ಕಡಿಮೆ ಬಡ್ಡಿಯಲ್ಲಿ gold loan ನೀಡುತ್ತಿರುವ ಬ್ಯಾಂಕ್ ಗಳಿವು!ಪಾವತಿಸಬೇಕಾದ EMI ವಿವರ ಹೀಗಿದೆ

Gold Loan Wit Low Interest :ಇತರ ರೀತಿಯ ಸಾಲಗಳಿಗಿಂತ ಭಿನ್ನವಾಗಿ,ಆಭರಣ ಸಾಲಗಳು ತಕ್ಷಣವೇ ಲಭ್ಯವಾಗುತ್ತದೆ.   

Written by - Ranjitha R K | Last Updated : May 17, 2024, 09:03 AM IST
  • ತುರ್ತು ನಗದು ಅಗತ್ಯಗಳನ್ನು ಪೂರೈಸಲು ಆಭರಣ ಸಾಲ ಸಹಾಯಕ
  • ಅನೇಕ ಜನರು ತುರ್ತು ಅಗತ್ಯಗಳಿಗಾಗಿ ಆಭರಣ ಸಾಲಗಳ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದಾರೆ.
  • ಈ ಸಾಲ ಪಡೆಯಲು ಯಾವುದೇ ರೀತಿಯ ದಾಖಲೆ ಒದಗಿಸುವ ಅಗತ್ಯವಿಲ್ಲ.
ಕಡಿಮೆ ಬಡ್ಡಿಯಲ್ಲಿ gold loan ನೀಡುತ್ತಿರುವ ಬ್ಯಾಂಕ್ ಗಳಿವು!ಪಾವತಿಸಬೇಕಾದ EMI ವಿವರ ಹೀಗಿದೆ title=

Gold Loan Wit Low Interest : ಮಧ್ಯಮ ವರ್ಗ ಮತ್ತು ಸಾಮಾನ್ಯ ಜನರ ತುರ್ತು ನಗದು ಅಗತ್ಯಗಳನ್ನು ಪೂರೈಸಲು ಆಭರಣ ಸಾಲಗಳು ಅಂದರೆ ಚಿನ್ನದ ಮೇಲೆ ಪಡೆಯುವ ಸಾಲ ಸಹಾಯ ಮಾಡುತ್ತವೆ. ಅನೇಕ ಜನರು ತುರ್ತು ಅಗತ್ಯಗಳಿಗಾಗಿ ಆಭರಣ ಸಾಲಗಳ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದಾರೆ.ಏಕೆಂದರೆ ಈ ಸಾಲ ಪಡೆಯಲು ಯಾವುದೇ ರೀತಿಯ ದಾಖಲೆ ಒದಗಿಸುವ ಅಗತ್ಯವಿಲ್ಲ.ನಾವು ಕೊಡುವ ಚಿನ್ನಾಭರಣದ ಮೌಲ್ಯಕ್ಕೆ ಅನುಗುಣವಾಗಿ ಸಾಲದ ಮೊತ್ತ ದೊರೆಯುತ್ತದೆ. ಸಾಮಾನ್ಯವಾಗಿ ಒತ್ತೆ ಇಟ್ಟಿರುವ ಚಿನ್ನದ ಪ್ರಮಾಣ ಮತ್ತು ಶುದ್ಧತೆಯ ಆಧಾರದ ಮೇಲೆ ಸಾಲದ ಮೊತ್ತವನ್ನು ನಿರ್ಧರಿಸಲಾಗುತ್ತದೆ.ಇತರ ರೀತಿಯ ಸಾಲಗಳಿಗಿಂತ ಭಿನ್ನವಾಗಿ,ಆಭರಣ ಸಾಲಗಳು ತಕ್ಷಣವೇ ಲಭ್ಯವಾಗುತ್ತದೆ. 

ಚಿನ್ನದ ಮೇಲೆ ಸಾಲ ಪಡೆಯುವ ಮುನ್ನ ಯಾವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಚಿನ್ನದ ಮೇಲಿನ ಸಾಲಕ್ಕೆ ಕಡಿಮೆ ಬಡ್ಡಿ ವಿಧಿಸುವ ಕೆಲವು ಬ್ಯಾಂಕುಗಳ ವಿವರ ಹೀಗಿದೆ. ಆಭರಣ ಸಾಲಗಳನ್ನು ಪಡೆಯಲು ಆಸಕ್ತಿ ಹೊಂದಿರುವವರಿಗೆ ಕಡಿಮೆ ಬಡ್ಡಿಯ ಸಾಲಗಳನ್ನು ನೀಡುವ 10 ಬ್ಯಾಂಕ್‌ಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ :

ಇದನ್ನೂ ಓದಿ : Amul Products: ಶೀಘ್ರದಲ್ಲೇ ಅಮುಲ್‌ ಕಂಪನಿಯಿಂದ ʻಸೂಪರ್ ಮಿಲ್ಕ್ʼ ಮತ್ತು ʻಸಾವಯವ ಉತ್ಪನ್ನʼ ಪರಿಚಯ!!

HDFC ಬ್ಯಾಂಕ್ :
ಖಾಸಗಿ ವಲಯದ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಎರಡು ವರ್ಷಗಳವರೆಗೆ 5 ಲಕ್ಷ ರೂಪಾಯಿ ಚಿನ್ನಾಭರಣ ಸಾಲಕ್ಕೆ ಶೇಕಡಾ 8.5 ಬಡ್ಡಿ ವಿಧಿಸುತ್ತದೆ.ಇದಕ್ಕಾಗಿ ಮಾಸಿಕ EMI 22,568 ರೂ. ಪಾವತಿಸಬೇಕಾಗುತ್ತದೆ. 

ಇಂಡಿಯನ್ ಬ್ಯಾಂಕ್ :
ಇಂಡಿಯನ್ ಬ್ಯಾಂಕ್ 2 ವರ್ಷಗಳ ಆಭರಣ ಸಾಲಕ್ಕೆ ಶೇಕಡಾ 8.65 ಬಡ್ಡಿ ದರವನ್ನು ವಿಧಿಸುತ್ತದೆ.ಇಲ್ಲಿ 5 ಲಕ್ಷ ರೂ.ಗಳ ಆಭರಣ ಸಾಲಕ್ಕೆ ಪ್ರತಿ ತಿಂಗಳು 22,599 ರೂ.ಕಂತು ಪಾವತಿಸಬೇಕಾಗುತ್ತದೆ. 

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ :
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 8.7 ಶೇಕಡಾ ಬಡ್ಡಿಯಲ್ಲಿ ಚಿನ್ನದ ಮೇಲಇನ ಸಾಲವನ್ನು ನೀಡುತ್ತದೆ.ಇದರಲ್ಲಿ ಎರಡು ವರ್ಷಗಳ ಸಾಲಕ್ಕೆ  22,610 ರೂ. ಇಎಂಐ ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ : EPFO: ಮೊಬೈಲ್ ನಂಬರ್ ಬದಲಾಗಿದೆಯೇ? ನಿಮ್ಮ ಪಿ‌ಎಫ್ ಖಾತೆಯಲ್ಲಿ ಹೊಸ ಸಂಖ್ಯೆಯನ್ನು ಈ ರೀತಿ ನವೀಕರಿಸಿ!
 
ಬ್ಯಾಂಕ್ ಆಫ್ ಇಂಡಿಯಾ :
ಬ್ಯಾಂಕ್ ಆಫ್ ಇಂಡಿಯಾದಿಂದ  ಎರಡು ವರ್ಷಗಳವರೆಗೆ 5 ಲಕ್ಷ ರೂಪಾಯಿಯ ಚಿನ್ನದ ಮೇಲಿನ ಸಾಲ ಪಡೆದರೆ ಶೇಕಡಾ 8.8 ಬಡ್ಡಿ ವಿಧಿಸುತ್ತದೆ.ಇದಕ್ಕಾಗಿ ಪ್ರತಿ ತಿಂಗಳು 22,631 ರೂಪಾಯಿ ಇಎಂಐ ಪಾವತಿಸಬೇಕು.

ಕೆನರಾ ಬ್ಯಾಂಕ್ :
ಕೆನರಾ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ವರ್ಷಾಶನಕ್ಕಾಗಿ ಚಿನ್ನದ ಸಾಲದ ಮೇಲೆ ಶೇಕಡಾ 9.25 ಬಡ್ಡಿಯನ್ನು ವಿಧಿಸುತ್ತವೆ.5 ಲಕ್ಷ ರೂ.ಗಳ ಆಭರಣ ಸಾಲಕ್ಕೆ ಇಎಂಐ 22,725 ರೂ.

ಬ್ಯಾಂಕ್ ಆಫ್ ಬರೋಡಾ : 
ಬ್ಯಾಂಕ್ ಆಫ್ ಬರೋಡಾ ಎರಡು ವರ್ಷಗಳ 5 ಲಕ್ಷ ಆಭರಣ ಸಾಲಕ್ಕೆ  9.4 ಶೇಕಡಾ ಬಡ್ಡಿ ವಿಧಿಸುತ್ತದೆ.ಇದಕ್ಕಾಗಿ ಮಾಸಿಕ EMI ರೂ.22,756 ಆಗಿರುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ : 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎರಡು ವರ್ಷಗಳವರೆಗೆ 5 ಲಕ್ಷ ರೂಪಾಯಿಯ ಆಭರಣ ಸಾಲ ಪಡೆದರೆ 9.6 ಶೇಕಡಾ ಬಡ್ಡಿಯನ್ನು ವಿಧಿಸುತ್ತದೆ. ಇದಕ್ಕಾಗಿ 22,798 ರೂ.ಮಾಸಿಕ EMI ಕಟ್ಟಬೇಕಾಗುತ್ತದೆ. 

ಇದನ್ನೂ ಓದಿ : ವಂಚನೆ ಹಗರಣದಲ್ಲಿ ನೀರಜ್ ಮೋದಿ, ವಿಜಯ್ ಮಲ್ಯರನ್ನೇ ಹಿಂದಿಕ್ಕಿದ ಭೂಪ !ಬ್ಯಾಂಕುಗಳಿಗೆ 34,000ಕೋಟಿ ವಂಚಿಸಿರುವ ಈ ಧೀರಜ್ ವಾಧವನ್ ಯಾರು ?
 
ಐಸಿಐಸಿಐ ಬ್ಯಾಂಕ್ :
ಐಸಿಐಸಿಐ ಬ್ಯಾಂಕ್ ಎರಡು ವರ್ಷಗಳವರೆಗೆ 5 ಲಕ್ಷ ರೂಪಾಯಿಯ ಆಭರಣ ಸಾಲದ ಮೇಲೆ ಶೇಕಡಾ 10 ರಷ್ಟು ಬಡ್ಡಿಯನ್ನು ವಿಧಿಸುತ್ತದೆ. ಸಾಲಗಾರರು 22,882 ರೂ. ಇಎಂಐ ಪಾವತಿಸಬೇಕು.

ಆಕ್ಸಿಸ್ ಬ್ಯಾಂಕ್ : 
ಆಕ್ಸಿಸ್ ಬ್ಯಾಂಕ್ ಎರಡು ವರ್ಷಗಳವರೆಗೆ 5 ಲಕ್ಷ ರೂಪಾಯಿಯ ಆಭರಣ ಸಾಲದ ಮೇಲೆ ಶೇಕಡಾ 17ರ ಬಡ್ಡಿದರವನ್ನು ವಿಧಿಸುತ್ತದೆ. ಇದಕ್ಕೆ 24,376 ರೂ. ಇಎಂಐ ಪಾವತಿಸಬೇಕಾಗುತ್ತದೆ. 

ವಿಧದ ಸಾಲಗಳಿಗಿಂತ ಚಿನ್ನದ ಮೇಲಿನ ಸಾಲ ಹೇಗೆ ಉತ್ತಮ ? : 
ಇತರ ಸಾಲಗಳಿಗೆ ಹೋಲಿಸಿದರೆ, ಚಿನ್ನದ ಮೇಲೆ ಸಾಲ ಪಡೆಯುವ ಪ್ರಕ್ರಿಯೆಯು ತುಂಬಾ ಸುಲಭವಾಗಿದೆ.ನಾವು ನೀಡುವ ಚಿನ್ನದ ಮೌಲ್ಯಕ್ಕೆ ಅನುಗುಣವಾಗಿ ಸಾಲದ ಮೊತ್ತವನ್ನು ನೀಡುವುದರಿಂದ ಕ್ರೆಡಿಟ್ ಸ್ಕೋರ್ ಇತ್ಯಾದಿಗಳು ಇಲ್ಲಿ ಹೆಚ್ಚು ಮುಖ್ಯವಾಗುವುದಿಲ್ಲ. ತಕ್ಷಣ ನಗದು ಅಗತ್ಯವಿರುವವರಿಗೆ, ತುರ್ತು ಸಂದರ್ಭಗಳಲ್ಲಿ ಚಿನ್ನದ ಮೇಲಿನ ಸಾಲ ಬಹಳ ಸಹಾಯಕವಾಗಿದೆ.ಅಲ್ಲದೆ,ವೈಯಕ್ತಿಕ ಸಾಲ,ಆಸ್ತಿ ಸಾಲ ಇತ್ಯಾದಿ ಇತರ ರೀತಿಯ ಸಾಲಗಳಿಗೆ ಹೋಲಿಸಿದರೆ ಆಭರಣ ಸಾಲದ ಬಡ್ಡಿ ಕಡಿಮೆಯಾಗಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News