ಅತ್ಯಂತ ಕೆಳಮಟ್ಟಕ್ಕೆ ಕುಸಿದ Home Loan ಬಡ್ಡಿದರಗಳು, ಕನಸಿನ ಮನೆ ಖರೀದಿಗೆ ಇದು ಸೂಕ್ತ ಸಮಯವೇ?

ಪ್ರಸ್ತುತ ಗೃಹ ಸಾಲದ  ಬಡ್ಡಿದರಗಳು ಶೇ.6.7 ರಿಂದ ಶೇ.9 ರ ನಡುವೆ ವ್ಯವಹರಿಸುತ್ತಿವೆ. ಇದರೊಂದಿಗೆ, ಪ್ರಮುಖ ಪ್ರಾಪರ್ಟಿ ಮಾರುಕಟ್ಟೆಯಲ್ಲಿನ ಅನೇಕ ಡೆವಲಪರ್ ಗಳು ವಸತಿ ಆಸ್ತಿಗಳ ಬೆಲೆಗಳನ್ನು ಕಡಿಮೆ ಮಾಡಿದ್ದಾರೆ. ಅದರ ಲಾಭವನ್ನು ನೀವೂ ಪಡೆದುಕೊಳ್ಳಬಹುದಾಗಿದೆ.

Last Updated : Nov 5, 2020, 01:13 PM IST
  • ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಿಸಲು ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗ ಹೆಚ್ಚಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ.
  • ಪ್ರಸ್ತುತ ಗೃಹ ಸಾಲದ ಬಡ್ಡಿದರಗಳು ಶೇ.6.7 ರಿಂದ ಶೇ.9 ರ ನಡುವೆ ವ್ಯವಹರಿಸುತ್ತಿವೆ.
  • ಇಂತಹ ಪರಿಸ್ಥಿತಿಯಲ್ಲಿ, ಗ್ರಾಹಕರು ಈ ಮನೆಯನ್ನು ಖರೀದಿಸಲು ಇದು ಸರಿಯಾದ ಸಮಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಅತ್ಯಂತ ಕೆಳಮಟ್ಟಕ್ಕೆ ಕುಸಿದ Home Loan ಬಡ್ಡಿದರಗಳು, ಕನಸಿನ ಮನೆ ಖರೀದಿಗೆ ಇದು ಸೂಕ್ತ ಸಮಯವೇ? title=

ನವದೆಹಲಿ: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಿಸಲು ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗ ಹೆಚ್ಚಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದು ಉದ್ಯೋಗವನ್ನು ಹೆಚ್ಚಿಸಲು ಮತ್ತು ಆರ್ಥಿಕತೆಯಲ್ಲಿ ಬೇಡಿಕೆಯನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ. ಮನೆಗಳ ಮಾರಾಟವನ್ನು ಹೆಚ್ಚಿಸಲು ರಿಸರ್ವ್ ಬ್ಯಾಂಕಿನ ಸೂಚನೆಗಳ ಹಿನ್ನೆಲೆ ಬಹುತೇಕ ಬ್ಯಾಂಕುಗಳು ಗೃಹ ಸಾಲ (Home Loan) ಬಡ್ಡಿ ದರವನ್ನು ಅತ್ಯಂತ ಕೆಳಮಟ್ಟಕ್ಕೆ ತಂದು ನಿಲ್ಲಿಸಿವೆ. ಕಳೆದ ಎರಡು ದಶಕಗಳಲ್ಲಿ ಗೃಹ ಸಾಲದ ಬಡ್ಡಿ ದರಗಳ ಅಗ್ಗದ ಹಂತ ಇದಾಗಿದೆ. ಕರೋನಾ ಪ್ರಕೋಪದ ಈ ಅವಧಿಯಲ್ಲಿ, ಆರ್ಥಿಕ ಚಟುವಟಿಕೆಯ ಆಘಾತಗಳು ಗೃಹ ಸಾಲದ ಬಡ್ಡಿ ದರಗಳ ಮೇಲೆ ಪರಿಣಾಮ ಬೀರಿವೆ. ಇಂತಹ ಪರಿಸ್ಥಿತಿಯಲ್ಲಿ, ಗ್ರಾಹಕರು ಈ ಮನೆಯನ್ನು ಖರೀದಿಸಲು ಇದು ಸರಿಯಾದ ಸಮಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇದನ್ನು ಓದಿ- Home Loan ಇಎಂಐನಲ್ಲಿ ನಿಮಗೆ ಪರಿಹಾರ ಸಿಗುತ್ತದೆಯೇ?

ನಿರಂತರ ಆದಾಯವನ್ನು ಪರಿಗಣಿಸಿ ಗೃಹಸಾಲ ಪಡೆಯಬಹುದು
ತಮ್ಮ ಆದಾಯದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿರುವವರು, ಮನೆ ಖರೀದಿಸುವ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ಪ್ರತಿ ಬ್ಯಾಂಕ್ ಗೃಹ ಸಾಲವನ್ನು ತಗ್ಗಿಸುತ್ತಿವೆ ಹಾಗೂ ಆರ್ಥಿಕತೆಗೆ ಸಾಮಾನ್ಯ ಸ್ಥಿತಿಗೆ  ಮರಳುತ್ತದೆ ಎಂಬ ಸೂಚನೆಯೊಂದಿಗೆ. ಆಸ್ತಿ ಬೆಲೆಗಳು ಇಲ್ಲಿಯವರೆಗೆ ಇಳಿದಿರುವುದರಿಂದ, ಮನೆಗಳನ್ನು ಅಗ್ಗದ ದರದಲ್ಲಿ ಖರೀದಿಸಬಹುದು. ಇಎಂಐ ಪಾವತಿಸುವ ಸಾಮರ್ಥ್ಯ ಹೊಂದಿರುವ ಗ್ರಾಹಕರು ಈ ಅವಕಾಶದ ಲಾಭವನ್ನು ಪಡೆದುಕೊಳ್ಳಬೇಕು.

ಇದನ್ನು ಓದಿ- Home Loan ಗ್ರಾಹಕರಿಗೆ ಎಸ್‌ಬಿಐ ನೀಡುತ್ತಿದೆ ಆಕರ್ಷಕ ಕೊಡುಗೆ, EMI ಎಷ್ಟು ಕಡಿಮೆಯಾಗಲಿದೆ?

ಆಸ್ತಿ ಬೆಲೆ ಇಳಿಕೆ ಹಾಗೂ ಸ್ಟಾಂಪ್ ಡ್ಯೂಟಿ ಇಳಿಕೆಯ ಲಾಭ ಪಡೆಯಬಹುದು
ಪ್ರಸ್ತುತ ಗೃಹ ಸಾಲದ ಬಡ್ಡಿದರಗಳು ಶೇ.6.7 ರಿಂದ ಶೇ.9 ರ ನಡುವೆ ವ್ಯವಹರಿಸುತ್ತಿವೆ. ಇದರೊಂದಿಗೆ, ಪ್ರಮುಖ ಪ್ರಾಪರ್ಟಿ ಮಾರುಕಟ್ಟೆಯಲ್ಲಿನ ಅನೇಕ ಡೆವಲಪರ್ ಗಳು ವಸತಿ ಆಸ್ತಿಗಳ ಬೆಲೆಗಳನ್ನು ಕಡಿಮೆ ಮಾಡಿದ್ದಾರೆ. ಅದರ ಲಾಭವನ್ನು ನೀವೂ ಪಡೆದುಕೊಳ್ಳಬಹುದಾಗಿದೆ. ಹಲವು ನಗರಗಳು ಸ್ಟಂಪ್ ಡ್ಯೂಟಿ ಇಳಿಕೆಯ ಪ್ರಸ್ತಾವನೆ ಸಲ್ಲಿಸಿವೆ. ಇಂತಹ ಸಮಯದಲ್ಲಿ ವಸತಿ ಆಸ್ತಿಯನ್ನು ಖರೀದಿಸಲು ಇದು ನಿಮಗೆ ಸರಿಯಾದ ಅವಕಾಶವಿದೆ. ಇತ್ತೀಚೆಗೆ, ಎಸ್‌ಬಿಐ ಒಳಗೊಂಡಂತೆ  ಎಚ್‌ಡಿಎಫ್‌ಸಿ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲ ಬಡ್ಡಿಯನ್ನು ಇಳಿಕೆ ಮಾಡಿವೆ. ಯೂನಿಯನ್ ಬ್ಯಾಂಕ್ ಮಹಿಳಾ ಗ್ರಾಹಕರಿಗೆ ಹೆಚ್ಚುವರಿ ರಿಯಾಯಿತಿಯನ್ನು ಸಹ ಘೋಷಿಸಿದೆ. ಬಹುಶಃ ಈ ಅಗ್ಗದ ಸುತ್ತಿನ ಗೃಹ ಸಾಲವು ಮುಂದಿನ ಬಾರಿ ಮತ್ತೆ ಬರುವುದಿಲ್ಲ, ಆದ್ದರಿಂದ ನೀವು ಮನೆ ಖರೀದಿಸಲು ಬಯಸಿದರೆ, ನೀವು ಸಾಲದ ಆಯ್ಕೆಯನ್ನು ಪ್ರಯತ್ನಿಸಬಹುದು.

Trending News