Online Fraud:ಡೇಟಾ ಸುರಕ್ಷತೆಯ ನಿಯಮಗಳು ಮತ್ತು ಆನ್‌ಲೈನ್ ವಂಚನೆಯಿಂದ (Online Fraud)ಗ್ರಾಹಕರನ್ನು ರಕ್ಷಿಸುವ ಹೊಸ ವಿಧಾನ ಬರಲಿದ್ದು, ನಿಮ್ಮ ಕಾರ್ಡ್‌ಗೆ ಹೊಸ ಟೋಕನ್ ನಂಬರ್ (Token Number System) ಜೋಡಣೆಯಾಗಲಿದೆ. ಇದು ಪ್ರತಿ ವ್ಯಾಪಾರಿಯ ಪ್ರತ್ಯೇಕ ಟೋಕನ್ ಸಂಖ್ಯೆಯಾಗಿರುತ್ತದೆ, ಇದಕ್ಕಾಗಿ ಇ-ಕಾಮರ್ಸ್ ವೆಬ್‌ಸೈಟ್ ಕಾರ್ಡ್ ಪಾವತಿ ಕಂಪನಿಗಳೊಂದಿಗೆ ಟೈ ಮಾಡಬೇಕಾಗಲಿದೆ. ಡೇಟಾ ಭದ್ರತೆಯಲ್ಲಿ ಗ್ರಾಹಕರ ಹಿತದೃಷ್ಟಿಯಿಂದ ಯಾವುದೇ ರಿಯಾಯಿತಿ ನೀಡುವ ಮನಸ್ಥಿತಿಯಲ್ಲಿ ರಿಸರ್ವ್ ಬ್ಯಾಂಕ್ (Reserve Bank Of India)ಇಲ್ಲದಿರುವುದರಿಂದ, ಟೋಕನೈಸೇಶನ್ ಮೂಲಕ ಆಟೋ ಡೆಬಿಟ್ ಪಾವತಿ ಮತ್ತು 16 ಅಂಕೆಗಳನ್ನು ಪದೇ ಪದೇ ನಮೂದಿಸುವುದರಿಂದ ಇದರಿಂದ ಪಾರಾಗಬಹುದು.
ಈ ಟೋಕನ್ ಬೇರೆ ಎಲ್ಲಿಯೂ ಬಳಕೆಯಾಗುವುದಿಲ್ಲ
ವರದಿಗಳ ಪ್ರಕಾರ ಇ-ಕಾಮರ್ಸ್ (E-Commerce Platform) ಮರ್ಚೆಂಟ್ ಹಾಗೂ ಪೇಮೆಂಟ್ ಪ್ರೊವೈಡರ್ ನಡುವ ಜಾರಿಯಾಗುವ ಈ ಟೋಕನ್ ಬೇರೆಲ್ಲೂ ಬಳಕೆಯಾಗುವುದಿಲ್ಲ ಹಾಗೂ ಇದರಿಂದ ಫ್ರಾಡ್ ಸಾಧ್ಯತೆ ತುಂಬಾ ಕಡಿಮೆ ಇರಲಿದೆ. ಜೊತೆಗೆ ಈ ರೀತಿಯ ಹಣ ಪಾವತಿಗೆ ಸಂಬಂಧಿಸಿದ ಪ್ರಕ್ರಿಯೆಯ ಜಟಿಲತೆಯೂ ಕೂಡ ಕಡಿಮೆಯಾಗಿ, ಸುಲಭವಾಗಲಿದೆ. ಈ ಟೋಕನ್ ಐಡಿಯೂ ಕೂಡ UPI ID ಮಾದರಿಯಲ್ಲಿಯೇ ಇರಲಿದ್ದು, ಇದರಿಂದ ಗ್ರಾಹಕರು ತಮ್ಮ ಎಲ್ಲಾ ಮಾಹಿತಿಯನ್ನು ಬಹಿರಂಗ ಪಡಿಸದೆಯೇ ಪೇಮೆಂಟ್ ಮಾಡಬಹುದು.
ಇದನ್ನೂ ಓದಿ-ಒಂದು ಟಯರ್ ಗೆ ನೀಡುವ ಬೆಲೆಯಲ್ಲಿ ಖರೀದಿಸಬಹುದು ಹೊಸ ಕಾರು..! 15 ಲಕ್ಷ ಬೆಲೆಯ ಈ ಟಯರ್ ನಲ್ಲಿ ಅಂಥದ್ದೇನಿದೆ ?
ಎಲ್ಲಾ ಯುಟಿಲಿಟಿ ಪಾವತಿ ಮೇಲೆ ಆಟೋ ಡೆಬಿಟ್ ಸ್ಥಗಿತಗೊಳ್ಳಲಿದೆ
ಅನೇಕ ಇ-ಕಾಮರ್ಸ್ ಕಂಪನಿಗಳು ತಮ್ಮದೇ ಪೇಮೆಂಟ್ ಅಗ್ರಿಗೆಟರ್ ಪ್ಲಾಟ್ಫಾರ್ಮ್ ಆರಂಭಿಸಿದ್ದು, ಅವುಗಳನ್ನು ಬಳಸಿ ಗ್ರಾಹಕರು ಸುಲಭವಾಗಿ ಪೇಮೆಂಟ್ ಇಂಟರ್ಫೆಸ್ ಅನುಭವಿಸಬಹುದು. ಅಕ್ಟೋಬರ್ 1 ರಿಂದ ನಿಮ್ಮ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್‌ನ ಆಟೋ ಡೆಬಿಟ್ ಮೇಲೆ ಆಡಿಶನಲ್ ಫ್ಯಾಕ್ಟರ್ ಅಥಂಟಿಕೆಶನ್ ನಿಯಮಗಳು ಅನ್ವಯಿಸುತ್ತಿದೆ. ಇದರಲ್ಲಿ, ವಿಭಿನ್ನ ಪಾವತಿಗಳಿಗೆ ಗ್ರಾಹಕರ ಅನುಮೋದನೆ ಅಗತ್ಯವಿರುತ್ತದೆ ಅಂದರೆ ಅನೇಕ ಉಪಯುಕ್ತ ಪಾವತಿಗಳಲ್ಲಿ ಸ್ವಯಂ ಡೆಬಿಟ್ ಅನ್ನು ಆಫ್ ಮಾಡಲಾಗುತ್ತಿದೆ.
ಇದನ್ನೂ ಓದಿ-Post Office ಈ ಯೋಜನೆಗಳಲ್ಲಿ ಡಬಲ್ ಆಗಲಿದೆ ನಿಮ್ಮ ಹಣ : ಬಡ್ಡಿ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ!
ಇದರಿಂದ ಇ-ಕಾಮರ್ಸ್ ವೇದಿಕೆಗಳು ತಮ್ಮ ಪ್ಲಾಟ್ಫಾರ್ಮ್ ಮೇಲೆ ಗ್ರಾಹಕರ ದತ್ತಾಂಶ ಸಂಗ್ರಹಿಸುವ ಹಾಗಿಲ್ಲ
ಕೆಲ ದಿನಗಳ ಬಳಿಕ ಅಂದರೆ ಜನವರಿ 1, 2022 ರಿಂದ ಪ್ರತಿಬಾರಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ನಿಂದ ಹಣ ಪಾವತಿ ಮಾಡುವ ವೇಳೆ ನೀವು 16 ಅಂಕಿಗಳ ಸಂಖ್ಯೆಯನ್ನು ಆನ್ಲೈನ್ ಮಾರ್ಚಂತ್ ವೆಬ್ ಸೈಟ್ ಗೆ ತಿಳಿಸುವುದು ಅನಿವಾರ್ಯವಾಗಲಿದೆ. ಏಕೆಂದರೆ ರಿಸರ್ವ್ ಬ್ಯಾಂಕ್ ಡೇಟಾ ಸಿಕ್ಯೋರಿಟಿ (Data Security Rules) ನಿಯಮಗಳ ಪ್ರಕಾರ್ ಇ-ಕಾಮರ್ಸ್ ವೇದಿಕೆಗಳು ತಮ್ಮ ಪ್ಲಾಟ್ ಫಾರಂ ಗಳು ಕಂಪನಿಯ ಡೇಟಾ ಸ್ಟೋರ್ ಮಾಡುವಂತಿಲ್ಲ.
ಇದನ್ನೂ ಓದಿ-ಲ್ಯಾಪ್ಸ್ ಆಗಿರುವ ಪಾಲಿಸಿಯನ್ನು ಮತ್ತೆ ರಿನಿವಲ್ ಮಾಡಲು ಎಲ್ಐಸಿ ನೀಡುತ್ತಿದೆ ಸುವರ್ಣಾವಕಾಶ ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.