Offers On Hyundai Cars : ನವೆಂಬರ್ ತಿಂಗಳಿನಲ್ಲಿ, ಹುಂಡೈ ತನ್ನ ಕೆಲವು ಕಾರುಗಳ ಮೇಲೆ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿದೆ. Santro, Grand i10 Nios, i20, Aura ಮತ್ತು Kona ಎಲೆಕ್ಟ್ರಿಕ್ SUV ಗಳ ಮೇಲೆ ಆಫರ್ ನೀಡುತ್ತಿದೆ. ಈ ರಿಯಾಯಿತಿಯೊಂದಿಗೆ ಕೋನಾ ಎಲೆಕ್ಟ್ರಿಕ್ ಎಸ್ಯುವಿ ಖರೀದಿಸಿದರೆ, ಗ್ರಾಹಕರಿಗೆ ದೊಡ್ಡ ಮಟ್ಟದ ಉಳಿತಾಯವಾಗಲಿದೆ. ಇದರ ಮೇಲೆ ಕಂಪನಿಯು 1 ಲಕ್ಷ ರೂಪಾಯಿ ನಗದು ರಿಯಾಯಿತಿಯನ್ನು ನೀಡುತ್ತಿದೆ
ಸಾಂಟ್ರೋ :
ನಗದು ರಿಯಾಯಿತಿ - 15,000 ರೂ
ವಿನಿಮಯ ಬೋನಸ್ - 10,000 ರೂ
ಕಾರ್ಪೊರೇಟ್ ರಿಯಾಯಿತಿ - 3,000 ರೂ
ಒಟ್ಟು - 28,000 ರೂ.
ಇದನ್ನೂ ಓದಿ : Gold Price Today : ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, ಬೆಳ್ಳಿ ಬೆಲೆ ಸ್ಥಿರ
ಹುಂಡೈ ತನ್ನ ಸಾಂಟ್ರೋ ಕಾರು ಹೊರ ತರುವುದನ್ನು ನಿಲ್ಲಿಸಿದೆ. ಈಗ ತನ್ನ ಉಳಿದ ಸ್ಟಾಕ್ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ ಎನ್ನುವುದು ಗಮನಿಸಬೇಕಾದ ಸಂಗತಿ. CNG ಹೊರತುಪಡಿಸಿ, ಅದರ ಎಲ್ಲಾ ರೂಪಾಂತರಗಳ ಮೇಲೆ 15,000 ರೂಪಾಯಿಗಳ ರಿಯಾಯಿತಿ ನೀಡುತ್ತಿದೆ. ಅದೇ ಪೆಟ್ರೋಲ್ ಮತ್ತು CNG ರೂಪಾಂತರಗಳ ಮೇಲೆ 10,000 ರೂಪಾಯಿಗಳವರೆಗೆ ವಿನಿಮಯ ಬೋನಸ್ ಕೂಡ ನೀಡಲಾಗುತ್ತಿದೆ. ಸ್ಯಾಂಟ್ರೋ ಬೆಲೆ 4.90 ಲಕ್ಷದಿಂದ 6.42 ಲಕ್ಷದವರೆಗೆ ಇದೆ.
ಗ್ರಾಂಡ್ ಐ10 ನಿಯೋಸ್ :
ನಗದು ರಿಯಾಯಿತಿ - 35,000 ರೂ.
ವಿನಿಮಯ ಬೋನಸ್ - 10,000 ರೂ.
ಕಾರ್ಪೊರೇಟ್ ರಿಯಾಯಿತಿ - 3,000 ರೂ.
ಒಟ್ಟು - 48,000 ರೂ.
ಇದನ್ನೂ ಓದಿ : ಎಲ್ ಪಿಜಿ ಬೆಲೆಗೆ ಸಂಬಂಧಿಸಿದಂತೆ ಸರ್ಕಾರದ ಈ ನಿರ್ಧಾರದಿಂದ ಕೋಟ್ಯಂತರ ಗ್ರಾಹಕರಿಗೆ ಬಿಗ್ ಶಾಕ್ .!
ಅದರ ಟರ್ಬೊ ರೂಪಾಂತರಗಳ ಮೇಲೆ 35,000 ರೂ., CNG ರೂಪಾಂತರಗಳ ಮೇಲೆ 25,000 ರೂ., ಮತ್ತು ಉಳಿದ ರೂಪಾಂತರಗಳ ಮೇಲೆ 5000 ರೂ. ವರೆಗೆ ನಗದು ರಿಯಾಯಿತಿ ನೀಡಲಾಗುತ್ತಿದೆ. ಅದರ ಎಲ್ಲಾ ರೂಪಾಂತರಗಳ ಮೇಲೆ ಕ್ರಮವಾಗಿ 10,000 ರೂ. ಮತ್ತು 3,000 ರೂ. ವರೆಗೆ ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತಿದೆ. ಗ್ರಾಂಡ್ ಐ10 ನಿಯೋಸ್ ಬೆಲೆ 5.43 ಲಕ್ಷದಿಂದ 8.45 ಲಕ್ಷದವರೆಗೆ ಇದೆ.
ಐ 20 :
ನಗದು ರಿಯಾಯಿತಿ - 10,000 ರೂ.
ವಿನಿಮಯ ಬೋನಸ್ - 10,000 ರೂ
ಒಟ್ಟು - 20,000 ರೂ
ಈ ಕೊಡುಗೆಗಳು ಮ್ಯಾಗ್ನಾ ಮತ್ತು ಸ್ಪೋರ್ಟ್ಜ್ ರೂಪಾಂತರಗಳಲ್ಲಿ ಮಾತ್ರ ಲಭ್ಯವಿದೆ. ಇದರಲ್ಲಿ ಯಾವುದೇ ಕಾರ್ಪೊರೇಟ್ ರಿಯಾಯಿತಿ ನೀಡುತ್ತಿಲ್ಲ. ಕಾರಿನ ಬೆಲೆ 7.07 ಲಕ್ಷದಿಂದ 11.62 ಲಕ್ಷದವರೆಗೆ ಇರುತ್ತದೆ.
ಔರಾ :
ನಗದು ರಿಯಾಯಿತಿ - 25,000 ರೂ.
ವಿನಿಮಯ ಬೋನಸ್ - 10,000 ರೂ.
ಕಾರ್ಪೊರೇಟ್ ರಿಯಾಯಿತಿ - 3,000 ರೂ.
ಒಟ್ಟು - 38,000 ರೂ.
ಔರಾದ CNG ವೇರಿಯಂಟ್ಗಳ ಮೇಲೆ 25,000 ರೂಪಾಯಿಗಳವರೆಗೆ ಮತ್ತು ಉಳಿದ ವೆರಿಯೇಂಟ್ ಗಳ ಮೇಲೆ 5,000 ರೂಪಾಯಿಗಳವರೆಗೆ ನಗದು ರಿಯಾಯಿತಿ ನೀಡಲಾಗುತ್ತಿದೆ. 10,000 ರೂ.ವರೆಗೆ ವಿನಿಮಯ ಬೋನಸ್ ಮತ್ತು ಎಲ್ಲಾ ರೂಪಾಂತರಗಳ ಮೇಲೆ 3000 ರೂ ವರೆಗೆ ಕಾರ್ಪೊರೇಟ್ ರಿಯಾಯಿತಿ ಪಡೆಯುವುದು ಸಾಧ್ಯವಾಗುತ್ತದೆ. ಔರಾದ ಬೆಲೆ 6.09 ಲಕ್ಷದಿಂದ 8.87 ಲಕ್ಷದವರೆಗೆ ಇದೆ.
ಇದನ್ನೂ ಓದಿ : PPF vs SSY : PPF ಅಥವಾ ಸುಕನ್ಯಾ ಸಮೃದ್ಧಿ ಯಾವುದು ಬೆಸ್ಟ್? ಇಲ್ಲಿದೆ ಲೆಕ್ಕಾಚಾರ
ಕೋನಾ ಎಲೆಕ್ಟ್ರಿಕ್ :
ನಗದು ರಿಯಾಯಿತಿ ರೂ 1 ಲಕ್ಷ ರೂ.
ಕೋನಾ ಎಲೆಕ್ಟ್ರಿಕ್ನಲ್ಲಿ 1 ಲಕ್ಷ ರೂ.ವರೆಗೆ ನಗದು ರಿಯಾಯಿತಿ ನೀಡಲಾಗುತ್ತಿದೆ. ಈ ಕಾರಿನ ಮೇಲೆ ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುತ್ತಿಲ್ಲ. ಕೋನಾ ಎಲೆಕ್ಟ್ರಿಕ್ನ ಬೆಲೆ 23.84 ಲಕ್ಷದಿಂದ 24.03 ಲಕ್ಷದವರೆಗೆ ಇರುತ್ತದೆ.
ಗಮನಿಸಿ: ಸ್ಥಳ ಮತ್ತು ಆಯ್ಕೆ ಮಾಡಿದ ರೂಪಾಂತರದ ಆಧಾರದ ಮೇಲೆ ಆಫರ್ ಬದಲಾಗಬಹುದು. ನಿಮ್ಮ ಹತ್ತಿರದ ಹುಂಡೈ ಡೀಲರ್ಶಿಪ್ನಿಂದ, ಆಫರ್ ಬಗ್ಗೆ ನಿಖರವಾದ ವಿವರಗಳನ್ನು ಪಡೆಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.