Car Buying Tips : ನಿಮ್ಮ ಸಂಬಳದ ಪ್ರಕಾರ ನೀವು ಯಾವ ಕಾರು ಖರೀದಿಸಬಹುದು, ಇಲ್ಲಿದೆ ನೋಡಿ ಲೆಕ್ಕಾಚಾರ

Car budget Calculator : ಭಾರತದಲ್ಲಿ ನಿಮ್ಮ ಸ್ವಂತ ಹಣದಿಂದ ಕಾರನ್ನು ಖರೀದಿಸುವವಾರ ಸಂಖ್ಯೆ ತುಂಬಾ ಇದೆ. ಜನ ತಮ್ಮ ಬಜೆಟ್‌ಗೆ ಅನುಗುಣವಾಗಿ ಕಾರುಗಳನ್ನು ಖರೀದಿಸುತ್ತಾರೆ. ಅನೇಕ ಜನ ಹಣದ ಕೊರತೆಯ ಸಂದರ್ಭದಲ್ಲಿ ಸಾಲದ ಮೇಲೆ ಕಾರು ಖರೀದಿಸುತ್ತಾರೆ.

Written by - Channabasava A Kashinakunti | Last Updated : Dec 20, 2022, 10:37 PM IST
  • ಸ್ವಂತ ಹಣದಿಂದ ಕಾರನ್ನು ಖರೀದಿಸುವವಾರ ಸಂಖ್ಯೆ ತುಂಬಾ ಇದೆ
  • ಜನ ತಮ್ಮ ಬಜೆಟ್‌ಗೆ ಅನುಗುಣವಾಗಿ ಕಾರುಗಳನ್ನು ಖರೀದಿಸುತ್ತಾರೆ
  • ಸಂಬಳ ಮತ್ತು ಕಾರಿನ ಲೆಕ್ಕಾಚಾರ ಏನು?
 Car Buying Tips : ನಿಮ್ಮ ಸಂಬಳದ ಪ್ರಕಾರ ನೀವು ಯಾವ ಕಾರು ಖರೀದಿಸಬಹುದು, ಇಲ್ಲಿದೆ ನೋಡಿ ಲೆಕ್ಕಾಚಾರ title=

Car budget Calculator : ಭಾರತದಲ್ಲಿ ಸ್ವಂತ ಹಣದಿಂದ ಕಾರನ್ನು ಖರೀದಿಸುವವಾರ ಸಂಖ್ಯೆ ತುಂಬಾ ಇದೆ. ಜನ ತಮ್ಮ ಬಜೆಟ್‌ಗೆ ಅನುಗುಣವಾಗಿ ಕಾರುಗಳನ್ನು ಖರೀದಿಸುತ್ತಾರೆ. ಅನೇಕ ಜನ ಹಣದ ಕೊರತೆಯ ಸಂದರ್ಭದಲ್ಲಿ ಸಾಲದ ಮೇಲೆ ಕಾರು ಖರೀದಿಸುತ್ತಾರೆ. ಕಾರು ಖರೀದಿಸಲು ನಿಮಗೆ ಹಲವು ಆಯ್ಕೆಗಳಿವೆ. ಆದರೆ ಯಾವುದೇ ವಾಹನವನ್ನು ಖರೀದಿಸುವ ಮೊದಲು, ನಿಮ್ಮ ಬಜೆಟ್ ಅನ್ನು ಲೆಕ್ಕಹಾಕುವುದು ಬಹಳ ಮುಖ್ಯ. ಅನೇಕ ಜನ ಬಜೆಟ್‌ನಿಂದ ಹೊರಗೆ ಹೋಗಿ ಕಾರು ಖರೀದಿಸುತ್ತಾರೆ. ನಂತರ ಆರ್ಥಿಕ ಸಮಸ್ಯೆಯಿಂದ ಪಶ್ಚಾತ್ತಾಪ ಪಡುತ್ತಾರೆ. ನೀವು ಸಂಬಳ ಪಡೆಯುವ ಉದ್ಯೋಗಿಯಾಗಿದ್ದರೆ, ಹೊಸ ಕಾರು ಖರೀದಿಸಲು ಯೋಚಿಸುತ್ತಿದ್ದರೆ ನಿಮಗಾಗಿ ಕೆಲ ಟಿಪ್ಸ್ ಇವೆ. ಇದರಿಂದ ನೀವು ನಿಮ್ಮ ಸಂಬಳದ ಪ್ರಕಾರ ಯಾವ ಕಾರನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆಬ ಮಾಹಿತಿ ಇಲ್ಲಿದೆ ನೋಡಿ..

ಸಂಬಳ ಮತ್ತು ಕಾರಿನ ಲೆಕ್ಕಾಚಾರ ಏನು?

ನಿಯಮಿತ ಸಂಬಳ ಪಡೆಯುವ ವ್ಯಕ್ತಿಯು ಕಾರು ಖರೀದಿಸಲು ಎಷ್ಟು ಹಣವನ್ನು ಖರ್ಚು ಮಾಡಬೇಕು? ಇದಕ್ಕೆ ಸರಳ ನಿಯಮ ಇಲ್ಲಿದೆ ಅಂದರೆ, ನಿಮ್ಮ ವಾರ್ಷಿಕ ಆದಾಯ 10 ಲಕ್ಷ ರೂ ಆಗಿದ್ದರೆ, ಅದರ ಪ್ರಕಾರ ನೀವು ಹೊಸ ಕಾರಿಗೆ 5 ಲಕ್ಷಕ್ಕಿಂತ ಹೆಚ್ಚಿನ ಕಾರು ಖರೀದಿಸಬಾರದು. ಕಾರಿನ ಆನ್ ರೋಡ್ ಬೆಲೆ  5 ಲಕ್ಷ ರೂ. ಎಂಬುದನ್ನು ಸಹ ಗಮನಿಸಿ. ಇದರಲ್ಲಿ ವಾಹನದ ಎಕ್ಸ್ ಶೋ ರೂಂ ಬೆಲೆ, ವಿಮೆ ಮತ್ತು ನೋಂದಣಿ ವೆಚ್ಚವನ್ನು ಕೂಡ ಸೇರಿಸಲಾಗುತ್ತಿದೆ. ಅದೇ ರೀತಿ ನಿಮ್ಮ ಸಂಬಳ ವರ್ಷಕ್ಕೆ 20 ಲಕ್ಷ ಆಗಿದ್ದರೆ, 10 ಲಕ್ಷದವರೆಗೆ ಕಾರು ಖರೀದಿಸುವುದು ಒಳ್ಳೆಯದು.

ಇದನ್ನೂ ಓದಿ : PPF Scheme : ಕೇಂದ್ರ ಬಜೆಟ್‌ಗೂ ಮುನ್ನ ಪಿಪಿಎಫ್ ಖಾತೆದಾರರಿಗೆ ಗುಡ್ ನ್ಯೂಸ್!

- 5 ಲಕ್ಷದೊಳಗೆ ಉತ್ತಮ ಆಯ್ಕೆ ಕರುಗಳು - ಮಾರುತಿ ಸುಜುಕಿ ವ್ಯಾಗನ್ಆರ್, ಆಲ್ಟೊ ಅಥವಾ ರೆನಾಲ್ಟ್ ಕ್ವಿಡ್ ಇತ್ಯಾದಿ.
- 10 ಲಕ್ಷದೊಳಗಿನ ಅತ್ಯುತ್ತಮವಾಗಿವೆ - ಟಾಟಾ ನೆಕ್ಸಾನ್, ಮಾರುತಿ ಬಲೆನೊ, ಮಾರುತಿ ಬ್ರೆಝಾ, ಟಾಟಾ ಪಂಚ್ ಇತ್ಯಾದಿ.

ನೀವು ಸಾಲದ ಮೇಲೆ ಕಾರನ್ನು ತೆಗೆದುಕೊಳ್ಳುತ್ತಿದ್ದರೆ

ನೀವು EMI ನಲ್ಲಿ ಕಾರನ್ನು ಖರೀದಿಸುತ್ತಿದ್ದರೆ, ನೀವು 20-4-10 ನಿಯಮವನ್ನು ಅನುಸರಿಸಬೇಕು. ಇದರಿಂದ ನಿಮಗೆ ತುಂಬಾ ಪ್ರಯೋಜನವಾಗುತ್ತದೆ. ಈ ಯೋಜನೆಯ ಅಡಿಯಲ್ಲಿ, ವಾಹನದ ವೆಚ್ಚದ 20% ರಷ್ಟು ಡೌನ್ ಪಾವತಿ ಮಾಡಿ, ಗರಿಷ್ಠ ನಾಲ್ಕು ವರ್ಷಗಳ ಸಾಲದ ಅವಧಿಯನ್ನು ಆಯ್ಕೆಮಾಡಿ ಮತ್ತು ಮಾಸಿಕ ಪಾವತಿಗಳನ್ನು (EMI, ನಿರ್ವಹಣೆ ಇತ್ಯಾದಿ) ನಿಮ್ಮ ಸಂಬಳದ 10% ನಲ್ಲಿ ಇರಿಸಿ.

ಇದನ್ನೂ ಓದಿ : FD Interest Rate : ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ : FD ಬಡ್ಡಿದರ ಹೆಚ್ಚಿಸಿದ ಬ್ಯಾಂಕ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News