ಸ್ಥಿರಾಸ್ತಿಯಲ್ಲಿ ಹೂಡಿಕೆ ಮಾಡಬೇಕೆ? ಅಪ್ಪಿ-ತಪ್ಪಿಯೂ ಈ ತಪ್ಪುಗಳನ್ನು ಮಾಡ್ಬೇಡಿ

ಅನೇಕ ಜನರು ಸ್ಥಿರಾಸ್ತಿಯನ್ನು ಹೂಡಿಕೆಗೆ ಉತ್ತಮ ಆಯ್ಕೆಯೆಂದು ಪರಿಗಣಿಸುತ್ತಾರೆ, ಆದರೆ ತರಾತುರಿಯಲ್ಲಿ ಮತ್ತು ತಯಾರಿ ಮಾಡದೆ ಹೂಡಿಕೆ ಮಾಡಿದರೆ ನಷ್ಟವಾಗಬಹುದು.

Last Updated : Nov 18, 2020, 12:24 PM IST
  • ಅನೇಕ ಜನರು ಸ್ಥಿರಾಸ್ತಿಯನ್ನು ಹೂಡಿಕೆಗೆ ಉತ್ತಮ ಆಯ್ಕೆಯೆಂದು ಪರಿಗಣಿಸುತ್ತಾರೆ.
  • ಸ್ಥಿರಾಸ್ತಿ ಖರೀದಿಸುವ ವೇಳೆ ತುಂಬಾ ಜಾಗ್ರತೆಯಿಂದ ಖರೀದಿ ಮಾಡಿ.
  • ತರಾತುರಿಯಲ್ಲಿ ಯಾವುದೇ ನಿರ್ಧಾರವನ್ನು ಕೈಗೊಳ್ಳದಿರುವುದು ಉತ್ತಮ.
ಸ್ಥಿರಾಸ್ತಿಯಲ್ಲಿ ಹೂಡಿಕೆ ಮಾಡಬೇಕೆ? ಅಪ್ಪಿ-ತಪ್ಪಿಯೂ ಈ ತಪ್ಪುಗಳನ್ನು ಮಾಡ್ಬೇಡಿ title=

ನವದೆಹಲಿ: ಬಹುತೇಕ ಜನರು ಸ್ಥಿರಾಸ್ಥಿಯಲ್ಲಿ ಹೂಡಿಕೆ ಮಾಡುವುದು ಒಂದು ಉತ್ತಮ ಆಯ್ಕೆ ಎಂದು ಪರಿಗಣಿಸುತ್ತಾರೆ. ಆದರೆ, ಸ್ಥಿರಾಸ್ತಿಯಲ್ಲಿ  ಹೂಡಿಕೆ ಮಾಡುವಾಗ ಜಾಗರೂಕರಾಗಿರುವುದು ಅಗತ್ಯವಾಗಿದೆ ಇಲ್ಲದೆ ಹೋದಲ್ಲಿ ಲಾಭದ ಬದಲು ನಷ್ಟ ಉಂಟಾಗುವ ಸಾಧ್ಯತೆ ಇದೆ.

ಇದನ್ನು ಓದಿ- Home Loan ಇಎಂಐನಲ್ಲಿ ನಿಮಗೆ ಪರಿಹಾರ ಸಿಗುತ್ತದೆಯೇ?

ಕ್ರೆಡಿಟ್ ಸ್ಕೋರ್ ಚೆಕ್ ಮಾಡಿ
ಒಂದು ವೇಳೆ ಸ್ಥಿರಾಸ್ತಿ ಖರೀದಿಸಲು ನೀವು ಲೋನ್ ಗಾಗಿ (Home Loan) ಅಪ್ಲೈ ಮಾಡಲು ನಿರ್ಧರಿಸಿದ್ದರೆ ಮೊದಲು, ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ.  ಒಂದು ವೇಳೆ ನಿಮ್ಮ ಕ್ರೆಡಿಟ್ ಹಿಸ್ಟರಿಯಲ್ಲಿ ತೊಂದರೆ ಇದ್ದರೆ, ನಿಮ್ಮ ಸಾಲದ ಅರ್ಜಿ ವಜಾಗೊಳ್ಳುವ ಸಾಧ್ಯತೆ ಇದೆ. ನಿಮ್ಮಿಂದ ಬಡ್ಡಿ ರೂಪದಲ್ಲಿ ಹೆಚ್ಚಿನ ಹಣ ಪಡೆಯುವ ಸಾಧ್ಯತೆ ಇದೆ. ನಿಮ್ಮ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ  ಹೆಚ್ಚಾಗಿದ್ದರೆ, ನಿಮಗೆ ಉತ್ತಮ ಬಡ್ಡಿದರದ ಲಾಭ ಸಿಗುವ ಸಾಧ್ಯತೆ ಇದೆ.

ಇದನ್ನು ಓದಿ- ದೇಶದಲಿಯೇ ಅತ್ಯಂತ ಅಗ್ಗದ ಬಡ್ಡಿದರದಲ್ಲಿ Home Loan ನೀಡಲಿದೆ ಈ ಕಂಪನಿ

ಸ್ಥಿರಾಸ್ತಿ ಖರೀದಿಸುವಲ್ಲಿ ತರಾತುರಿ ಬೇಡ
ಸ್ಥಿರಾಸ್ತಿ ಖರೀದಿಸುವ ಮೊದಲು ಆಸ್ತಿ ಮೌಲ್ಯ, ಲೋಕೇಶನ್, ಮುಂದಿನ ದಿನಗಳಲ್ಲಿ ಅದು ನಿಮಗೆ ಎಷ್ಟು ಲಾಭ ನೀಡಲಿದೆ ಇತ್ಯಾದಿ ವಿಷಯಗಳನ್ನು ಗಮನದಲ್ಲಿಟ್ಟು ಖರೀದಿಸುವುದು ಉತ್ತಮ. ಸ್ಥಿರಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕೂಡ ಸರಿಯಾಗಿ ಪರಿಶೀಲಿಸಿ. ಆ ಆಸ್ತಿಯ ಮೇಲೆ ಯಾವುದಾದರು ಪ್ರಕರಣ ದಾಖಲಾಗಿದೆಯೇ ಎಂಬುದನ್ನು ತಪ್ಪದೆ ತಿಳಿದುಕೊಳ್ಳಿ. ಇದೊಂದು ದೀರ್ಘಕಾಲದ ಪ್ರಕ್ರಿಯೆಯಾದ ಕಾರಣ ಸರಿಯಾದ ಹೋಮ್ವರ್ಕ್ ಹಾಗೂ ಖಚಿತತೆಯಿಂದ ಮಾತ್ರ ಮುಂದುವರೆಯಿರಿ.

ತರಾತುರಿಯಲ್ಲಿ ಆಸ್ತಿ ಖರೀದಿಸುವ ಮೊದಲು ಹಲವು ಪ್ರಾಪರ್ಟಿಗಳನ್ನು ಆಯ್ದು ಇಟ್ಟುಕೊಳ್ಳಿ. ಕಮಿಷನ್ ಗಾಗಿ ಬ್ರೋಕರ್ ಸರಿ ಇಲ್ಲದ ಆಸ್ತಿಯನ್ನು ನಿಮಗೆ ಖರೀದಿಸಿ ಕೊಡುವ ಸಾಧ್ಯತೆ ಇರುತ್ತದೆ. ಇದಲ್ಲದೆ ನೀವು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಿಸಿದ ಬೆಲೆಗಳನ್ನು ಸಹ ತಿಳಿದುಕೊಳ್ಳಿ.

ಇದನ್ನು ಓದಿ-Home Loan ಪಡೆಯಲು ಇದು ಸರಿಯಾದ ಸಮಯ, HDFC ಸೇರಿದಂತೆ ಹಲವು ಬ್ಯಾಂಕ್ ಗಳ ಬಡ್ಡಿದರದಲ್ಲಿ ಮತ್ತೆ ಇಳಿಕೆ

ಇತರ ಹೂಡಿಕೆಗಳೂ ಕೂಡ ಲಾಭದಾಯಕವಾಗಿವೆ
ಕೇವಲ ಹೂಡಿಕೆಯೇ ನಿಮ್ಮ ಉದ್ದೇಶವಾಗಿದ್ದರೆ, ನೀವು ಬೇರೆ ಹೂಡಿಕೆಯ ಆಯ್ಕೆಗಳನ್ನು ಕೂಡ ಪರಿಗಣಿಸಬಹುದು. ಸ್ಮಾಲ್ ಸೇವಿಂಗ್ಸ್ ಅಥವಾ ಇಕ್ವಿಟಿ ಗಳಂತಹ ಆಯ್ಕೆಗಳು ಕೂಡ ಉತ್ತಮ ಆದಾಯ ನೀಡುತ್ತವೆ. ಇದಲ್ಲದೆ ಮ್ಯೂಚವಲ್ ಫಂಡ್ ಕೂಡ ಹೂಡಿಕೆಯ ಉತ್ತಮ ಆಯ್ಕೆಯಾಗಿದೆ.

ಇದನ್ನು ಓದಿ- ಅತ್ಯಂತ ಕೆಳಮಟ್ಟಕ್ಕೆ ಕುಸಿದ Home Loan ಬಡ್ಡಿದರಗಳು, ಕನಸಿನ ಮನೆ ಖರೀದಿಗೆ ಇದು ಸೂಕ್ತ ಸಮಯವೇ?

ಇದಲ್ಲದೆ, ರಿಯಲ್ ಎಸ್ಟೇಟ್ ನಲ್ಲಿ ಪ್ರಾಪರ್ಟಿ ಟ್ಯಾಕ್ಸ್, ನಿರ್ವಹಣಾ ವೆಚ್ಚಗಳು ಕೂಡ ಶಾಮೀಲಾಗಿವೆ. ಇತರ ಹೂಡಿಕೆಗಳಲ್ಲಿ ನಿರ್ವಹಣಾ ವೆಚ್ಚಗಳು ತುಂಬಾ ಕಡಿಮೆಯಾಗಿವೆ.

Trending News