Vegetables Price Hike : ಸಾಮಾನ್ಯ ಜನತೆಗೆ ಬಿಗ್ ಶಾಕ್ : ಈರುಳ್ಳಿ ಪ್ರತಿ ಕೆಜಿಗೆ ₹20 ಮತ್ತೆ ಟೊಮೆಟೊ ಬೆಲೆಯಲ್ಲಿ ಭಾರೀ ಹೆಚ್ಚಳ!

ಈಗ ತರಕಾರಿಗಳ ಬೆಲೆ ಸಧ್ಯ ಗಗನಕ್ಕೇರುತ್ತಿವೆ. ದೆಹಲಿಯ ಮಾರುಕಟ್ಟೆಗಳಲ್ಲಿ ಟೊಮೆಟೊ ಮತ್ತು ಈರುಳ್ಳಿಯ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

Written by - Channabasava A Kashinakunti | Last Updated : Oct 13, 2021, 10:03 AM IST
  • ಟೊಮೆಟೊ ಮತ್ತು ಈರುಳ್ಳಿಯ ಬೆಲೆಯಲ್ಲಿ ಭಾರೀ ಏರಿಕೆ
  • ಸಗಟು ಈರುಳ್ಳಿಯ ಬೆಲೆ ಕೆಜಿಗೆ 40 ರೂ.
  • ಮತ್ತೆ 25 ಕೆಜಿ ಟೊಮೆಟೊ ಬೆಲೆ 900 ರೂ.
Vegetables Price Hike : ಸಾಮಾನ್ಯ ಜನತೆಗೆ ಬಿಗ್ ಶಾಕ್ : ಈರುಳ್ಳಿ ಪ್ರತಿ ಕೆಜಿಗೆ ₹20 ಮತ್ತೆ ಟೊಮೆಟೊ ಬೆಲೆಯಲ್ಲಿ ಭಾರೀ ಹೆಚ್ಚಳ! title=

ನವದೆಹಲಿ : ಹಬ್ಬದ ಸೀಸನ್ ಆರಂಭವಾಗಿದ್ದು, ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರವು ಸಾಮಾನ್ಯ ಜನರಿಗೆ ಭಾರಿ ಸಮಸ್ಯೆಗಳು ಹೆಚ್ಚುತ್ತಿವೆ. ಇದರೊಂದಿಗೆ, ಈಗ ತರಕಾರಿಗಳ ಬೆಲೆ ಸಧ್ಯ ಗಗನಕ್ಕೇರುತ್ತಿವೆ. ದೆಹಲಿಯ ಮಾರುಕಟ್ಟೆಗಳಲ್ಲಿ ಟೊಮೆಟೊ ಮತ್ತು ಈರುಳ್ಳಿಯ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ಹಣದುಬ್ಬರ ಸಮಸ್ಯೆಯಿಂದ ಹೆಚ್ಚಳ

ಹಣದುಬ್ಬರದ ದರ ಒಂದೆಡೆ ಇಳಿದಿದ್ದರೆ, ಮತ್ತೊಂದೆಡೆ ತರಕಾರಿಗಳ ಚಿಲ್ಲರೆ ದರ ಹೆಚ್ಚಾಗಿದೆ. ಹೊರಗಿನಿಂದ ದೆಹಲಿಗೆ ಬರುವ ಪೂರೈಕೆಯ ಮೇಲಿನ ಪರಿಣಾಮವೇ ಇದಕ್ಕೆ ಕಾರಣ. ಕರ್ನಾಟಕ ಮತ್ತು ಮಹಾರಾಷ್ಟ್ರ(Karnataka and Maharashtra)ದಿಂದ ದೆಹಲಿಗೆ ಟೊಮ್ಯಾಟೋ ಮತ್ತು ಈರುಳ್ಳಿಯನ್ನು ಸರಬರಾಜು ಮಾಡಲಾಗುತ್ತದೆ, ಆದರೆ ಭಾರೀ ಮಳೆಯಿಂದಾಗಿ ತರಕಾರಿಗಳ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ. ಇದಲ್ಲದೇ ಹೆಚ್ಚುತ್ತಿರುವ ಡೀಸೆಲ್ ಹಣದುಬ್ಬರವು ತರಕಾರಿಗಳ ಬೆಲೆಯನ್ನೂ ಹೆಚ್ಚಿಸಿದೆ.

ಇದನ್ನೂ ಓದಿ : Driving License: ಈಗ ಸಂಪೂರ್ಣವಾಗಿ ಬದಲಾಗಲಿದೆ ನಿಮ್ಮ ಚಾಲನಾ ಪರವಾನಗಿ

ಸಗಟು ಮತ್ತು ಚಿಲ್ಲರೆ ಬೆಲೆಗಳ ನಡುವೆ ಭಾರೀ ವ್ಯತ್ಯಾಸವಿದೆ ಎನ್ನುತ್ತಾರೆ ವ್ಯಾಪಾರಿಗಳು. ಟೊಮೆಟೊ ಮತ್ತು ಈರುಳ್ಳಿ(Onion-Tomato)ಯನ್ನು ಹೊರತುಪಡಿಸಿ, ಇತರ ತರಕಾರಿಗಳ ಬೆಲೆಯೂ ವೇಗವಾಗಿ ಹೆಚ್ಚುತ್ತಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ, ತರಕಾರಿಗಳ ಬೆಲೆಯಲ್ಲಿ ಯಾವುದೇ ಇಳಿಕೆಯಾಗುವುದಿಲ್ಲ.

ಈರುಳ್ಳಿ ಬೆಲೆಯಲ್ಲಿ ಭಾರೀ ಹೆಚ್ಚಳ!

ಈ ಕುರಿತು ಪಿಟಿಐಗೆ ಮಾತನಾಡಿದ ಲಕ್ಷ್ಮಿ ನಗರದ ತರಕಾರಿ ಉದ್ಯಮಿ ರಮೇಶ್ ಸಾಹು, ಟೊಮ್ಯಾಟೊ ಮತ್ತು ಈರುಳ್ಳಿಯ ಬೆಲೆ(Onion Price Hike)ಯಲ್ಲಿ ಭಾರೀ ಏರಿಕೆಯಾಗಿದೆ. ಟೊಮೆಟೊ ಬೆಲೆ 50 ರಿಂದ 55 ರೂಪಾಯಿಗಳ ನಡುವೆ ಇದೆ, ಆದರೆ ಮೊದಲು ಅದರ ಬೆಲೆ ಕೆಜಿಗೆ 40 ರೂಪಾಯಿ ಇತ್ತು. ಹಾಗೆ ಈರುಳ್ಳಿಯ ಬೆಲೆಯೂ ಹೆಚ್ಚಾಗಿದೆ ಮತ್ತು ಈಗ ದರ ಪ್ರತಿ ಕೆಜಿಗೆ 50 ರೂ. ಈ ಹಿಂದೆ ಈರುಳ್ಳಿ ಬೆಲೆ 35-40 ರೂ. ಸಗಟು ಬೆಲೆಗಳು ತೀವ್ರವಾಗಿ ಏರಿಕೆಯಾಗಿರುವುದರಿಂದ ಚಿಲ್ಲರೆ ವ್ಯಾಪಾರದಲ್ಲಿ ಈ ಬೆಲೆಗಳು ಹೆಚ್ಚಾಗಿದೆ.

ಇದನ್ನೂ ಓದಿ : Today Petrol-Diesel prices : ವಾಹನ ಸವಾರರೆ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ!

ಮಾರುಕಟ್ಟೆಗಳು ಹೇಗಿದೆ?

ರಾಷ್ಟ್ರ ರಾಜಧಾನಿಯ ಗಾಜಿಪುರ ಸಗಟು ತರಕಾರಿ ಮತ್ತು ಹಣ್ಣಿನ ಮಾರುಕಟ್ಟೆಯ ಅಧ್ಯಕ್ಷರಾದ ಎಸ್ಪಿ ಗುಪ್ತಾ ಅವರು ಈರುಳ್ಳಿ ಮತ್ತು ಟೊಮೆಟೊ(Tomato) ತರಕಾರಿಗಳ ಬೆಲೆಗಳು ಸಗಟು ಮಾರಾಟದಲ್ಲಿ 10-15 ರೂಪಾಯಿಗಳಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಹಿಂದಿನ ತರಕಾರಿಗಳ ಬೆಳೆಗೆ ಹೋಲಿಸಿದರೆ ಈ ತರಕಾರಿಗಳ ಪೂರೈಕೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಬೆಲೆಯಲ್ಲಿ ಏರಿಕೆಯಾಗಿದೆ. ಈ ಹಣದುಬ್ಬರವು ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿದೆ. ದೆಹಲಿಯಲ್ಲಿ ಹೆಚ್ಚಿನ ಟೊಮೆಟೊ ಮತ್ತು ಈರುಳ್ಳಿ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದಿಂದ ಬರುತ್ತದೆ ಮತ್ತು ಈ ರಾಜ್ಯಗಳಲ್ಲಿ ಹವಾಮಾನ ಕೆಟ್ಟದಾಗಿದೆ, ಆದ್ದರಿಂದ ಹಣದುಬ್ಬರ ಹೆಚ್ಚಾಗಿದೆ ಎಂದು ಎಸ್ಪಿ ಗುಪ್ತಾ ಹೇಳಿದ್ದಾರೆ.ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದಾಗಿ ತರಕಾರಿಗಳು ಹಾನಿಗೀಡಾಗಿವೆ, ಇದರಿಂದಾಗಿ ಪೂರೈಕೆ ಕಡಿಮೆಯಾಗಿದೆ ಮತ್ತು ಇದರಿಂದಾಗಿ ಬೆಲೆಗಳು ಹೆಚ್ಚಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News