New Traffic Rules: ಇನ್ಮುಂದೆ ಕಡಿಮೆ ವೇಗದಲ್ಲಿ ವಾಹನ ಚಲಾಯಿಸಿದರೂ ಕೂಡ ದಂಡ ಬೀಳಲಿದೆ, ಏನಿದು ಹೊಸ ನಿಯಮ?

Updated Traffic Rules: ಹೆದ್ದಾರಿಗಳಲ್ಲಿ ನಿಮ್ಮ ವಾಹನ ನಿಗದಿತ ವೇಗದಲ್ಲಿ ಚಲಿಸಬೇಕು ಎಂದು ಸರ್ಕಾರ ಇದೀಗ ಬಯಸುತ್ತಿದೆ. ಒಂದು ವೇಳೆ ನೀವು ಹೆದ್ದಾರಿಗಳಲ್ಲಿ ವಾಹನ ನಿಗದಿತ ವೇಗದಲ್ಲಿ ಚಲಾಯಿಸದೇ ಹೋದಲ್ಲಿ ನಿಮಗೆ ರೂ.500 ರಿಂದ ರೂ.2000 ವರೆಗೆ ದಂಡ ಬೀಳುವ ಸಾಧ್ಯತೆ ಇದೆ.  

Written by - Nitin Tabib | Last Updated : Jul 18, 2022, 07:34 PM IST
  • ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ, ದಂಡ ಬೀಳದಂತೆ ನಾವು ವಿಶೇಷ ಕಾಳಜಿ ವಹಿಸಬೇಕು.
  • ಸರಕಾರದಿಂದ ಇಂತಹ ಹಲವು ನಿಯಮಗಳಿದ್ದು, ಅವುಗಳನ್ನು ನಾವು ಅನುಸರಿಸಲೇಬೇಕು.
  • ಸಾಮಾನ್ಯವಾಗಿ ಜನರು ವೇಗವಾಗಿ ವಾಹನ ಚಲಾಯಿಸಿದ್ದಕ್ಕೆ ಬೆಲೆ ಪಾವತಿಸಬೇಕಾಗುತ್ತದೆ.
New Traffic Rules: ಇನ್ಮುಂದೆ ಕಡಿಮೆ ವೇಗದಲ್ಲಿ ವಾಹನ ಚಲಾಯಿಸಿದರೂ ಕೂಡ ದಂಡ ಬೀಳಲಿದೆ, ಏನಿದು ಹೊಸ ನಿಯಮ? title=
New Traffic Rules

Traffice Rule Update: ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ, ದಂಡ ಬೀಳದಂತೆ ನಾವು ವಿಶೇಷ ಕಾಳಜಿ ವಹಿಸಬೇಕು. ಸರಕಾರದಿಂದ ಇಂತಹ ಹಲವು ನಿಯಮಗಳಿದ್ದು, ಅವುಗಳನ್ನು ನಾವು ಅನುಸರಿಸಲೇಬೇಕು. ಸಾಮಾನ್ಯವಾಗಿ ಜನರು ವೇಗವಾಗಿ ವಾಹನ ಚಲಾಯಿಸಿದ್ದಕ್ಕೆ ಬೆಲೆ ಪಾವತಿಸಬೇಕಾಗುತ್ತದೆ. ಆದರೆ ಇದೀಗ ನಿಧಾನವಾಗಿ ವಾಹನ ಚಲಾಯಿಸುವವರಿಗೂ ಕೂಡ ಈ ಭಯ ಕಾಡಲಿದೆ. ಏಕೆಂದರೆ ಇದೀಗ ನಿಧಾನ ಚಾಲನೆಗೂ ಕೂಡ ನಿಮಗೆ ದಂಡ ಬೀಳಲಿದೆ.

ಈ ಹೆದ್ದಾರಿಯಲ್ಲಿ ನೀವು ವಾನನವನ್ನು 'ಸ್ಲೋ ಸ್ಪೀಡ್' ಓಡಿಸುವಂತಿಲ್ಲ
ಹೌದು, ಇದೀಗ ಸರ್ಕಾರವೇ ಹೆದ್ದಾರಿಯಲ್ಲಿ ನಿಮ್ಮ ವಾಹನ ವೇಗವಾಗಿ ಓದಬೇಕು ಎಂದು ಬಯಸುತ್ತಿದೆ. ಈ ರೀತಿ ಮಾಡದೆ ಇರುವವರಿಗೂ ಕೂಡ ದಂಡ ಬೀಳಲಿದೆ. ಈ ದಂಡ ರೂ. 500 ರಿಂದ ರೂ. 2000 ವರೆಗೆ ಇರಲಿದೆ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ಈ ಹೊಸ ನಿಯಮ ಜಾರಿಗೆ ತರಲಾಗಿದೆ. ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ ದೇಶದ ಉನ್ನತ ದರ್ಜೆಯ ಹೆದ್ದಾರಿಗಳಲ್ಲಿ ಒಂದಾಗಿದೆ.

ಹೊಸ ಚಲನ್ ನಿಯಮ ಏನು?
ದೇಶದಲ್ಲಿ ಹೆಚ್ಚಿನ ಅಪಘಾತಗಳು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಸಂಭವಿಸುತ್ತವೆ. ಓವರ್‌ಟೇಕ್ ಮಾಡುವಾಗ, ನಿಮ್ಮ ವಾಹನದ ವೇಗದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕಾಗಲಿದೆ. ವಿಶೇಷವಾಗಿ ಸಿಂಗಲ್ ರೋಡ್‌ಗಳಲ್ಲಿ ಓವರ್‌ಟೇಕ್ ಮಾಡುವಾಗ ಚಾಲಕರು ಬಹಳ ಜಾಗರೂಕರಾಗಿರಬೇಕು. ಇದೇ ರೀತಿ, ಇದೀಗ ನೀವು ಎಕ್ಸ್‌ಪ್ರೆಸ್‌ವೇನಲ್ಲಿ ಚಾಲನೆ ಮಾಡುತ್ತಿದ್ದರೆ, ಓವರ್‌ಟೇಕ್ ಮಾಡುವಾಗ ನಿಗದಿತ ವೇಗದ ಮಿತಿಗಿಂತ ಕಡಿಮೆ ವಾಹನ ಚಲಾಯಿಸಿದರೆ ನಿಮಗೆ ದಂಡ ಬೀಳಲಿದೆ.

ಎಕ್ಸ್‌ಪ್ರೆಸ್‌ವೇನಲ್ಲಿ ಆಗಾಗ್ಗೆ ಜಾಮ್ ಸಂದರ್ಭ ಸೃಷ್ಟಿಯಾಗುತ್ತದೆ
ದೇಶದ ಈ ಅತ್ಯುತ್ತಮ ಹೆದ್ದಾರಿ ಇನ್ನೂ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ದೆಹಲಿಯಿಂದ ಮೀರತ್‌ಗೆ ಹೋಗುವ ಮಾರ್ಗದಲ್ಲಿ ಗಾಜಿಯಾಬಾದ್‌ನ ಲಾಲ್ಕುವಾನ್ ಮೇಲ್ಸೇತುವೆ ಬಳಿ ಇಂದಿಗೂ ಈ ಹೆದ್ದಾರಿಯಲ್ಲಿ ನಿರ್ಮಾಣ ಕಾರ್ಯ ಮುಂದುವರೆದಿದೆ. ಗಾಜಿಯಾಬಾದ್‌ನಿಂದ ಮೀರತ್‌ಗೆ ಹೋಗುವ ಸಮಯದಲ್ಲಿ, ವಿಜಯನಗರ, ಕ್ರಾಸಿಂಗ್ ರಿಪಬ್ಲಿಕ್ ಸೊಸೈಟಿಯ ಮುಂಭಾಗದಲ್ಲಿರುವ ಈ ಹೆದ್ದಾರಿಯಲ್ಲಿ ಆಗಾಗ್ಗೆ ರೋಡ್ ಜಾಮ್ ಸಂದರ್ಭ ಸೃಷ್ಟಿಯಾಗುತ್ತದೆ.

ಇದನ್ನೂ ಓದಿ-EPFO New Update: ಪಿಎಫ್ ಖಾತೆದಾರರಿಗೆ ಶೀಘ್ರವೆ ಸಿಗಲಿದೆ ಗುಡ್ ನ್ಯೂಸ್...!

ಓವರ್ ಟೇಕ್ ನಿಂದ ಅಪಘಾತಗಳು ಸಂಭವಿಸುತ್ತಿವೆ
ದೆಹಲಿ ಮೀರತ್ ಎಕ್ಸ್‌ಪ್ರೆಸ್‌ವೇ ವೇಗದ ಮಿತಿ ಗಂಟೆಗೆ 100 ಕಿಮೀ ಮತ್ತು ದೊಡ್ಡ ವಾಹನಗಳಿಗೆ ವೇಗದ ಮಿತಿ ಗಂಟೆಗೆ 80 ಕಿಮೀ ಇದೆ. NHAI ಪ್ರಕಾರ, 'ಹೆದ್ದಾರಿಗಳು ಮತ್ತು ಬಾಹ್ಯ ಎಕ್ಸ್‌ಪ್ರೆಸ್‌ವೇಗಳಲ್ಲಿ ಹೆಚ್ಚಿನ ಅಪಘಾತಗಳು ಓವರ್‌ಟೇಕಿಂಗ್‌ನಿಂದ ಸಂಭವಿಸುತ್ತವೆ ಎನ್ನಲಾಗಿದೆ. ಇವುಗಳನ್ನು ನಿಯಂತ್ರಿಸುವುದು ಪ್ರಾಧಿಕಾರದ ಮೊದಲ ಆದ್ಯತೆಯಾಗಿದೆ. ಈ ಮಾರ್ಗಗಳಲ್ಲಿ ಅಪಘಾತಗಳಿಗೆ ಎರಡನೇ ಕಾರಣವೆಂದರೆ ಕೆಲವು ನಿರ್ಲಕ್ಷ ಚಾಲಕರು ಪ್ರಾಧಿಕಾರವು ನಿಗದಿಪಡಿಸಿದ ವೇಗದ ಮಿತಿಗಿಂತ ಕಡಿಮೆ ವೇಗದಲ್ಲಿ ಚಾಲನೆ ಮಾಡುತ್ತಾರೆ. ಇದುವರೆಗೆ NHAI ನಿಗದಿತ ವೇಗದ ಮಿತಿಯೊಳಗೆ ಚಾಲನೆ ಮಾಡಲು ಉತ್ತೇಜಿಸುತ್ತಿತ್ತು. ಆದರೆ ಇದೀಗ ಓವರ್‌ಟೇಕ್ ಮಾಡುವಲ್ಲಿ ಎಚ್ಚರಿಕೆ ಮತ್ತು ನಿಗದಿತ ವೇಗದ ಮಿತಿಗಿಂತ ಕಡಿಮೆ ವೇಗದಲ್ಲಿ ವಾಹನ ಚಾಲನೆ ಮಾಡದಿರುವ ಬಗ್ಗೆಯೂ ಮಾಹಿತಿ ನೀಡಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ-New Wage Code Update: ಹೊಸ ವೇತನ ಸಂಹಿತೆ ಯಾವಾಗ ಜಾರಿಗೆ ಬರಲಿದೆ, ಲೋಕಸಭೆಗೆ ಕಾರ್ಮಿಕ ಸಚಿವರು ನೀಡಿದ ಮಾಹಿತಿ ಏನು?

ನಿಧಾನ ಗತಿಯ ವಾಹನಗಳ ಚಲನ್‌ಗಳನ್ನು ಕಡಿತಗೊಳಿಸಲಾಗುವುದು
ಈ ಹೊಸ ಜಾಹೀರಾತುಗಳಲ್ಲಿ, ಚಾಲಕರು ನಿಗದಿತ ಮಿತಿಗಿಂತ ಕಡಿಮೆ ವೇಗದಲ್ಲಿ ಚಾಲನೆ ಮಾಡಿ ಸಿಕ್ಕಿಬಿದ್ದರೆ, ರೂ.500 ರಿಂದ ರೂ.2000 ವರೆಗಿನ ಚಲನ್ ಅನ್ನು ಸಹ ಕಡಿತಗೊಳಿಸಲಾಗುವುದು ಎಂದು ಹೇಳಲಾಗಿದೆ. ಅದೇ ರೀತಿ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವವರ ಚಲನ್ ಕಡಿತಗೊಳಿಸುವ ನಿಯಮ ಮೊದಲಿನಿಂದಲೇ ಜಾರಿಯಲ್ಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News