ಭಾರತೀಯ ಸ್ಟೇಟ್ ಬ್ಯಾಂಕ್ (SBI) ಟೀಕೆಗಳ ನಂತರ ಗರ್ಭಿಣಿಯರ ನೇಮಕಾತಿಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಹಿಂತೆಗೆದುಕೊಳ್ಳಬೇಕಾಯಿತು. ಈ ಪ್ರಕರಣದಲ್ಲಿ ದೆಹಲಿ ಮಹಿಳಾ ಆಯೋಗವೂ ಬ್ಯಾಂಕ್ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.
ವಿವಾದ ಉಲ್ಬಣಗೊಳ್ಳುತ್ತಿದ್ದಂತೆ, ಸಾರ್ವಜನಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಗರ್ಭಿಣಿ ಮಹಿಳಾ ಅಭ್ಯರ್ಥಿಗಳ ನೇಮಕಾತಿಗಾಗಿ (SBI Woman Recruitment) ಪರಿಷ್ಕೃತ ಮಾರ್ಗಸೂಚಿಗಳನ್ನು ಸ್ಥಗಿತಗಿಲಿಸಲು ಎಸ್ಬಿಐ ನಿರ್ಧರಿಸಿದೆ. ಗರ್ಭಿಣಿಯರ ನೇಮಕಾತಿಗೆ ಸಂಬಂಧಿಸಿದ ಹಳೆಯ ನಿಯಮಗಳೇ ಅನ್ವಯಿಸಲಿದೆ ಎಂದು ಬ್ಯಾಂಕ್ (SBI) ಹೇಳಿದೆ.
SBI New Employee Guideline - ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ, ಗರ್ಭಿಣಿ ಮಹಿಳೆಯರನ್ನು 'ಅನ್ ಫಿಟ್ (ಅನರ್ಹರು)' ಎಂದು ಹೇಳುವ ಗೈಡ್ ಲೈನ್ ಇದೀಗ ಭಾರಿ ಗೊಂದಲಕ್ಕೆ ಕಾರಣವಾಗಿದೆ. ಸದ್ಯ ದೆಹಲಿಯ ಮಹಿಳಾ ಆಯೋಗ ಬ್ಯಾಂಕ್ ಗೆ ನೋಟಿಸ್ ಜಾರಿಗೊಳಿಸಿ ಉತ್ತರ ಕೋರಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.