ನವದೆಹಲಿ: Agni Test Fired Successfully - ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತ ಸೋಮವಾರ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ಅಗ್ನಿ ಪ್ರೈಮ್ (Agni Prime Missile) ಎಂಬ ಕ್ಷಿಪಣಿಯ ಇಂದು ಬೆಳಗ್ಗೆ ಯಶಸ್ವಿ ಪರೀಕ್ಷೆ ಕೈಗೊಳ್ಳಲಾಗಿದೆ. ಅಗ್ನಿ ಸರಣಿಯ ಕ್ಷಿಪಣಿಗಳಲ್ಲಿ ಅತ್ಯಾಧುನಿಕವಾದ ಅಗ್ನಿ ಪ್ರೈಮ್ 1,000 ರಿಂದ 1,500 ಕಿ.ಮೀ ವ್ಯಾಪ್ತಿಯ ಮಾರಕ ಕ್ಷಮತೆ ಹೊಂದಿದೆ. ಇಂದು ಬೆಳಗ್ಗೆ 10:55 ಕ್ಕೆ ಒಡಿಶಾ ಕರಾವಳಿ ಅಗ್ನಿ ಸರಣಿಯ ಈ ಹೊಸ ಕ್ಷಿಪಣಿಯಾಗಿರುವ ಅಗ್ನಿ ಪ್ರೈಮ್ (Agni Prime) ನ ಯಶಸ್ವಿ ಪರೀಕ್ಷೆ ನಡೆಸಲಾಗಿದೆ.
ಹೊಸ ಪರಮಾಣು-ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯು ಸಂಪೂರ್ಣವಾಗಿ ಸಂಯೋಜಿತ ವಸ್ತುಗಳಿಂದ ಮಾಡಲ್ಪಟ್ಟಿದೆ ಮತ್ತು ಅದರ ಪರೀಕ್ಷೆ ನಿಖರವಾದ ಯೋಜನೆಯಂತೆಯೇ ನಡೆದಿದೆ ಮತ್ತು ಯಾವುದೇ ರೀತಿಯ ಸಮಸ್ಯೆ ಎದುರಾಗಿಲ್ಲ. ಮೊಬೈಲ್ ಲಾಂಚರ್ ಮೂಲಕವೂ ಕೂಡ ನೀವು ಅಗ್ನಿ ಪ್ರೈಮ್ ಅನ್ನು ಫೈರ್ ಮಾಡಲು ಸಾಧ್ಯವಾಗಲಿದೆ. ಡಿಆರ್‌ಡಿಒ (DRDO) ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಪ್ರಕಟಿಸಿರುವ ಸುದ್ದಿಸಂಸ್ಥೆ ANI, "ಪೂರ್ವ ಕರಾವಳಿಯ ಟೆಲಿಮೆಟ್ರಿ ಮತ್ತು ರಾಡಾರ್ ಕೇಂದ್ರಗಳು ಕ್ಷಿಪಣಿಯನ್ನು ಪತ್ತೆ ಹಚ್ಚಿ ಮೇಲ್ವಿಚಾರಣೆ ಮಾಡಿವೆ. ಸಂಪೂರ್ಣ ಉಡಾವಣೆಯು ಯೋಜನೆಯ ಪ್ರಕಾರ ನಡೆದಿದೆ ಮತ್ತು ಕ್ಷಿಪಣಿ ಎಲ್ಲಾ ಕಾರ್ಯಗಳನ್ನು ನಿಖರತೆಯೊಂದಿಗೆ ಪೂರ್ಣಗೊಳಿಸಿದೆ.
ಇದನ್ನೂ ಓದಿ-ಜಮ್ಮು Kaluchak Military Station ವ್ಯಾಪ್ತಿಯಲ್ಲಿ ಸುತ್ತುತ್ತಿದ್ದ 2 ಡ್ರೋಣ್ ; ಹೊಡೆದುರುಳಿಸಿದ ಸೇನೆ
1989ರಲ್ಲಿ ಮೊಟ್ಟಮೊದಲ ಬಾರಿಗೆ ಅಗ್ನಿ ಪರೀಕ್ಷೆ ನಡೆಸಲಾಗಿತ್ತು
ಅಂಕಿ ಅಂಶಗಳ ಪ್ರಕಾರ 'ಅಗ್ನಿ ಪ್ರೈಮ್' ಒಂದು ಕಡಿಮೆ ಅಂತರದ ಮಾರಕ ಕ್ಷಮತೆ ಹೊಂದಿರುವ ಬ್ಯಾಲಿಸ್ಟಿಕ್ ಮಿಸೈಲ್ (Agni Prime Ballistic Missile) ಆಗಿದೆ. ಇದರ ಮಾರಕ ಕ್ಷಮತೆ 1000-1500 ಕಿ.ಮೀ.ಗಳಷ್ಟಾಗಿದೆ. ಇದು ಭೂಮಿಯಿಂದ ಭೂಮಿಗೆ ದಾಳಿ ನಡೆಸುವ ಕ್ಷಮತೆ ಹೊಂದಿದೆ. ಇದು ಸುಮಾರು 1000 ಕೆ.ಜಿ ಪೆಲೋಡ್ ಅಥವಾ ಪರಮಾಣು ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದು ಡಬಲ್ ಸ್ಟೇಡ ಹೊಂದಿರುವ 'ಅಗ್ನಿ-1' ಕ್ಷಿಪಣಿಗಿಂತ ಹಗುರ ಹಾಗೂ ತುಂಬಾ ತಿಳುವಾಗಿದೆ. ಮಾಧ್ಯಮವೊಂದರ ವರದಿಯ ಪ್ರಕಾರ, 4000 ಕಿ.ಮೀ ಮಾರಕ ಕ್ಷಮತೆ ಹೊಂದಿರುವ ಅಗ್ನಿ 4 (Agni-4) ಹಾಗೂ 5000 ಕಿ.ಮೀ ಮಾರಕ ಕ್ಷಮತೆ ಹೊಂದಿರುವ ಅಗ್ನಿ 5 (Agni-5) ಕ್ಷಿಪಣಿಯಲ್ಲಿ ಬಳಸಲಾಗಿರುವ ತಂತ್ರಜ್ಞಾನಗಳ ಮಿಶ್ರಣದಿಂದ ಅಗ್ನಿ ಪ್ರೈಮ್ ತಯಾರಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ-Coronavirus Third Wave In India: ಭಾರತದಲ್ಲಿ ತಡವಾಗಿ ಬರಲಿದೆ ಮೂರನೇ ಅಲೆ, ನೆಮ್ಮದಿಯ ವರದಿ ನೀಡಿದ ICMR
ಮೊಟ್ಟಮೊದಲ ಬಾರಿಗೆ 1989ರಲ್ಲಿ ಭಾರತ ಅಗ್ನಿ ಕ್ಷಿಪಣಿಯ (Agni Missile) ಯಶಸ್ವಿ ಪರೀಕ್ಷೆ ನಡೆಸಿತ್ತು. ಆಗ ಈ ಕ್ಷಿಪಣಿಯ ಮಾರಕ ಕ್ಷಮತೆ 700 ರಿಂದ 900 ಕಿ.ಮೀ ಗಳಷ್ಟಿತ್ತು. 2004 ರಲ್ಲಿ ಈ ಕ್ಷಿಪಣಿಯನ್ನು ಭಾರತೀಯ ಸೇನೆಯಲ್ಲಿ (Indian Army) ಶಾಮೀಲುಗೊಳಿಸಲಾಗಿದೆ. ಭಾರತ ಇದುವರೆಗೆ ಅಗ್ನಿ ಕ್ಷಿಪಣಿಯ ಒಟ್ಟು ಐದು ಮಿಸೈಲ್ ಗಳನ್ನು ಅಭಿವೃದ್ಧಿಗೊಳಿಸಿದೆ.
ಇದನ್ನೂ ಓದಿ-CBSE Launches DADS Portal: CBSE ವಿದ್ಯಾರ್ಥಿಗಳಿಗೊಂದು ನೆಮ್ಮದಿಯ ಸುದ್ದಿ, DADS Portal ಬಿಡುಗಡೆಗೊಳಿಸಿದ CBSE
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.