ಹಸುಗಳಿಗೆ ಡ್ರೈ ಫ್ರೂಟ್ಸ್‌ ತಿನ್ನಿಸಿ, ಬಿಯರ್‌ ಕುಡಿಸಿ, ʼಗೋಮಾಂಸʼ ರುಚಿಯಾಗಿರುತ್ತೆ : ಮಾರ್ಕ್‌ ಜುಕರ್‌ಬರ್ಗ್‌

Mark zuckerberg : ಬಿಲಿಯನೇರ್ ಮಾರ್ಕ್ ಜುಕರ್‌ಬರ್ಗ್ ಅವರು, ಗೋಮಾಂಸ ಉತ್ಪಾದನೆ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಅಲ್ಲದೆ, ಅವರು ಹವಾಯಿಯ ದ್ವೀಪದಲ್ಲಿ ಹಸುಗಳಿಗೆ ಮಕಾಡಾಮಿಯಾ ಊಟ ಮತ್ತು ಬಿಯರ್ ಕುಡಿಸಿ ಸಾಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಜುಕರ್‌ಬರ್ಗ್ ಪ್ರಕಾರ, ವಿಶ್ವದ ಅತ್ಯುತ್ತಮ ಗೋಮಾಂಸವನ್ನು ರಚಿಸುವುದು ಇದರ ಉದ್ದೇಶವಾಗಿದೆ.

Written by - Krishna N K | Last Updated : Jan 10, 2024, 02:45 PM IST
  • ಮಾರ್ಕ್ ಜುಕರ್‌ಬರ್ಗ್ ಮಾರ್ಕ್‌ ಆಗಾಗ ತಮ್ಮ ಹೊಸ ಐಡಿಯಾ ಮತ್ತು ಆಲೋಚನೆಗಳಿಂದ ಸುದ್ದಿಯಲ್ಲಿರುತ್ತಾರೆ.
  • ಇದೀಗ ಅವರು ಗೋಮಾಂಸದ ಕುರಿತು ಮಾತನಾಡಿ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
  • ಒಣ ಹಣ್ಣುಗಳು ಮತ್ತು ಬಿಯರ್ ಕುಡಿಸಿ ಬೆಳೆಸುವ ಮೂಲಕ ವಿಶ್ವದ ಅತ್ಯುತ್ತಮ ಗೋಮಾಂಸ ಉತ್ಪಾದಿಸಬಹುದು ಎಂದು ಹೇಳಿದ್ದಾರೆ..
ಹಸುಗಳಿಗೆ ಡ್ರೈ ಫ್ರೂಟ್ಸ್‌ ತಿನ್ನಿಸಿ, ಬಿಯರ್‌ ಕುಡಿಸಿ, ʼಗೋಮಾಂಸʼ ರುಚಿಯಾಗಿರುತ್ತೆ : ಮಾರ್ಕ್‌ ಜುಕರ್‌ಬರ್ಗ್‌ title=

Mark zuckerberg beef : ಮೆಟಾ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮುಖ್ಯಸ್ಥ ಟೆಕ್ ಬಿಲಿಯನೇರ್ ಮಾರ್ಕ್ ಜುಕರ್‌ಬರ್ಗ್. ಮಾರ್ಕ್‌ ಆಗಾಗ ತಮ್ಮ ಹೊಸ ಐಡಿಯಾ ಮತ್ತು ಆಲೋಚನೆಗಳಿಂದ ಸುದ್ದಿಯಲ್ಲಿರುತ್ತಾರೆ. ಇದೀಗ, ಗೋಮಾಂಸದ ಕುರಿತು ಮಾತನಾಡಿ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಇತ್ತೀಚಿಗೆ ಅವರು, ಕೇವಲ ಹಸುಗಳನ್ನು ಸಾಕುವುದು ಮಾತ್ರವಲ್ಲದೆ ಅವುಗಳಿಗೆ ಮಕಾಡಾಮಿಯಾ ಒಣ ಹಣ್ಣುಗಳು ಮತ್ತು ಬಿಯರ್ ಕುಡಿಸಿ ಬೆಳೆಸುವ ಮೂಲಕ ವಿಶ್ವದ ಅತ್ಯುತ್ತಮ ಗೋಮಾಂಸ ಉತ್ಪಾದಿಸಬಹುದು ಎಂದು ಹೇಳಿದ್ದಾರೆ..

ಹೌದು.. ‌ಮಾರ್ಕ್‌ ಜುಕರ್‌ಬರ್ಗ್ ಅವರು ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಮ್ಮ ಹಸು ಸಾಕಾಣಿಕೆ ಮತ್ತು ಗೋಮಾಂಸ ಉತ್ಪಾದನೆ ವ್ಯಾಪಾರದ ಕುರಿತು ಮಾತನಾಡಿದ್ದಾರೆ. ಗೋವುಗಳನ್ನು ಬೆಳೆಸುವುದು ಮಾತ್ರವಲ್ಲದೆ ಅವುಗಳ ಆಹಾರ ಶೈಲಿಯಲ್ಲಿ ಬದಲಾವಣೆ ಇರಬೇಕು, ಆಗ ಮಾತ್ರ ವಿಶ್ವದ ಉತ್ತಮ ಗುಣಮಟ್ಟದ ಗೋಮಾಂಸ ಉತ್ಪಾದಿಸಬಹುದು ಎಂದು ಹೇಳಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಮಾರ್ಕ್ ಜುಕರ್‌ಬರ್ಗ್ ಮಾರ್ಬಲ್ಡ್ ಗೋಮಾಂಸ ಊಟ ತಿನ್ನುತ್ತಿರುವುದನ್ನು ಕಾಣಬಹುದು.

 

ಇದನ್ನೂ ಓದಿ: UPI ಬಳಕೆದಾರರಿಗೆ ಒಂದು ಮಹತ್ವದ ಅಪ್ಡೇಟ್, ನಾಳೆಯಿಂದ ಆರಂಭಗೊಳ್ಳುತ್ತಿದೆ ಈ ವಿಶೇಷ ಸೇವೆ!

ಮಾರ್ಕ್‌ ಅವರ ಪೋಸ್‌ನಲ್ಲಿ, ಕೌವೈನಲ್ಲಿರುವ ಕೊಯೊಲೌ ರಾಂಚ್‌ನಲ್ಲಿ ವಾಗ್ಯು ಮತ್ತು ಆಂಗಸ್ ಎಂಬ ಜಾನುವಾರ ತಳಿಗಳನ್ನು ಸಾಕಲು ಪ್ರಾರಂಭಿಸಿದೆ. ನನ್ನ ಗುರಿ ಅಂದ್ರೆ, ಪ್ರಪಂಚದಲ್ಲೇ ಅತ್ಯುನ್ನತ ಗುಣಮಟ್ಟದ ಗೋಮಾಂಸವನ್ನು ಉತ್ಪಾದಿಸುವುದು. ಜಾನುವಾರುಗಳಿಗೆ ಮಕಾಡಾಮಿಯಾ ಡ್ರೈ ಫ್ರುಟ್ಸ್‌ ಮತ್ತು ಬಿಯರ್ ನೀಡಲಾಗುತ್ತದೆ. ಅಲ್ಲದೆ, ಪ್ರತಿ ಹಸು ಪ್ರತಿ ವರ್ಷವೂ 5,000-10,000 ಪೌಂಡ್‌ಗಳಷ್ಟು ಆಹಾರವನ್ನು ತಿನ್ನುತ್ತದೆ, ಆದ್ದರಿಂದ ಬಹಳಷ್ಟು ಎಕರೆಗಳಷ್ಟು ಮಕಾಡಾಮಿಯಾ ಮರಗಳನ್ನು ನೆಡಲು ನನ್ನ ಹೆಣ್ಣುಮಕ್ಕಳು ಸಹಾಯ ಮಾಡುತ್ತಾರೆ, ನಾವು ಇನ್ನೂ ಪ್ರಯಾಣದ ಆರಂಭದಲ್ಲಿಯೇ ಇದ್ದೇವೆ, ನನ್ನ ಎಲ್ಲಾ ಯೋಜನೆಗಳಲ್ಲಿ, ಇದು ಅತ್ಯಂತ ವಿಶೇಷ ಅಂತ ಹೇಳಿಕೊಂಡಿದ್ದಾರೆ.

ಇನ್ನು ಮಾರ್ಕ್‌ ಪೋಸ್ಟ್‌ಗೆ ವಿದೇಶಿಗರು ಮತ್ತು ಗೋಮಾಂಸ್‌ ಪ್ರಿಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಆದರೆ ಭಾರತದಂತಹ ಗೋಮಾಂಸ ನಿಷೇಧಿತ ರಾಷ್ಟ್ರಗಳ ಜನರು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲದೆ, ಭಾರತೀಯ ನೆಟ್ಟಿಗರು ಅವರ ಪೋಸ್ಟ್‌ಗೆ ಕಾಮೆಂಟ್‌ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News