Agnipath Scheme:  ಅಗ್ನಿವೀರ ವಾಯು ಹುದ್ದೆ ನೊಂದಣಿಗೆ ಆಹ್ವಾನ

ಭಾರತೀಯ ವಾಯುಪಡೆಯ ವಿಜ್ಞಾನ ಮತ್ತು ವಿಜ್ಞಾನೇತರ ಸ್ಟ್ರೀಮ್‍ಗಳಿಗಾಗಿ ಅಗ್ನಿಪಥ್ ಯೋಜನೆಯಡಿ ವಾಯುಸೇನೆಯಲ್ಲಿ ಅಗ್ನಿವೀರ್ ವಾಯು ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ನೊಂದಣಿಗೆ ಆಹ್ವಾನಿಸಲಾಗಿದೆ.

Written by - Manjunath N | Last Updated : Jul 28, 2023, 12:46 AM IST
  • ಅಭ್ಯರ್ಥಿಗಳು ನೊಂದಾಯಿಸಿಕೊಳ್ಳಲು ಕೊನೆಯ ದಿನ ಆಗಸ್ಟ್ 18 ಆಗಿರುತ್ತದೆ. ಆನ್‍ಲೈನ್ ನೊಂದಣಿಗಾಗಿ https://agnipathvayu.cdac.in ಲಿಂಕ್ ಬಳಸಬಹುದಾಗಿದೆ.
  • ಆನ್‍ಲೈನ್ ಪರೀಕ್ಷೆಯು ಅಕ್ಟೋಬರ್ 13 ರಂದು ನಡೆಯಲಿದೆ
  • ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.08392-273988 ಅಥವಾ https://careerindianairforce.cdac.in ವೆಬ್‍ಸೈಟ್‍ಗೆ ಭೇಟಿ ನೀಡಬಹುದಾಗಿದೆ
Agnipath Scheme:  ಅಗ್ನಿವೀರ ವಾಯು ಹುದ್ದೆ ನೊಂದಣಿಗೆ ಆಹ್ವಾನ title=
ಸಾಂದರ್ಭಿಕ ಚಿತ್ರ

ಬೆಂಗಳೂರು:ಭಾರತೀಯ ವಾಯುಪಡೆಯ ವಿಜ್ಞಾನ ಮತ್ತು ವಿಜ್ಞಾನೇತರ ಸ್ಟ್ರೀಮ್‍ಗಳಿಗಾಗಿ ಅಗ್ನಿಪಥ್ ಯೋಜನೆಯಡಿ ವಾಯುಸೇನೆಯಲ್ಲಿ ಅಗ್ನಿವೀರ್ ವಾಯು ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ನೊಂದಣಿಗೆ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಮರುಕಳಿಸಿದ ಪ್ರಕರಣ: ಟೊಮೊಟೊ ಬಾತ್ ಸೇವಿಸಿ ಮೊರಾರ್ಜಿ ಶಾಲೆಯ 7 ವಿದ್ಯಾರ್ಥಿಗಳು ಅಸ್ವಸ್ಥ

ವಿದ್ಯಾರ್ಹತೆಯು ದ್ವಿತೀಯ ಪಿ.ಯು.ಸಿ(ವಿಜ್ಞಾನ, ವಾಣಿಜ್ಯ, ಕಲೆ ಮತ್ತು ಡಿಪ್ಲೋಮಾ, ಇತರೆ ವಿಷಯಗಳಲ್ಲಿ ಶೇ.50 ರಷ್ಟು ಅಂಕ ಮತ್ತು ಇಂಗ್ಲೀಷ್‍ನಲ್ಲಿ ಶೇ.50 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ವಯೋಮಿತಿಯು ಅಭ್ಯರ್ಥಿಯು 2003 ಜೂನ್ 27 ರಿಂದ 2006 ಡಿಸೆಂಬರ್ 27 ರ ನಡುವೆ ಜನಿಸಿರಬೇಕು.

ಇದನ್ನೂ ಓದಿ: ಬಿಜೆಪಿ ಮತ್ತು ಸಂಘ ಪರಿವಾರ ಮೀಸಲಾತಿ ಉಪಕ್ರಮಗಳಿಗೆ ವಿರುದ್ಧವಾಗಿದೆ-ಸಿಎಂ ಸಿದ್ದರಾಮಯ್ಯ

ಅಭ್ಯರ್ಥಿಗಳು ನೊಂದಾಯಿಸಿಕೊಳ್ಳಲು ಕೊನೆಯ ದಿನ ಆಗಸ್ಟ್ 18 ಆಗಿರುತ್ತದೆ. ಆನ್‍ಲೈನ್ ನೊಂದಣಿಗಾಗಿ https://agnipathvayu.cdac.in ಲಿಂಕ್ ಬಳಸಬಹುದಾಗಿದೆ. ಆನ್‍ಲೈನ್ ಪರೀಕ್ಷೆಯು ಅಕ್ಟೋಬರ್ 13 ರಂದು ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.08392-273988 ಅಥವಾ https://careerindianairforce.cdac.in ವೆಬ್‍ಸೈಟ್‍ಗೆ ಭೇಟಿ ನೀಡಬಹುದಾಗಿದೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪಿ.ಎಸ್.ಹಟ್ಟಪ್ಪ ಅವರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News