Cheapest Electric Car: ಫುಲ್ ಚಾರ್ಜ್‌ನಲ್ಲಿ 200 KM ಮೈಲೇಜ್ ನೀಡುವ ಭಾರತದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರ್ ಬಿಡುಗಡೆ

PMV EaS-E price in India: ಭಾರತದಲ್ಲಿ PMV ಎಲೆಕ್ಟ್ರಿಕ್ ಕಾರು ಬಿಡುಗಡೆ ಆಗಿದೆ. ಇದು ಮೈಕ್ರೋ-ಎಲೆಕ್ಟ್ರಿಕ್ ಕಾರ್ ಆಗಿದ್ದು, EaS-E ಎಂದು ಹೆಸರಿಸಲಾಗಿದೆ. ಕಂಪನಿಯು ಅದರ ಬೆಲೆಯನ್ನು 4.79 ಲಕ್ಷ ರೂ. (ಎಕ್ಸ್ ಶೋ ರೂಂ) ಎಂದು ನಿಗದಿಗೊಳಿಸಿದೆ. ಆದರೆ...

Written by - Yashaswini V | Last Updated : Nov 16, 2022, 02:47 PM IST
  • ಗಾತ್ರದಲ್ಲಿ ಚಿಕ್ಕದಾಗಿರುವ ಈ ಕಾರು ದೇಶದ ಅತ್ಯಂತ ಚಿಕ್ಕ ಎಲೆಕ್ಟ್ರಿಕ್ ಕಾರ್ ಆಗಿದೆ.
  • PMV Eas-E ಎಲೆಕ್ಟ್ರಿಕ್ ಕಾರು ಪೂರ್ಣ ಚಾರ್ಜ್‌ನಲ್ಲಿ 200 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
  • ಇದರ ಗರಿಷ್ಠ ವೇಗ ಗಂಟೆಗೆ 70 ಕಿ.ಮೀ. PMV Eas-E ಎಲೆಕ್ಟ್ರಿಕ್ ಸ್ಮಾರ್ಟ್ ಕಾರ್ ಅನ್ನು ಮೊಬೈಲ್ ಫೋನ್ ಮೂಲಕ ನಿಯಂತ್ರಿಸಬಹುದು.
Cheapest Electric Car: ಫುಲ್ ಚಾರ್ಜ್‌ನಲ್ಲಿ 200 KM ಮೈಲೇಜ್ ನೀಡುವ ಭಾರತದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರ್ ಬಿಡುಗಡೆ  title=
Cheapest Electric Car

PMV Electric Car Launch In India: ದೇಶದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರ್ ಬಿಡುಗಡೆಯಾಗಿದೆ. ಮುಂಬೈ ಮೂಲದ ಸ್ಟಾರ್ಟಪ್ ಪಿಎಂವಿ ಎಲೆಕ್ಟ್ರಿಕ್ ಈ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಇದು ಮೈಕ್ರೋ-ಎಲೆಕ್ಟ್ರಿಕ್ ಕಾರ್ ಆಗಿದ್ದು, EaS-E ಎಂದು ಹೆಸರಿಸಲಾಗಿದೆ. 

ಗಾತ್ರದಲ್ಲಿ ಚಿಕ್ಕದಾಗಿರುವ ಈ ಕಾರು ದೇಶದ ಅತ್ಯಂತ ಚಿಕ್ಕ ಎಲೆಕ್ಟ್ರಿಕ್ ಕಾರ್ ಆಗಿದೆ. PMV Eas-E ಎಲೆಕ್ಟ್ರಿಕ್ ಕಾರು ಪೂರ್ಣ ಚಾರ್ಜ್‌ನಲ್ಲಿ 200 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಗರಿಷ್ಠ ವೇಗ ಗಂಟೆಗೆ 70 ಕಿ.ಮೀ. PMV Eas-E ಎಲೆಕ್ಟ್ರಿಕ್ ಸ್ಮಾರ್ಟ್ ಕಾರ್ ಅನ್ನು ಮೊಬೈಲ್ ಫೋನ್ ಮೂಲಕ ನಿಯಂತ್ರಿಸಬಹುದು. ಎಲೆಕ್ಟ್ರಿಕ್ ಕಾರು PMSM ಎಲೆಕ್ಟ್ರಿಕ್ ಮೋಟಾರ್‌ನಿಂದ ಚಾಲಿತವಾಗಲಿದ್ದು, ಇದು 10kw ಪವರ್ ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು ಸುಮಾರು 4 ಗಂಟೆ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ- ಎಟಿಎಂ ನಗದು ವಹಿವಾಟಿನ ನಿಯಮಗಳಲ್ಲಿ ಮತ್ತೆ ಬದಲಾವಣೆ.!

ಈಸ್-ಇ ಎಲೆಕ್ಟ್ರಿಕ್ ಕಾರಿನ ನಿರ್ವಹಣಾ ವೆಚ್ಚವು 75 ಪೈಸೆ/ಕಿಮೀಗಿಂತ ಕಡಿಮೆಯಿದೆ ಎಂದು PMV ಹೇಳಿಕೊಂಡಿದೆ. ಈ ಎಲೆಕ್ಟ್ರಿಕ್ ಕಾರ್ ಕ್ರೂಸ್ ಕಂಟ್ರೋಲ್, ರಿಮೋಟ್ ಪಾರ್ಕಿಂಗ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಆನ್-ಬೋರ್ಡ್ ನ್ಯಾವಿಗೇಶನ್ ಅನ್ನು ಪಡೆಯುತ್ತದೆ. ಕಾರು IP67 ರೇಟಿಂಗ್‌ನೊಂದಿಗೆ ಲಿಥಿಯಂ ಐರನ್ ಫಾಸ್ಫೇಟ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಸ್ಮಾರ್ಟ್ ಕಾರಿನ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಕಂಪನಿ ಹೇಳಿಕೊಂಡಿದೆ. ಕಾರು ಹೆಚ್ಚಿನ ಸಾಮರ್ಥ್ಯದ ಶೀಟ್ ಮೆಟಲ್‌ನೊಂದಿಗೆ ಏರ್‌ಬ್ಯಾಗ್‌ಗಳು ಮತ್ತು ಸೀಟ್‌ಬೆಲ್ಟ್‌ಗಳನ್ನು ಪಡೆಯುತ್ತದೆ. ಈ ಕಾರನ್ನು 11 ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ- Best Investment Plan: ಪಿಎಫ್, ಎಫ್.ಡಿಗಿಂತ ಬೇಗನೆ ನಿಮ್ಮ ಹೂಡಿಕೆ ಡಬಲ್ ಆಗಬೇಕೆ? ಈ ನಿಯಮ ನಿಮಗೆ ತಿಳಿದಿರಲಿ

ದೇಶದ ಅತ್ಯಂತ ಅಗ್ಗದ ಕಾರಿನ ಬೆಲೆ:
ಕಂಪನಿಯು ಅದರ ಬೆಲೆಯನ್ನು 4.79 ಲಕ್ಷ ರೂ. (ಎಕ್ಸ್ ಶೋ ರೂಂ) ನಿಗದಿಗೊಳಿಸಿದೆ. ಆದರೆ, ಈ ಬೆಲೆ ಆರಂಭಿಕ 10 ಸಾವಿರ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆ. ವಿಶೇಷವೆಂದರೆ ಬಿಡುಗಡೆಗೂ ಮುನ್ನವೇ ಈ ವಾಹನ 6000 ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ. ಕಂಪನಿಯ ವೆಬ್‌ಸೈಟ್‌ನಿಂದ ಗ್ರಾಹಕರು ಈ ವಾಹನವನ್ನು ಬುಕ್ ಮಾಡಬಹುದಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News