Term Insurance: ಈಗ ಎಲ್ಲರಿಗೂ ಟರ್ಮ್ ಇನ್ಶೂರೆನ್ಸ್ ಸಿಗುವುದಿಲ್ಲ, ಬದಲಾಗಿವೆ ನಿಯಮಗಳು

ನಿಮ್ಮ ಆದಾಯ 5 ಲಕ್ಷಕ್ಕಿಂತ ಕಡಿಮೆಯಿದ್ದರೆ & ನೀವು ಪದವೀಧರರಲ್ಲದಿದ್ದರೆ ದೇಶದ ಉನ್ನತ ಖಾಸಗಿ ಕಂಪನಿಗಳು ನಿಮಗೆ ಟರ್ಮ್ ಇನ್ಶೂರೆನ್ಸ್ ನೀಡುವುದಿಲ್ಲ.

Written by - Puttaraj K Alur | Last Updated : Dec 29, 2021, 08:43 PM IST
  • ಈಗ ಟರ್ಮ್ ಲೈಫ್ ಇನ್ಶೂರೆನ್ಸ್ ತೆಗೆದುಕೊಳ್ಳುವುದು ಮೊದಲಿನಂತೆ ಸುಲಭವಲ್ಲ
  • 5 ಲಕ್ಷಕ್ಕಿಂತ ಆದಾಯ ಕಡಿಮೆಯಿದ್ದರೆ & ಪದವೀಧರರಲ್ಲದಿದ್ದರೆ ನಿಮಗೆ ಟರ್ಮ್ ಇನ್ಶೂರೆನ್ಸ್ ಸಿಗುವುದಿಲ್ಲ
  • ಚಿಕ್ಕ ವಯಸ್ಸಿನಲ್ಲಿ ಟರ್ಮ್ ಇನ್ಶೂರೆನ್ಸ್ ತೆಗೆದುಕೊಳ್ಳುವುದು ಹೆಚ್ಚು ಪ್ರಯೋಜನಕಾರಿ
Term Insurance: ಈಗ ಎಲ್ಲರಿಗೂ ಟರ್ಮ್ ಇನ್ಶೂರೆನ್ಸ್ ಸಿಗುವುದಿಲ್ಲ, ಬದಲಾಗಿವೆ ನಿಯಮಗಳು title=
ಗಳಿಕೆಯ ಆಧಾರದ ಮೇಲೆ ವಿಮೆ ಲಭ್ಯ

ನವದೆಹಲಿ: ನೀವೂ ಕೂಡ ಟರ್ಮ್ ಲೈಫ್ ಇನ್ಶೂರೆನ್ಸ್(Term Life Insurance) ತೆಗೆದುಕೊಳ್ಳುವ ಯೋಚನೆಯಲ್ಲಿದ್ದರೆ ಈಗ ಅದನ್ನು ತೆಗೆದುಕೊಳ್ಳುವುದು ಸುಲಭವಲ್ಲ. ಹೊಸ ನಿಯಮಗಳ ಪ್ರಕಾರ ನಿಮ್ಮ ಆದಾಯ 5 ಲಕ್ಷಕ್ಕಿಂತ ಕಡಿಮೆಯಿದ್ದರೆ ಮತ್ತು ನೀವು ಪದವೀಧರರಲ್ಲದಿದ್ದರೆ, ದೇಶದ ಉನ್ನತ ಖಾಸಗಿ ಕಂಪನಿಗಳು ನಿಮಗೆ ಟರ್ಮ್ ಇನ್ಶೂರೆನ್ಸ್ ನೀಡುವುದಿಲ್ಲ. IRDAI ಕಡಿಮೆ ಆದಾಯದ ಜನರಿಗೆ ಪ್ರಮಾಣಿತ ಅವಧಿಯ ವಿಮೆಯನ್ನು ಘೋಷಿಸಿದೆ. ಆದರೆ ಸಾಮಾನ್ಯ ಪಾಲಿಸಿಗೆ ಹೋಲಿಸಿದರೆ ಕಂಪನಿಗಳ ಪ್ರೀಮಿಯಂ 3 ಪಟ್ಟು ಹೆಚ್ಚು ಅಥವಾ ಕಡಿಮೆ ಅವಧಿಗೆ ಪಾಲಿಸಿಯನ್ನು ನೀಡಲಾಗುತ್ತದೆ. ಕೋವಿಡ್ ಕ್ಲೈಮ್ ಅನ್ನು ಹೆಚ್ಚಿಸಿದ ನಂತರ ಕಂಪನಿಗಳು ಷರತ್ತುಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿವೆ.

ಟರ್ಮ್ ಇನ್ಶೂರೆನ್ಸ್ ಎಂದರೇನು?

ಟರ್ಮ್ ಇನ್ಶೂರೆನ್ಸ್(Term Insurance) ಎನ್ನುವುದು ಒಂದು ರೀತಿಯ ಜೀವ ವಿಮೆಯಾಗಿದ್ದು, ಇದು ಜೀವನದ ಅನಿಶ್ಚಿತತೆಗಳ ವಿರುದ್ಧ ಸಮಗ್ರ ಆರ್ಥಿಕ ರಕ್ಷಣೆ ನೀಡುತ್ತದೆ. ನೀವು ಖರೀದಿಸಿದ ಅವಧಿಯ ವಿಮಾ ಯೋಜನೆಯನ್ನು ಅವಲಂಬಿಸಿ, ಪಾಲಿಸಿ ಅವಧಿಯಲ್ಲಿ ನಿಮ್ಮ ಅಕಾಲಿಕ ಮರಣದ ಸಂದರ್ಭದಲ್ಲಿ ನಿಮ್ಮ ಕುಟುಂಬವು ಸಂಪೂರ್ಣ ವಿಮಾ ಮೊತ್ತದ ಪ್ರಯೋಜನ ಪಡೆಯುತ್ತದೆ. ನಿಮ್ಮ ಅನುಪಸ್ಥಿತಿಯಲ್ಲಿ ಪಡೆದ ಹಣವು ನಿಮ್ಮ ಕುಟುಂಬದ ಸದಸ್ಯರಿಗೆ ಆರ್ಥಿಕ ತೊಂದರೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Petrol-Diesel Price : ಪೆಟ್ರೋಲ್ ದರಲ್ಲಿ ₹25 ಇಳಿಕೆ ಮಾಡಿದ ಈ ರಾಜ್ಯ ಸರ್ಕಾರ!

ಈಗ ಈ ನಿಯಮಗಳು ಅನ್ವಯಿಸುತ್ತವೆ

  • ಸಾಮಾನ್ಯ ಅವಧಿಯ ವಿಮಾ ಯೋಜನೆಯನ್ನು ಪಡೆಯಲು ಪದವೀಧರರಾಗಿರಬೇಕು. 
  • ಶಿಕ್ಷಣ ಅರ್ಹತೆ ಪದವಿ ಹೊಂದಿಲ್ಲದಿದ್ದರೆ ವಾರ್ಷಿಕ 10 ಲಕ್ಷದವರೆಗೆ ಆದಾಯ ಗಳಿಸಬೇಕು.
  • ಟರ್ಮ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಪ್ರೀಮಿಯಂ ಮತ್ತು ಷರತ್ತುಗಳನ್ನು ನಿರ್ಧರಿಸುವ ಹಕ್ಕನ್ನು ಕಂಪನಿಗಳು ಹೊಂದಿರುತ್ತವೆ.  
  • ಮರುವಿಮಾ ಕಂಪನಿಗಳು ಜೀವ ವಿಮಾ ಕಂಪನಿಗಳಿಗೆ ಕಟ್ಟುನಿಟ್ಟನ್ನು ಹೆಚ್ಚಿಸಿವೆ.
  • ಕ್ಲೈಮ್ ಮಾದರಿಯಲ್ಲಿ ಬದಲಾವಣೆಯಾದ ನಂತರ ಮರು-ವಿಮಾ ಪ್ರೀಮಿಯಂ ಮತ್ತಷ್ಟು ಹೆಚ್ಚಾಗಿದೆ.
  • ಪ್ರಪಂಚದಾದ್ಯಂತ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಟರ್ಮ್ ಪ್ಲಾನ್ ದರಗಳು ತುಂಬಾ ಕಡಿಮೆಯಾಗಿದೆ. 
  • ಕಡಿಮೆ ಆದಾಯದ ಜನರಿಗೆ IRDAIನ ‘ಸರಳ್ ಜೀವನ್ ಬಿಮಾ’ ಪ್ರಮಾಣಿತ ಅವಧಿಯ ವಿಮೆ ಇದೆ  
  • ‘ಸರಳ್ ಜೀವನ್ ಪಾಲಿಸಿ’ಯ ಪ್ರೀಮಿಯಂ ಸಾಮಾನ್ಯ ಪಾಲಿಸಿಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಿದೆ.

ಗಳಿಕೆಯ ಆಧಾರದ ಮೇಲೆ ವಿಮೆ ಲಭ್ಯ

ಉದಾಹರಣೆಗೆ ನೀವು SBI ಲೈಫ್‌ನ ಅವಧಿಯ ವಿಮೆ(Life Insurance) ತೆಗೆದುಕೊಳ್ಳಲು 40 ವರ್ಷಗಳ ಕವರೇಜ್‌ಗಾಗಿ ಪುರುಷನ ವಯಸ್ಸು 30 ವರ್ಷವಾಗಿರಬೇಕು. ಮತ್ತೊಂದೆಡೆ 50 ಲಕ್ಷ ರೂ.ದ ವಿಮಾ ಮೊತ್ತದ ಸಾಮಾನ್ಯ ಪಾಲಿಸಿಗೆ ಗಳಿಕೆಯು 5 ಲಕ್ಷಕ್ಕಿಂತ ಹೆಚ್ಚಾಗಿರಬೇಕು ಮತ್ತು ಅದರ ಪ್ರೀಮಿಯಂ 9,614 ರೂ. ಆಗಿರಲಿದ್ದು, ಇದನ್ನು ಪಡೆಯಲು ಪದವೀಧರರಾಗಿರಬೇಕು. ಅದೇ ರೀತಿ 25 ಲಕ್ಷ ರೂ.ನ ‘ಸರಳ್ ಜೀವನ್ ಪಾಲಿಸಿ’ಗೆ 15,518 ರೂ ಪ್ರೀಮಿಯಂ ಪಾವತಿಸಬೇಕಾಗಿದ್ದರೂ ಪದವಿಯ ಷರತ್ತು ಕಡ್ಡಾಯವಾಗಿರುವುದಿಲ್ಲ.

ಇದನ್ನೂ ಓದಿ: New Wage Code : ಉದ್ಯೋಗಿಗಳಿಗೆ ಸಿಹಿ ಸುದ್ದಿ : ಈಗ ವಾರದಲ್ಲಿ 4 ದಿನ ಮಾತ್ರ ಆಫೀಸ್ ಕೆಲಸ, 3 ದಿನ ರಜೆ!

HDFC ಲೈಫ್ 40 ವರ್ಷಗಳ ಕವರೇಜ್‌ಗಾಗಿ ವ್ಯಕ್ತಿಯು ವಾರ್ಷಿಕ 5 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸುತ್ತಿರಬೇಕು ಮತ್ತು HDFC ಲೈಫ್‌ಗಾಗಿ 50 ಲಕ್ಷ ಮೊತ್ತದ ಸಾಮಾನ್ಯ ಪಾಲಿಸಿಗೆ 30ನೇ ವಯಸ್ಸಿನಲ್ಲಿ ಪದವೀಧರರಾಗಿರಬೇಕು. ಇದಕ್ಕಾಗಿ 9,349 ರೂ. ಪ್ರೀಮಿಯಂ(Insurance Policy) ಪಾವತಿಸಬೇಕಾಗುತ್ತದೆ. ಮತ್ತೊಂದೆಡೆ ‘ಸರಳ ಜೀವನ್ ಪಾಲಿಸಿ’ಗೆ 25 ಲಕ್ಷದ ಕವರೇಜ್‌ಗಾಗಿ ನೀವು 9,559 ರೂ. ಪ್ರೀಮಿಯಂನೊಂದಿಗೆ ಈ ಪಾಲಿಸಿಯನ್ನು ಪಡೆಯಬಹುದು ಮತ್ತು ವಿಶೇಷವೆಂದರೆ ಇದಕ್ಕೆ ಯಾವುದೇ ಪದವಿ ಷರತ್ತುಗಳಿಲ್ಲ.

ಚಿಕ್ಕ ವಯಸ್ಸಿನಲ್ಲಿ ಟರ್ಮ್ ಇನ್ಶೂರೆನ್ಸ್ ತೆಗೆದುಕೊಳ್ಳುವುದು ಪ್ರಯೋಜನಕಾರಿ

ಟರ್ಮ್ ಇನ್ಶೂರೆನ್ಸ್(Term Life Insurance) ಅನ್ನು ಮೊದಲೇ ಖರೀದಿಸುವುದು ಜಾಣತನ ಎಂದು ತಜ್ಞರು ಹೇಳುತ್ತಾರೆ. ಚಿಕ್ಕ ವಯಸ್ಸಿನಲ್ಲೇ ನೀವು ಅಗ್ಗದ ಪ್ರೀಮಿಯಂನಲ್ಲಿ ವಿಮೆ ಪಡೆದುಕೊಂಡರೆ ಹೆಚ್ಚು ಲಾಭವಾಗುತ್ತದೆ. ಯುವ ಜನರು ಕಡಿಮೆ ಪ್ರೀಮಿಯಂಗಳನ್ನು ಹೊಂದಿದ್ದಾರೆ. ಒಮ್ಮೆ ಪಾವತಿಸಿದ ಪ್ರೀಮಿಯಂ ಯಾವಾಗಲೂ ಸ್ಥಿರವಾಗಿರುತ್ತದೆ. ಆದ್ದರಿಂದ ನೀವು ಎಷ್ಟು ಬೇಗ ಟರ್ಮ್ ಇನ್ಶೂರೆನ್ಸ್ ಅನ್ನು ಖರೀದಿಸುತ್ತೀರೋ, ಅಷ್ಟು ಹೆಚ್ಚು ಪ್ರಯೋಜನಗಳನ್ನು ಪಡೆಯುತ್ತೀರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News