ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ Yahoo!ಆರ್ಥಿಕ ಹಿಂಜರಿತ ಇದಕ್ಕೆ ಕಾರಣವಲ್ಲ!

yahoo layoffs : ಕಂಪನಿಯು ತನ್ನ ಒಟ್ಟು ಉದ್ಯೋಗಿಗಳ 20 ಪ್ರತಿಶತ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ. ಕಂಪನಿಯ ಈ ನಿರ್ಧಾರದ  ಅನ್ವಯ  ಕನಿಷ್ಠ 1,600 ಉದ್ಯೋಗಿಗಳು ಕೆಲಸ  ಕಳೆದುಕೊಳ್ಳುವ ಭೀತಿ ಎದುರಾಗಿದೆ. 

Written by - Ranjitha R K | Last Updated : Feb 10, 2023, 02:13 PM IST
  • ಕೆಲಸದಿಂದ ವಜಾಗೊಳಿಸುವ ಪ್ರಕ್ರಿಯೆ ಮುಂದುವರಿಯುತ್ತಿದೆ.
  • ಇದೀಗ ಈ ಪಟ್ಟಿಗೆ ಯಾಹೂ ಸೇರ್ಪಡೆಯಾಗಿದೆ.
  • 20 ಪ್ರತಿಶತ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ.
ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ Yahoo!ಆರ್ಥಿಕ  ಹಿಂಜರಿತ  ಇದಕ್ಕೆ ಕಾರಣವಲ್ಲ!  title=

yahoo layoffs : ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ಪ್ರಕ್ರಿಯೆ ವಿಶ್ವಾದ್ಯಂತ ಕಂಪನಿಗಳಲ್ಲಿ  ಮುಂದುವರಿಯುತ್ತಿದೆ. ಇದೀಗ ಈ ಪಟ್ಟಿಗೆ ಯಾಹೂ  ಸೇರ್ಪಡೆಯಾಗಿದೆ.   ಕಂಪನಿಯು ತನ್ನ ಒಟ್ಟು ಉದ್ಯೋಗಿಗಳ 20 ಪ್ರತಿಶತ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ. ಕಂಪನಿಯ ಈ ನಿರ್ಧಾರದ  ಅನ್ವಯ  ಕನಿಷ್ಠ 1,600 ಉದ್ಯೋಗಿಗಳು ಕೆಲಸ  ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕಂಪನಿಯು ತನ್ನ ಶೇಕಡಾ 12 ರಷ್ಟು ಉದ್ಯೋಗಿಗಳಿಗೆ ಈ ಬಗ್ಗೆ ಮೇಲ್ ಕಳುಹಿಸಿದೆ. ದಿನದ ಅಂತ್ಯದ ವೇಳೆಗೆ ಕನಿಷ್ಠ 12 ಶೇಕಡಾ ಅಂದರೆ 1,000 ಉದ್ಯೋಗಿಗಳನ್ನು ವಜಾಗೊಳಿಸಾಲು ನಿರ್ಧರಿಸಿದೆ. ಉಳಿದ ಶೇಕಡಾ 8 ರಷ್ಟು ಉದ್ಯೋಗಿಗಳನ್ನು ಅಂದರೆ 600 ಜನರನ್ನು ಮುಂದಿನ 6 ತಿಂಗಳಲ್ಲಿ ವಜಾ ಮಾಡಲಾಗುವುದು ಎನ್ನಲಾಗಿದೆ. 

ಒಟ್ಟು 1600 ಉದ್ಯೋಗಿಗಳ ಕೆಲಸದ ಮೇಲೆ ತೂಗು ಗತ್ತಿ : 
ಯಾಹೂ ತನ್ನ ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಶೇಕಡಾ 20 ರಷ್ಟು  ಕಡಿತ ಮಾಡುವುದಾಗಿ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಒಟ್ಟು 1,600 ಜನರ ಉದ್ಯೋಗದ ಮೇಲೆ ಪರಿಣಾಮ ಬೀರುವುದು ಖಚಿತವಾಗಿದೆ. ಅದೇ ಸಮಯದಲ್ಲಿ, Yahoo ನ 50 ಪ್ರತಿಶತಕ್ಕೂ ಹೆಚ್ಚು ಟೆಕ್ ಉದ್ಯೋಗಿಗಳು ಈ ವಜಾಗೊಳಿಸುವ ಪ್ರಕ್ರಿಯೆಯಿಂದ ಪ್ರಭಾವಿತರಾಗುತ್ತಾರೆ. ಇನ್ನೊಂದೆಡೆ,  ಜಾಗತಿಕ ಆರ್ಥಿಕ ಹಿಂಜರಿತದ ಕಾರಣದಿಂದ  ಉದ್ಯೋಗಿಗಳ ಕೆಲ್ಸಕ್ಕೆ ಕತ್ತರಿ ಹಾಕುತ್ತಿಲ್ಲ ಎನ್ನುವುದನ್ನು  Yahoo ನ CEO Jim Lanzone ಸ್ಪಷ್ಟಪಡಿಸಿದ್ದಾರೆ.  Yahooನ ನಷ್ಟದ ಘಟಕಗಳನ್ನು ಸರಿದೂಗಿಸುವ ಸಲುವಾಗಿ ಈ ಕ್ರಮ ಎಂದು ಹೇಳಿದ್ದಾರೆ.

 ಇದನ್ನೂ ಓದಿ : Gold Price Today: ಚಿನ್ನದ ಬೆಲೆಗೆ ಸಂಬಂಧಿಸಿದಂತೆ ಒಂದು ಗುಡ್ ನ್ಯೂಸ್, 2200 ರೂ.ಗಳಷ್ಟು ಅಗ್ಗವಾಯ್ತು ತೊಲೆ ಚಿನ್ನ!

7,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಡಿಸ್ನಿ :  
ಯಾಹೂವನ್ನು ಹೊರತುಪಡಿಸಿದರೆ ದೊಡ್ಡ ಮನರಂಜನಾ ಕಂಪನಿ ಡಿಸ್ನಿ ತನ್ನ 7,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಕಂಪನಿಯ ಸಿಇಒ ಬಾಬ್ ಇಗರ್ ಈ ವಿಷಯವನ್ನು ಘೋಷಿಸಿದ್ದಾರೆ. ಇದಲ್ಲದೇ, ಆರ್ಥಿಕ ಹಿಂಜರಿತದಿಂದಾಗಿ, ಮೆಟಾ (ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್), ಅಮೆಜಾನ್, ಮೈಕ್ರೋಸಾಫ್ಟ್, ಎಸ್‌ಎಪಿ, ಒಎಲ್‌ಎಕ್ಸ್ ನಂಥಹ ಕೆಲವು ದೊಡ್ಡ ಕಂಪನಿಗಳು ದೊಡ್ಡ ಪ್ರಮಾಣದಲ್ಲಿಯೇ ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿವೆ. 

ಇದನ್ನೂ ಓದಿ : PM Kisan : ಪಿಎಂ ಕಿಸಾನ್ 13ನೇ ಕಂತಿನ ಹಣ ಬೇಕಾದರೆ, ತಪ್ಪದೆ ಇಂದೇ E-Kyc ಮಾಡಿಸಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News