CSIR-4PI Recruitment 2024: ಡ್ರೈವರ್ & ಟೆಕ್ನಿಷಿಯನ್ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ

CSIR-4PI Recruitment 2024: CSIR Fourth Paradigm Instituteನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 17 ಡ್ರೈವರ್, ಟೆಕ್ನಿಕಲ್ ಅಸಿಸ್ಟೆಂಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

Written by - Puttaraj K Alur | Last Updated : Feb 28, 2024, 09:06 PM IST
  • CSIR Fourth Paradigm Instituteನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ
  • ಡ್ರೈವರ್ & ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
  • ಫೆಬ್ರವರಿ 29 ಅಂದರೆ ನಾಳೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ
CSIR-4PI Recruitment 2024: ಡ್ರೈವರ್ & ಟೆಕ್ನಿಷಿಯನ್ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ title=
CSIR-4PI Recruitment 2024

ಬೆಂಗಳೂರು: CSIR Fourth Paradigm Instituteನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 17 ಡ್ರೈವರ್, ಟೆಕ್ನಿಕಲ್ ಅಸಿಸ್ಟೆಂಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 29 ಅಂದರೆ ನಾಳೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಹುದ್ದೆಯ ಮಾಹಿತಿ: ಟೆಕ್ನಿಕಲ್ ಅಸಿಸ್ಟೆಂಟ್- 15, ಟೆಕ್ನಿಷಿಯನ್- 1 ಮತ್ತು ಡ್ರೈವರ್- 1

ವಿದ್ಯಾರ್ಹತೆ: ಟೆಕ್ನಿಕಲ್ ಅಸಿಸ್ಟೆಂಟ್‌ಗೆ ಡಿಪ್ಲೊಮಾ, ಬಿ.ಎಸ್ಸಿ, ಬಿಸಿಎ, ಟೆಕ್ನಿಷಿಯನ್‌ಗೆ 10ನೇ ತರಗತಿ ಮತ್ತು ಡ್ರೈವರ್‌ಗೆ 10ನೇ ತರಗತಿ

ವಯೋಮಿತಿ: ಟೆಕ್ನಿಕಲ್ ಅಸಿಸ್ಟೆಂಟ್‌ಗೆ 28 ವರ್ಷ, ಟೆಕ್ನಿಷಿಯನ್‌ಗೆ 28 ವರ್ಷ ಮತ್ತು ಡ್ರೈವರ್‌ಗೆ 27 ವರ್ಷ

ಇದನ್ನೂ ಓದಿ: "ಬಿಜೆಪಿ ಪಕ್ಕಕ್ಕೂ, ಪಾಕಿಸ್ತಾನದ ನೆಂಟಸ್ತನಕ್ಕೂ ಹಲವು ದಶಕಗಳ ಇತಿಹಾಸವಿದೆ"-ಬಿ.ಕೆ.ಹರಿಪ್ರಸಾದ್ ಟೀಕೆ

ವಯೋಮಿತಿ ಸಡಿಲಿಕೆ: SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ, PwBD (UR) ಅಭ್ಯರ್ಥಿಗಳಿಗೆ 10 ವರ್ಷ, PwBD ಅಭ್ಯರ್ಥಿಗಳಿಗೆ 13 ವರ್ಷ ಮತ್ತು PwBD ಅಭ್ಯರ್ಥಿಗಳಿಗೆ 15 ವರ್ಷಗಳು

ಅರ್ಜಿ ಶುಲ್ಕ: SC/ST/PwBD/ಮಹಿಳೆ/CSIR ಉದ್ಯೋಗಿಗಳು ಮತ್ತು ವಿದೇಶದಲ್ಲಿರುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಸುವಂತಿಲ್ಲ, ಆದರೆ ಇನ್ನುಳಿದ ಎಲ್ಲಾ ಇತರ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ 500 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು.

ವೇತನ: ಟೆಕ್ನಿಕಲ್ ಅಸಿಸ್ಟೆಂಟ್‌ಗೆ ಮಾಸಿಕ ₹35,400, ಟೆಕ್ನಿಷಿಯನ್‌ಗೆ ಮಾಸಿಕ ₹19,900, ಡ್ರೈವರ್‌ಗೆ ಮಾಸಿಕ ₹19,900

ಉದ್ಯೋಗದ ಸ್ಥಳ: ಬೆಂಗಳೂರು

ಆಯ್ಕೆ ಪ್ರಕ್ರಿಯೆ: ಸ್ಕ್ರೀನಿಂಗ್, ಟ್ರೇಡ್ ಟೆಸ್ಟ್​, ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?: ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಬೇಕು. ಆಡಳಿತ ನಿಯಂತ್ರಕರು, ನೇಮಕಾತಿ ವಿಭಾಗ, CSIR Fourth Paradigm Institute (CSIR-4PI), NWTC ರಸ್ತೆ, NAL ಬೇಲೂರು ಕ್ಯಾಂಪಸ್, ಯೆಮ್ಲೂರು ಪೋಸ್ಟ್ ಬೆಂಗಳೂರು-560037

ಅಭ್ಯರ್ಥಿಗಳು ಆನ್​ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ಆನ್​ಲೈನ್​ ಮತ್ತು ಆಫ್​ಲೈನ್​ ಮೂಲಕವೂ ಅರ್ಜಿ ಹಾಕಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಇದನ್ನೂ ಓದಿ: ಕಡ್ಡಾಯ ಕನ್ನಡ: ಪಾಲಿಕೆ ವತಿಯಿಂದ ಕನ್ನಡೇತರ ಫಲಕಗಳ ತೆರವು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News