಲಿ ಅವುಗಳ ಬೇಡಿಕೆ ತುಂಬಾ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಈ ಗಿಡಗಳ ಬೆಲೆ 200 ರಿಂದ ಸುಮಾರು 2500 ರೂ. ಇದೆ. ಇದಲ್ಲದೆ, ಬೋನ್ಸಾಯ್ ಸಸ್ಯವನ್ನು ಇಷ್ಟಪಡುವ ಜನರು ಅದೃಷ್ಟಕ್ಕಾಗಿ ಕೇಳಿದ ಬೆಲೆಯನ್ನು ಪಾವತಿಸಲು ಸಿದ್ಧರಾಗಿರುತ್ತಾರೆ. 

ನೀವು ಕೂಡ ಕಡಿಮೆ ಬಂಡವಾಳದೊಂದಿಗೆ ಈ ವ್ಯವಸಾಯವನ್ನು ಪ್ರಾರಂಭಿಸಬಹುದು. ಆದರೆ, ಈ ವ್ಯವಸಾಯದಲ್ಲಿ ಲಾಭ ಗಳಿಸಲು ನಿಮಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಏಕೆಂದರೆ ಬೋನ್ಸಾಯ್ ಗಿಡ ಸಿದ್ಧವಾಗಲು ಕನಿಷ್ಠ ಎರಡರಿಂದ ಐದು ವರ್ಷ ಬೇಕು. ಇದಲ್ಲದೇ ನರ್ಸರಿಯಿಂದ ಸಿದ್ಧವಾದ ಗಿಡಗಳನ್ನು ತಂದು ಶೇ.30 ರಿಂದ 50ರಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. 

ಈ ವ್ಯವಸಾಯವನ್ನು ಪ್ರಾರಂಭಿಸಲು, ನಿಮಗೆ ಶುದ್ಧ ನೀರು, ಮರಳು ಮಣ್ಣು ಅಥವಾ ಮರಳು, ಮಡಕೆಗಳು ಮತ್ತು ಗಾಜಿನ ಮಡಕೆಗಳು, ನೆಲ ಅಥವಾ ಮೇಲ್ಛಾವಣಿಯ ಮೇಲೆ 100 ರಿಂದ 150 ಚದರ ಅಡಿ ಜಾಗ, ಕ್ಲೀನ್ ಪೆಬಲ್ಸ್ ಅಥವಾ ಗಾಜಿನ ಕಲ್ಲುಗಳು, ತೆಳುವಾದ ತಂತಿ, ಗಿಡಗಳ ಮೇಲೆ ನೀರನ್ನು ಚಿಮುಕಿಸಲು ಸ್ಪ್ರೇ ಬಾಟಲ್ ಅಗತ್ಯವಿದೆ. ಯಾರ ಜೊತೆಗೆ ಶೆಡ್ ಮಾಡಲು ಲ್ಯಾಟಿಸ್ ಅವಶ್ಯಕತೆ ಇರುತ್ತದೆ. ನೀವು ಈ ವ್ಯವಹಾರವನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದರೆ, ಸುಮಾರು 5 ಸಾವಿರ ರೂಪಾಯಿಗಳ ಹೂಡಿಕೆ ಇರುತ್ತದೆ.ಇದೇ ವೇಳೆ ನೀವು ನೀವು ನಿಮ್ಮ ವ್ಯವಸಾಯದ ಸ್ಕೇಲ್ ಅನ್ನು ಸ್ವಲ್ಪ ಹೆಚ್ಚಿಸಿದರೆ, ಅದು 20 ಸಾವಿರ ರೂಪಾಯಿಗಳವರೆಗೆ ವೆಚ್ಚವಾಗುತ್ತದೆ.

ಇದನ್ನೂ ಓದಿ-ಇದೆ ತಿಂಗಳ ಕೊನೆಯಲ್ಲಿ ಸರ್ಕಾರಿ ನೌಕರರ ವೇತನದಲ್ಲಿ 27000 ರೂ.ಗಳ ಬಂಪರ್ ಹೆಚ್ಚಳ!

ಬೋನ್ಸಾಯ್ ಗಿಡದ ಬೇಸಾಯಕ್ಕೆ ಮೂರು ವರ್ಷಗಳಲ್ಲಿ ಪ್ರತಿ ಗಿಡಕ್ಕೆ ಸರಾಸರಿ 240 ರೂ. ವೆಚ್ಚವಾಗಲಿದ್ದು, ಇದರಲ್ಲಿ ಪ್ರತಿ ಗಿಡಕ್ಕೆ 120 ರೂ.ನಂತೆ  ಸರ್ಕಾರ ನಿಮಗೆ ಸಹಾಯ ನೀಡುತ್ತದೆ. ಈಶಾನ್ಯದ ರಾಜ್ಯಗಳನ್ನು ಹೊರತುಪಡಿಸಿ, ಇತರ ಪ್ರದೇಶಗಳಲ್ಲಿ ಬೋನ್ಸಾಯಿ ಕೃಷಿಗೆ ಸರ್ಕಾರದಿಂದ ಶೇ. 50ರಷ್ಟು ಸಹಾಯ ಸಿಗುತ್ತದೆ. ಈ 50 ರಷ್ಟು ಸರ್ಕಾರದ ಪಾಲಿನಲ್ಲಿ ಶೇ 60 ರಷ್ಟು ಕೇಂದ್ರ ಮತ್ತು ಶೇ. 40 ರಷ್ಟು ರಾಜ್ಯ ಸರ್ಕಾರದ ಪಾಲು ಇರಲಿದೆ. ಇದೆ ವೇಳೆ  ಈಶಾನ್ಯ ಭಾಗದಲ್ಲಿ, ಶೇ. ಸರ್ಕಾರವು 60 ರಷ್ಟು ಸಹಾಯಧನ ಒದಗಿಸುತ್ತದೆ. ಇದರಲ್ಲಿಯೂ ಸರ್ಕಾರದ ಶೇ.90ರಷ್ಟು ಹಣವನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ ಹಾಗೂ ಶೇ.10ರಷ್ಟು ರಾಜ್ಯ ಸರ್ಕಾರ ಭರಿಸುತ್ತದೆ. ಜಿಲ್ಲೆಯ ನೋಡಲ್ ಅಧಿಕಾರಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ.

ಇದನ್ನೂ ಓದಿ-ಪತ್ನಿಯ ಹೆಸರಿನಲ್ಲಿ ಈ ಖಾತೆ ತೆರೆದು ತಿಂಗಳಿಗೆ ₹47,066 ಸಂಪಾದಿಸಿ, ಜೊತೆಗೆ ಒಟ್ಟಿಗೆ 1,05,89,741 ಪಡೆಯಿರಿ!

ಬೋನ್ಸಾಯ್‌ ಗಿಡಗಳ ಅಗತ್ಯತೆ  ಮತ್ತು ಜಾತಿಗಳನ್ನು ಆಧರಿಸಿ, ನೀವು ಒಂದು ಹೆಕ್ಟೇರ್‌ನಲ್ಲಿ 1500 ರಿಂದ 2500 ಸಸ್ಯಗಳನ್ನು ನೆಡಬಹುದು. ನೀವು 3 x 2.5 ಮೀಟರ್‌ನಲ್ಲಿ ಸಸಿ ನೆಟ್ಟರೆ, ಒಂದು ಹೆಕ್ಟೇರ್‌ನಲ್ಲಿ ಸುಮಾರು 1500 ಗಿಡಗಳನ್ನು ನೆಡಬಹುದು. ಅಷ್ಟೇ ಅಲ್ಲ ಎರಡು ಗಿಡಗಳ ಮಧ್ಯೆ ಉಳಿದಿರುವ ಜಾಗದಲ್ಲಿ ಬೇರೊಂದು ಬೆಳೆಯನ್ನು ನೀವು ಬೆಳೆಯಬಹುದು. ಈ ವ್ಯವಸಾಯದಿಂದ ನೀವು 4 ವರ್ಷಗಳ ನಂತರ ರೂ 3 ರಿಂದ 3.5 ಲಕ್ಷ ಗಳಿಸಲು ಪ್ರಾರಂಭಿಸುವಿರಿ. ವಿಶೇಷವೆಂದರೆ ಬಿದಿರಿನ ಸಸ್ಯವು ಸುಮಾರು 40 ವರ್ಷಗಳವರೆಗೆ ಬಾಳಿಕೆ ಬರುವ ಕಾರಣ ನೀವು ಪ್ರತಿ ವರ್ಷ ಕಸಿ ಮಾಡುವ ಅಗತ್ಯವಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News