Bharat Atta-Rice : ರೈಲು ನಿಲ್ದಾಣಗಳಲ್ಲಿಯೂ ಸಿಗುತ್ತದೆ ಅಗ್ಗದ ಅಕ್ಕಿ, ಗೋಧಿ ಹಿಟ್ಟು : 500 ನಿಲ್ದಾಣಗಳಲ್ಲಿದೆ ಈ ಸೌಲಭ್ಯ

Bharat Atta-Rice: ಇನ್ನು ಮುಂದೆ ರೈಲ್ವೇ ನಿಲ್ದಾಣದಲ್ಲಿಯೂ ಭಾರತ್  ಅಕ್ಕಿ  ಮತ್ತು ಗೋಧಿ ಹಿಟ್ಟು ಸಿಗುತ್ತದೆ.  

Written by - Ranjitha R K | Last Updated : Mar 19, 2024, 06:19 PM IST
  • ಕೇಂದ್ರ ಸರ್ಕಾರವು ಸಾರ್ವಜನಿಕರಿಗಾಗಿ ಅನೇಕ ಸರ್ಕಾರಿ ಯೋಜನೆಗಳನ್ನು ನಡೆಸುತ್ತಿದೆ.
  • ಅಗ್ಗದ ದರದಲ್ಲಿ ಗೋಧಿ ಮತ್ತು ಅಕ್ಕಿಯ ಸೌಲಭ್ಯ ಸಿಗಲಿದೆ.
  • ರೈಲ್ವೇ ನಿಲ್ದಾಣದಲ್ಲಿಯೂ ಭಾರತ್ ಅಕ್ಕಿ ಮತ್ತು ಗೋಧಿ ಹಿಟ್ಟು ಸಿಗುತ್ತದೆ.
Bharat Atta-Rice : ರೈಲು ನಿಲ್ದಾಣಗಳಲ್ಲಿಯೂ ಸಿಗುತ್ತದೆ ಅಗ್ಗದ ಅಕ್ಕಿ, ಗೋಧಿ ಹಿಟ್ಟು : 500 ನಿಲ್ದಾಣಗಳಲ್ಲಿದೆ ಈ ಸೌಲಭ್ಯ   title=

Bharat Atta-Rice : ಕೇಂದ್ರ ಸರ್ಕಾರವು ಸಾರ್ವಜನಿಕರಿಗಾಗಿ ಅನೇಕ ಸರ್ಕಾರಿ ಯೋಜನೆಗಳನ್ನು ನಡೆಸುತ್ತಿದೆ. ಈಗ ಅಗ್ಗದ ದರದಲ್ಲಿ ಗೋಧಿ ಮತ್ತು ಅಕ್ಕಿಯ ಸೌಲಭ್ಯ ಸಿಗಲಿದೆ. ವಿಶೇಷವೆಂದರೆ ರೈಲ್ವೇ ನಿಲ್ದಾಣದಲ್ಲಿ ಕಡಿಮೆ ಬೆಲೆಯಲ್ಲಿ ಹಿಟ್ಟು ಮತ್ತು ಅಕ್ಕಿ ಸಿಗುತ್ತದೆ. ಹೌದು, ಇನ್ನು ಮುಂದೆ ರೈಲ್ವೇ ನಿಲ್ದಾಣದಲ್ಲಿಯೂ ಭಾರತ್  ಅಕ್ಕಿ ಮತ್ತು ಗೋಧಿ ಹಿಟ್ಟು ಸಿಗುತ್ತದೆ.  

ಈಶಾನ್ಯ ರೈಲ್ವೆ ಆರಂಭಿಸಿರುವ ಈ ಉಪಕ್ರಮವು ರೈಲು ನಿಲ್ದಾಣದ ಸಮೀಪ ವಾಸಿಸುವ ಜನ, ಮಾರಾಟಗಾರರು ಮತ್ತು ದೈನಂದಿನ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತದೆ. ಇನ್ನು ಮುಂದೆ ನಿಲ್ದಾಣದ ಆವರಣದಲ್ಲಿ ಮಾತ್ರ ಪಡಿತರ ಮಾರಾಟ ಮಾಡಲಾಗುವುದು. 

ಇದನ್ನೂ ಓದಿ : Indian Oil Company: ಇಂಡಿಯನ್ ಆಯಿಲ್ ಕಂಪನಿ ನಿರ್ದೇಶಕರಾಗಿ ರಶ್ಮಿ ಗೋವಿಲ್ ನೇಮಕ

ಈ ವ್ಯವಸ್ಥೆಯು 3 ತಿಂಗಳವರೆಗೆ ಇರುತ್ತದೆ :
ಇನ್ನು ಮುಂದೆ ರೈಲ್ವೇ ನಿಲ್ದಾಣದಿಂದ ಹಿಟ್ಟು ಮತ್ತು ಅಕ್ಕಿಯನ್ನು ಖರೀದಿಸಬಹುದು. ಮೊಬೈಲ್ ವ್ಯಾನ್‌ಗಳ ಮೂಲಕ ನಿಲ್ದಾಣದ ಆವರಣದಲ್ಲಿ ಹಿಟ್ಟು ಮತ್ತು ಅಕ್ಕಿಯನ್ನು ಮಾರಾಟ ಮಾಡಲಾಗುತ್ತದೆ.3 ತಿಂಗಳಿನಿಂದ ಈ ವ್ಯವಸ್ಥೆ ಆರಂಭಿಸಲಾಗುತ್ತಿದೆ. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತರೆ ಈ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸಲಾಗುವುದು. 

ಮೊಬೈಲ್ ವ್ಯಾನ್ ರೈಲು ನಿಲ್ದಾಣದಲ್ಲಿ 2 ಗಂಟೆಗಳ ಕಾಲ ನಿಲ್ಲುತ್ತದೆ :
ಈ ಮೊಬೈಲ್ ವ್ಯಾನ್ ರೈಲು ನಿಲ್ದಾಣದಲ್ಲಿ 2 ಗಂಟೆಗಳ ಕಾಲ ನಿಲ್ಲುತ್ತದೆ. ರೈಲು ನಿಲ್ದಾಣದಲ್ಲಿ ಕೇವಲ 2 ಗಂಟೆ ನಿಲ್ಲಲು ಮಾತ್ರ ಈ ವ್ಯಾನ್ ಗೆ ಅನುಮತಿ ನೀಡಲಾಗಿದೆ. ಈ ಮೊಬೈಲ್ ವ್ಯಾನ್ ಗಳು ತಮ್ಮ ಪ್ರಚಾರಕ್ಕಾಗಿ ಬ್ಯಾನರ್‌ಗಳನ್ನು ಹಾಕಬಹುದು. ಅಲ್ಲದೆ, 3 ತಿಂಗಳ ಮಾರಾಟಕ್ಕೆ ಆಯ್ಕೆಯಾದ ಏಜೆನ್ಸಿಯಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ.  

ಇದನ್ನೂ ಓದಿ : Meghana Foods: ಬೆಂಗಳೂರಿನ ಜನಪ್ರಿಯ ಮೇಘನಾ ಫುಡ್ಸ್ ರೆಸ್ಟೋರೆಂಟ್ ಮೇಲೆ ಐಟಿ ದಾಳಿ!

1 ಕೆಜಿ ಗೋಧಿಹಿಟ್ಟು ಮತ್ತು ಅಕ್ಕಿಯ ಬೆಲೆ ಎಷ್ಟು? : 
ಮೊಬೈಲ್ ವ್ಯಾನ್‌ಗಳ ಮೂಲಕ ಮಾರಾಟವಾಗುವ ಗೋಧಿ ಹಿಟ್ಟು ಮತ್ತು ಅಕ್ಕಿ ಎರಡರ ಬೆಲೆಯನ್ನೂ ನಿಗದಿಪಡಿಸಲಾಗಿದೆ. ಇದರಲ್ಲಿ ಭಾರತ್ ಬ್ರಾಂಡ್ ಗೋಧಿ ಹಿಟ್ಟನ್ನು ಕೆಜಿಗೆ 27.50 ರೂ.ಯಂತೆ ಮತ್ತು ಅಕ್ಕಿಯನ್ನು ಕೆಜಿಗೆ 29 ರೂ.ಯಂತೆ ಮಾರಾಟ ಮಾಡಲಾಗುವುದು.  

505 ನಿಲ್ದಾಣಗಳಲ್ಲಿ ಸೌಲಭ್ಯ ಆರಂಭ : 
ಪ್ರಸ್ತುತ, ಈ ಸೌಲಭ್ಯವನ್ನು ರೈಲ್ವೇ 505 ನಿಲ್ದಾಣಗಳಲ್ಲಿ ಪ್ರಾರಂಭಿಸಿದೆ. ಇತ್ತೀಚೆಗಷ್ಟೇ ಸರ್ಕಾರವು ಭಾರತ್ ಬ್ರಾಂಡ್ ಹಿಟ್ಟು ಮತ್ತು ಅಕ್ಕಿಯನ್ನು ಸಾಮಾನ್ಯ ಜನರಿಗೆ ಪರಿಹಾರ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಯಿತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News