AR Rahman Divorce Rumors: ಮೊನ್ನೆ ಮೊನ್ನೆಯಷ್ಟೇ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ 29 ವರ್ಷಗಳ ದಾಂಪತ್ಯ ಕೊನೆಗೊಂಡಿದೆ. ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ಪರಸ್ಪರ ಒಪ್ಪಿ ವಿಚ್ಛೇದನ ಪಡೆದಿದ್ದಾರೆ. ಈ ನಡುವೆ ಎ.ಆರ್.ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನಕ್ಕೆ ಸಂಗೀತಗಾರ್ತಿ ಮೋಹಿನಿ ಡೇ ಅವರೇ ಕಾರಣ, ರೆಹಮಾನ್ ಮತ್ತು ಮೋಹಿನಿ ಡೇ ನಡುವೆ ಸಂಬಂಧ ಇರುವ ಕಾರಣಕ್ಕಾಗಿಯೇ ಸಾಯಿರಾ ಬಾನು ರೆಹಮಾನ್ ಅವರಿಂದ ವಿಚ್ಛೇದನ ಪಡೆದಿದ್ದಾರೆ ಎಂಬ ವದಂತಿಗಳು ಕೇಳಿಬಂದಿದ್ದವು. ಈ ವದಂತಿಗಳನ್ನು ಮೋಹಿನಿ ಡೇ ಅಲ್ಲಗೆಳೆದಿದ್ದಾರೆ.
ಮೋಹಿನಿ ಡೇ ಹಲವು ವರ್ಷಗಳಿಂದ ಎ.ಆರ್. ರೆಹಮಾನ್ ಅವರ ತಂಡದಲ್ಲಿ ಬಾಸಿಸ್ಟ್ ಆಗಿದ್ದಾರೆ. ಇಬ್ಬರೂ ಆತ್ಮೀಯವಾಗಿದ್ದಾರೆ. ಇತ್ತೀಚಿಗೆ ಅವರ ವೈವಾಹಿಕ ಜೀವನದಲ್ಲೂ ವಿರಸ ಮೂಡಿ ಅವರು ವಿಚ್ಛೇದನ ಪಡೆಯಲು ಪ್ರಯತ್ನಿಸುತ್ತಿದ್ದರು. ಏಕಕಾಲಕ್ಕೆ ರೆಹಮಾನ್-ಸಾಯಿರಾ ಬಾನು ಹಾಗು ಮೋಹಿನಿ ಡೇ ಡಿವೋರ್ಸ್ ಪಡೆಯಲು ಅರ್ಜಿ ಸಲ್ಲಿಸಿದ್ದರಿಂದ ಇದು ‘ಟ್ರ್ಯಾನ್ಗುಲರ್ ಸ್ಟೋರಿ’ ರೀತಿ ಬಾಸವಾಗಿತ್ತು.
ಎ.ಆರ್. ರೆಹಮಾನ್ ತಂದೆ ಸಮಾನ!
ಬ್ಯಾಸಿಸ್ಟ್ ಮೋಹಿನಿ ಡೇ ಅಂತಿಮವಾಗಿ ಪ್ರಸಿದ್ಧ ಸಂಗೀತಗಾರ ಎ.ಆರ್. ರೆಹಮಾನ್ ಅವರೊಂದಿಗಿನ ಲಿಂಕ್-ಅಪ್ ವದಂತಿಗಳ ಬಗ್ಗೆ ಮೌನ ಮುರಿದಿದ್ದಾರೆ. ವದಂತಿಗಳನ್ನು ನಿರಾಕರಿಸುವ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ‘ಎ.ಆರ್. ರೆಹಮಾನ್ ಅವರು ನನಗೆ ತಂದೆ ಸಮಾನವಾದ ವ್ಯಕ್ತಿ’ ಎಂದು ಹೇಳಿದ್ದಾರೆ. ‘ಅಮೆರಿಕಾ ತೆರಳುವ ಮುನ್ನ ಎ.ಆರ್. ರೆಹಮಾನ್ ಅವರೊಂದಿಗೆ ಸುಮಾರು ಎಂಟೂವರೆ ವರ್ಷ ಬಾಸ್ ವಾದಕಿಯಾಗಿ ಕೆಲಸ ಮಾಡಿದ್ದೇನೆ. ಸಂಬಂಧಗಳು ಅವರವರ ವೈಯಕ್ತಿಕ ವಿಚಾರ. ಎಲ್ಲರು ದಯೆಯಿಂದ ವರ್ತಿಸಿ’ ಎಂದು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ- ಮ್ಯೂಸಿಕ್ ಮಾಂತ್ರಿಕ ಎ.ಆರ್. ರೆಹಮಾನ್ ಅವರಿಂದ ವಿಚ್ಛೇದನ ಪಡೆದ ಸಾಯಿರಾ ಬಾನು ಯಾರು? ಅವರ ಹಿನ್ನೆಲೆ ಏನು ಗೊತ್ತಾ?
ತಾನು ಪ್ರವಾಸದಲ್ಲಿ ಇದ್ದ ಕಾರಣ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ ಎಂದಿರುವ ಮೋಹಿನಿ ಡೇ, ‘ಎ.ಆರ್. ರೆಹಮಾನ್ ನನ್ನ ತಂದೆಗಿಂತ ಚಿಕ್ಕವರು. ಆದರೆ ರೆಹಮಾನ್ ಅವರ ಮಗಳು ಮತ್ತು ನಾನು ಓಂದೇ ವಾರಿಗೆಯವರು. ನನ್ನ ಮತ್ತು ರೆಹಮಾನ್ ವಿರುದ್ಧ ತಪ್ಪು ಮಾಹಿತಿ ಮತ್ತು ಆಧಾರರಹಿತ ಊಹಾಪೋಹದ ಮಾತುಗಳನ್ನು ಆಡಲಾಗುತ್ತಿದೆ. ಇವು ಸಂಪೂರ್ಣವಾಗಿ ನಂಬಲು ಅರ್ಹವಲ್ಲದ ಮಾತುಗಳು. ನಾನು ಎಂಟೂವರೆ ವರ್ಷ ರೆಹಮಾನ್ ಅವರ ಜೊತೆ ಕೆಲಸ ಮಾಡಿದ ಸಮಯವನ್ನು ಗೌರವಿಸುತ್ತೇನೆ. ಇಂತಹ ಭಾವನಾತ್ಮಕ ವಿಷಯಗಳ ಬಗ್ಗೆ ಜನರಿಗೆ ಗೌರವ, ಸಹಾನುಭೂತಿ ಇಲ್ಲ ಎನ್ನುವುದು ನಿಜಕ್ಕೂ ನಿರಾಶಾದಾಯಕವಾದುದು. ಜನರ ಮನೋಸ್ಥಿತಿಯನ್ನು ನೋಡಿ ನನಗೆ ಬೇಸರವಾಗುತ್ತಿದೆ. ಮಾಧ್ಯಮಗಳು ಈ ಘಟನೆಯನ್ನು ಅಶ್ಲೀಲಗೊಳಿಸುತ್ತಿರುವುದು ಅಪರಾಧ ಎನಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಸುದೀರ್ಘವಾದ ಪೋಸ್ಟ್ ಮಾಡಿರುವ ಮೋಹಿನಿ ಡೇ, ರೆಹಮಾನ್ ಒಬ್ಬ ದಂತಕತೆ, ಅವರು ನನಗೆ ತಂದೆಯಂತೆ. ನನ್ನ ವೃತ್ತಿಜೀವನದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. ನನ್ನ ಜೀವನದಲ್ಲಿ ನಾನು ಅನೇಕ ರೋಲ್ ಮಾಡೆಲ್ ಗಳನ್ನು ಹೊಂದಿದ್ದೇನೆ. ಅದರಲ್ಲಿ ರೆಹಮಾನ್ ಕೂಡ ಒಬ್ಬರು. ನನಗೆ ನನ್ನ ತಂದೆ ಮತ್ತು ಸಂಗೀತ ಎಲ್ಲವೂ ಆಗಿತ್ತು. ತಂದೆ ತೀರಿಕೊಂಡ ಬಳಿಕ ನಾನು ಉದ್ಯಮಕ್ಕೆ ಬಂದೆ. ನಂತರ ನನ್ನನ್ನು ರೂಪಿಸಿದವರು ರೆಹಮಾನ್. ರೆಹಮಾನ್ ಅವರ ಸಂಗೀತ ಕಾರ್ಯಕರ್ಮಗಳಲ್ಲಿ ನನಗೆ ಅವಕಾಶ ಸಿಕ್ಕಿತು’ ಎಂದು ಹೇಳಿಕೊಂಡಿದ್ದಾರೆ.
‘ಮಾಧ್ಯಮಗಳು ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅವು ಮಾಡುವ ಅವಾಂತರಗಳಿಂದ ಜನರ ಮನಸ್ಸು ಮತ್ತು ಜೀವನದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಸಂವೇದನಾಶೀಲರಾಗಿರಿ, ನಾನು ಯಾರಿಗೂ ಯಾವುದೇ ವಿವರಣೆಯನ್ನು ನೀಡಬೇಕಾಗಿಲ್ಲ. ಆದರೆ ಇದು ನನ್ನ ಮನ ಕದಡುವಂತೆ ಮಾಡಲು ಬಯಸುವುದಿಲ್ಲ. ದಯವಿಟ್ಟು ನಿಲ್ಲಿಸಿ, ಗೌಪ್ಯತೆಯನ್ನು ಗೌರವಿಸಿ’ ಎಂದು ಮಾಧ್ಯಮಗಳ ವರ್ತನೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ- ಅಮ್ಮನಿಗೆ ಡಿವೋರ್ಸ್ ನೀಡಿದಕ್ಕೆ ತಂದೆಯ ಫೊಟೋ ಶೇರ್ ಮಾಡಿ ಶಾಕಿಂಗ್ ವಿಚಾರ ಬಿಚ್ಚಿಟ್ಟ ಅಮೀನ್..!
ನವೆಂಬರ್ 19 ರಂದು, ಎಆರ್ ರೆಹಮಾನ್ ಮತ್ತು ಪತ್ನಿ ಸಾಯಿರಾ ಬಾನು 29 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಪ್ರಕಟಿಸಿದರು. ಅದೇ ಸಮಯದಲ್ಲಿ, ಮೋಹಿನಿ ಡೇ ಅವರು ಪತಿ ಮಾರ್ಕ್ ಹಾರ್ಟ್ಸುಚ್ನಿಂದ ವಿಚ್ಛೇದನವನ್ನು ಘೋಷಿಸಿದರು. ಇದು ರೆಹಮಾನ್ ಜೊತೆಗಿನ ಸಂಬಂಧದ ಬಗ್ಗೆ ವದಂತಿಗಳಿಗೆ ಕಾರಣವಾಯಿತು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.