ನವದೆಹಲಿ: ದೇಶದ ಸರ್ಕಾರಿ ಬ್ಯಾಂಕ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ನೀವು ಸಹ ಸರ್ಕಾರಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೆ, ಆಗಸ್ಟ್ 31ರ ನಂತರ ಹಣದ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ. ಹೌದು... ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ನೋಟಿಸ್ ನೀಡುವ ಮೂಲಕ ಈ ಬಗ್ಗೆ ತಿಳಿಸಿದೆ. PNB ದೇಶದಾದ್ಯಂತ ಕೋಟ್ಯಂತರ ಗ್ರಾಹಕರನ್ನು ಹೊಂದಿದೆ. ಇಲ್ಲಿಯವರೆಗೆ KYC ವಿವರಗಳನ್ನು ನವೀಕರಿಸದ ಗ್ರಾಹಕರಿಗೆ ಬ್ಯಾಂಕ್ ವತಿಯಿಂದ ನೋಟಿಸ್ ಕಳುಹಿಸಲಾಗುತ್ತಿದೆ.
ಆಗಸ್ಟ್ 31 ಕೊನೆಯ ದಿನ
KYC ವಿವರ ನವೀಕರಿಸಲು ಗಡುವು ಕೂಡ ಘೋಷಿಸಲಾಗಿದೆ. ನೀವು ಈ ಕೆಲಸವನ್ನು ಆಗಸ್ಟ್ 31ರೊಳಗೆ ಪೂರ್ಣಗೊಳಿಸಬೇಕು. ನಿಗದಿತ ದಿನಾಂಕದೊಳಗೆ ಈ ಕೆಲಸವನ್ನು ಪೂರ್ಣಗೊಳಿಸದ ಗ್ರಾಹಕರು ಬ್ಯಾಂಕಿಂಗ್ ವಹಿವಾಟುಗಳಲ್ಲಿ ಸಮಸ್ಯೆಗಳನ್ನು ಎದುರಿಸಬಹುದು.
ಇದನ್ನೂ ಓದಿ: ಬ್ಯಾಂಕ್ ನಿಂದ ಸಾಲ ಪಡೆದುಕೊಂಡಿದ್ದರೆ ಇನ್ನೊಂದು ವಾರದಲ್ಲಿ RBI ನೀಡಲಿದೆ ಸಿಹಿ ಸುದ್ದಿ !
ಆಗಸ್ಟ್ 2ರಂದು ನೋಟಿಸ್ ಜಾರಿ
ಆಗಸ್ಟ್ 2ರಂದು ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ತಮ್ಮ ನೋಂದಾಯಿತ ವಿಳಾಸದಲ್ಲಿ KYCಯನ್ನು ನವೀಕರಿಸದ ಎಲ್ಲಾ ಗ್ರಾಹಕರಿಗೆ ಬ್ಯಾಂಕ್‌ನಿಂದ ನೋಟಿಸ್ ಕಳುಹಿಸಲಾಗುತ್ತಿದೆ ಎಂದು ಹೇಳಿದೆ. ಇದರೊಂದಿಗೆ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶವನ್ನೂ ಕಳುಹಿಸಲಾಗುತ್ತಿದೆ. ಆರ್‌ಬಿಐ ನಿಯಮಗಳ ಪ್ರಕಾರ 31 ಆಗಸ್ಟ್ 2023ರ ಮೊದಲು ತಮ್ಮ KYC ಮಾಹಿತಿಯನ್ನು ನವೀಕರಿಸಲು ಬ್ಯಾಂಕ್ ತನ್ನ ಗ್ರಾಹಕರಿಗೆ ಮನವಿ ಮಾಡಿಕೊಂಡಿದೆ.
RBI ಈ ಸೂಚನೆಗಳನ್ನು ನೀಡಿದೆ
ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ಸೂಚನೆಗಳ ಪ್ರಕಾರ, ಎಲ್ಲಾ ಗ್ರಾಹಕರು KYCಯನ್ನು ನವೀಕರಿಸುವುದು ಅವಶ್ಯಕ. ಜುಲೈ 31ರವರೆಗೆ ನಿಮ್ಮ KYCಯನ್ನು ನವೀಕರಿಸದಿದ್ದರೆ, ಬ್ಯಾಂಕ್‌ಗೆ ಹೋಗಿ ಈ ಕೆಲಸವನ್ನು ಮಾಡಬಹುದು. ಇದಲ್ಲದೆ KYCಯನ್ನು ಬ್ಯಾಂಕಿನ ವೆಬ್‌ಸೈಟ್ ಮೂಲಕವೂ ನವೀಕರಿಸಬಹುದು.
ಯಾವ ದಾಖಲೆಗಳು ಬೇಕಾಗುತ್ತವೆ?
KYCಯನ್ನು ನವೀಕರಿಸಲು ಗ್ರಾಹಕರಿಗೆ ಗುರುತಿನ ಚೀಟಿ, ವಿಳಾಸ ಪುರಾವೆ, ಪಾಸ್‌ಪೋರ್ಟ್ ಗಾತ್ರದ ಫೋಟೋ, PAN ಕಾರ್ಡ್, ಆದಾಯ ಪ್ರಮಾಣಪತ್ರ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ. ಇದಲ್ಲದೆ ಈ ವಿವರಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ ನೀವು ಬ್ಯಾಂಕ್‌ನಲ್ಲಿ self-declaration ನೀಡಬೇಕಾಗುತ್ತದೆ.
ಈ ರೀತಿ KYC ಸ್ಥಿತಿಯನ್ನು ಪರಿಶೀಲಿಸಿ
>> ಇದಕ್ಕಾಗಿ ನೀವು ನಿಮ್ಮ ವೈಯಕ್ತಿಕ ಮಾಹಿತಿಗಳೊಂದಿಗೆ ಆನ್‌ಲೈನ್‌ನಲ್ಲಿ PNB ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು.
>> ವೈಯಕ್ತಿಕ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು KYC ಸ್ಥಿತಿಯ ಮೇಲೆ ಕ್ಲಿಕ್ ಮಾಡಿ.
>> ನಿಮ್ಮ KYCಯನ್ನು ನವೀಕರಿಸಬೇಕಾದರೆ, ಅದು ಪರದೆಯ ಮೇಲೆ ಕಾಣಿಸುತ್ತದೆ.
ಇದನ್ನೂ ಓದಿ: ನಿಮ್ಮದೇ ಸ್ವಂತ ಕಂಪನಿ ಆರಂಭಿಸುವ ಉತ್ಸಾಹದಲ್ಲಿ ನೀವಿದ್ದಿರಾ..? ಕಂಪನಿ ಆರಂಭಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.