ನವದೆಹಲಿ: ಕೊರೊನಾ ವೈರಸ್ ಮಹಾಮಾರಿಯ ಕಾರಣ ಇನ್ಕಂ ಟ್ಯಾಕ್ಸ್ ರಿಟರ್ನ್ (ITR) ಪಾವತಿಸುವ ಅವಧಿಯನ್ನು ಜುಲೈ 31ರ ಬದಲಿಗೆ ನವೆಂಬರ್ 2020ರವರೆಗೆ ವಿಸ್ತರಿಸಲಾಗಿದೆ. ಆದರೆ, ಆದಾಯ ತೆರಿಗೆಗೆ ಸಂಬಂಧಿಸಿದ ಕೆಲ ಕೆಲಸಗಳನ್ನು ನೀವು ಈ ಡೆಡ್ ಲೈನ್ ಗೆ ಮುಂಚಿತವಾಗಿಯೇ ಪೂರ್ಣಗೊಳಿಸಬೇಕು. ಹಾಗಾದರೆ ಬನ್ನಿ ಆದಾಯ ತೆರಿಗೆಗೆ ಸಂಬಂಧಿಸಿದ ಯಾವ ಮೂರು ಕಾರ್ಯಗಳನ್ನು ನೀವು ಇಂದೇ ಪೂರ್ಣಗೊಳಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ.
ಇದನ್ನು ಓದಿ- Income tax return ಸಲ್ಲಿಸುವಲ್ಲಿ ತಪ್ಪಾಗಿದ್ದರೆ ಅದನ್ನು ಕೇವಲ 5 ನಿಮಿಷಗಳಲ್ಲಿ ಸರಿಪಡಿಸಿ
ನಂಬರ್ 1
ಆರ್ಥಿಕ ವರ್ಷ 2018-19 ರ ಸಾಲಿನ ವಿಳಂಬವಾದ ITR ಫೈಲಿಂಗ್
2018-19ರ ಆರ್ಥಿಕ ವರ್ಷಕ್ಕೆ ನೀವು ವಿಳಂಬವಾದ ಐಟಿಆರ್ ಅನ್ನು ನೀವು ಇನ್ನೂ ಸಲ್ಲಿಸದಿದ್ದರೆ, ನಿಮಗೆ ಇಂದೇ ಕೊನೆಯ ದಿನ ಉಳಿದಿದೆ. ಕರೋನಾ ಬಿಕ್ಕಟ್ಟಿನ ದೃಷ್ಟಿಯಿಂದ, ಸರ್ಕಾರವು ತನ್ನ ಗಡುವನ್ನು ಮಾರ್ಚ್ 31 ರಿಂದ ಸೆಪ್ಟೆಂಬರ್ 30 ಕ್ಕೆ ವಿಸ್ತರಿಸಿದೆ. ಯಾವುದೇ ಓರ್ವ ತೆರಿಗೆ ಪಾವತಿದಾರ ಸೆಪ್ಟೆಂಬರ್ 30ರವರೆಗೆ ವಿಳಂಬವಾದ ಐಟಿಆರ್ ಪಾವತಿಸದೇ ಹೋದಲ್ಲಿ ಅವರಿಗೆ ನೋಟಿಸ್ ಕಳುಹಿಸಿ ಪಾವತಿಸಲು ಸೂಚಿಸಬೇಕು ಎನ್ನಲಾಗಿದೆ.
ವಿಳಂಬವಾದ ITR ಎಂದರೇನು?
ಯಾವುದೇ ಓರ್ವ ತೆರಿಗೆ ಪಾವತಿದಾರ ಮಾರ್ಚ್ ನಿಂದ ಜುಲೈ ಅವಧಿಯಲ್ಲಿ ತನ್ನ ITR ದಾಖಲಿಸಬೇಕು. ಇದಾದ ಬಳಿಕ ತೆರಿಗೆ ಪಾವತಿದಾರ ರಿಟರ್ನ್ ಸಲ್ಲಿಸಲು ಬಯಸಿದರೆ ಅದನ್ನು ವಿಳಂಬವಾದ ITR ಅಥವಾ ಬಿಲೇಟೆಡ್ ITR ಎಂದು ಕರೆಯುತ್ತಾರೆ. ವಿಳಂಬವಾದ ITR ದಾಖಲಿಸಲು ಮೊದಲು ಎರಡು ವರ್ಷಗಳ ಕಾಲಾವಕಾಶ ಸಿಗುತ್ತಿತ್ತು. ಆದರೆ, ಇದೀಗ ಈ ಕಾಲಾವಕಾಶವನ್ನು ಕಡಿಮೆಗೊಳಿಸಲಾಗಿದೆ. ವಿಳಂಬವಾದ ಐಟಿಆರ್ ದಾಖಲಿಸುವ ಮೊದಲು ನೀವು 10 ಸಾವಿರ ರೂ ದಂಡ ಪಾವತಿಸಬೇಕು. ಒಂದು ವೇಳೆ ನಿಮ್ಮ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆಯಾಗಿದ್ದರೆ ನೀವು 1000 ದಂಡ ಪಾವತಿಸಬೇಕು.
ಇದನ್ನು ಓದಿ- ITR ಸಲ್ಲಿಸುವಾಗ ಈ 5 ವಿಷಯಗಳಲ್ಲಿ ತಪ್ಪಾಗದಂತೆ ಮುನ್ನೆಚ್ಚರಿಕೆ ವಹಿಸಿ
ನಂಬರ್ 2
ಹಳೆಯ ಐಟಿಆರ್ ಪರಿಶೀಲನೆಗೆ ಇಂದೇ ಕೊನೆಯ ದಿನಾಂಕ
ಒಂದು ವೇಳೆ ನೀವು ಆದಾಯ ತೆರಿಗೆ ರಿಟರ್ನ್ ಪಾವತಿಸಿದ್ದು, ಅದನ್ನು ಇದುವರೆಗೆ ಪರಿಶೀಲಿಸಿಲ್ಲ ಎಂದಾದರೆ, ಈ ಕೆಲಸಕ್ಕಾಗಿ ಇಂದೇ ಕೊನೆಯ ದಿನವಾಗಿದೆ. ಮೌಲ್ಯಮಾಪನ ವರ್ಷದ 2015-16, 2016-17, 2017-18, 2018-19 ಮತ್ತು 2019-20ರ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಪರಿಶೀಲಿಸದವರಿಗೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ ಒನ್ ಟೈಮ್ ಅವಕಾಶ ನೀಡಿದೆ.
ಇದನ್ನು ಓದಿ -ಜುಲೈ 31ರೊಳಗೆ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಸಾಧ್ಯವಿಲ್ಲವೇ? ಇಲ್ಲಿದೆ ಪರಿಹಾರ!
ನಂಬರ್ 3
ಕ್ಯಾಪಿಟಲ್ ಗೆನ್ ನಿಂದ ವಿನಾಯ್ತಿ ಪಡೆಯಲು ಇಂದೇ ಕ್ಲೇಮ್ ಮಾಡಿ
ಲಾಂಗ್ ಟರ್ಮ್ ಕ್ಯಾಪಿಟಲ್ ಗೆನ್ಸ್ ಮೇಲೆ ತೆರಿಗೆ ವಿನಾಯಿತಿ ಪಡೆಯಲು ಹೂಡಿಕೆ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಂದೇ ಕೊನೆಯ ದಿನವಾಗಿದೆ. ಕೇಂದ್ರ ಹಣಕಾಸು ಸಚಿವಾಲಯ ಜಾರಿಗೊಳಿಸಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ LTCG ಮೇಲೆ ಟ್ಯಾಕ್ಸ್ ಕ್ಲೇಮ್ ಮಾಡುವ ಉದ್ದೇಶದಿಂದ ಮಾಡಲಾಗುವ ಹೂಡಿಕೆ/ನಿರ್ಮಾಣ/ಖರೀದಿಗಾಗಿ ಕೊನೆಯ ದಿನಾಂಕವನ್ನು ವಿಸ್ತರಿಸಿ ಸೆಪ್ಟೆಂಬರ್ 30 , 2020 ಕ್ಕೆ ನಿಗದಿಪಡಿಸಲಾಗಿದೆ ಎಂದಿದೆ.