Job Alert: ಪಶುಸಂಗೋಪನಾ ಇಲಾಖೆಯಲ್ಲಿ 1,125 ಹುದ್ದೆಗಳಿಗೆ ಅರ್ಜಿ ಆಹ್ವಾನ

Animal Husbandry Department Recruitment 2024: ಅರ್ಜಿ ಪ್ರಕ್ರಿಯೆ ಮಾರ್ಚ್ 14ರಿಂದ ಪ್ರಾರಂಭವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 21ರವರೆಗೆ ಅರ್ಜಿ ಸಲ್ಲಿಸಬಹುದು. ಪಶುಸಂಗೋಪನಾ ನಿಗಮ ನಿಯಮಿತದ ಅಧಿಕೃತ ವೆಬ್‌ಸೈಟ್‌ bharatiyapashupalan.comಗೆ ಭೇಟಿ ನೀಡುವ ಮೂಲಕ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.  ​

Written by - Puttaraj K Alur | Last Updated : Mar 17, 2024, 05:41 PM IST
  • ಪಶುಸಂಗೋಪನಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
  • ಒಟ್ಟು 1,125 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
  • ಸೆಂಟರ್ ಇನ್ಚಾರ್ಜ್, ಎಕ್ಸ್ಟೆನ್ಷನ್ ಆಫೀಸರ್ & ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Job Alert: ಪಶುಸಂಗೋಪನಾ ಇಲಾಖೆಯಲ್ಲಿ 1,125 ಹುದ್ದೆಗಳಿಗೆ ಅರ್ಜಿ ಆಹ್ವಾನ title=
Job Openings

 Animal Husbandry Department Recruitment 2024: ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವ ಯುವಕರಿಗೆ ಇಲ್ಲಿದೆ ಸಿಹಿಡುದ್ದಿ. ಪಶುಸಂಗೋಪನಾ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗದೆ. ನೇಮಕಾತಿ  ಅಧಿಸೂಚನೆಯ ಪ್ರಕಾರ, ಒಟ್ಟು 1,125 ಸೆಂಟರ್ ಇನ್ಚಾರ್ಜ್, ಸೆಂಟರ್ ಎಕ್ಸ್ಟೆನ್ಷನ್ ಆಫೀಸರ್ ಮತ್ತು ಸೆಂಟರ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 

ಅರ್ಜಿ ಪ್ರಕ್ರಿಯೆ ಮಾರ್ಚ್ 14ರಿಂದ ಪ್ರಾರಂಭವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 21ರವರೆಗೆ ಅರ್ಜಿ ಸಲ್ಲಿಸಬಹುದು. ಪಶುಸಂಗೋಪನಾ ನಿಗಮ ನಿಯಮಿತದ ಅಧಿಕೃತ ವೆಬ್‌ಸೈಟ್‌ bharatiyapashupalan.comಗೆ ಭೇಟಿ ನೀಡುವ ಮೂಲಕ ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.  

ಇದನ್ನೂ ಓದಿ: ಲೋಕಸಭೆ ಚುನಾವಣೆ : ಧಾರ್ಮಿಕ ಸ್ಥಳಗಳಲ್ಲಿ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ

ನೇಮಕಾತಿ ಅಧಿಸೂಚನೆಯ ಪ್ರಕಾರ, ಮೇಕ್ ಇನ್ ಇಂಡಿಯಾ ಮತ್ತು ನಿಗಮವು ಅಭಿವೃದ್ಧಿಪಡಿಸಿದ ಜಾನುವಾರು ಸಾಕಣೆ ನೀತಿಯನ್ನು ಉತ್ತೇಜಿಸಲು ಬ್ಲಾಕ್ ಅಥವಾ ತಹಸಿಲ್ ಮಟ್ಟದಲ್ಲಿ BPNL ಪಶುಪಾಲಕ ಕೇಂದ್ರಗಳನ್ನು ತೆರೆಯಲಾಗುವುದು. ಈ ಕೇಂದ್ರಗಳ ಮೂಲಕ local food supplements, calcium supplements, ಪಶು ಆಹಾರ ಮತ್ತು ನಿಗಮವು ತಯಾರಿಸಿದ ಇತರ ಉತ್ಪನ್ನಗಳ ಮಾರಾಟ ಮಾಡಲಾಗುವುದು. ಇದರ ಕಾರ್ಯಾಚರಣೆಗೆ ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡಲು ಸಿದ್ಧವಿರುವ ಯುವಕರಿಗೆ ಉದ್ಯೋಗ ನೀಡಲಾಗುತ್ತದೆ. ಆಯ್ಕೆಯಾದ ಪ್ರತಿ ಅಭ್ಯರ್ಥಿಗೆ 2.5 ಲಕ್ಷ ರೂ.ಗಳ ಅಪಘಾತ ವಿಮೆ ಸೌಲಭ್ಯ ಇರುತ್ತದೆ.

ಹುದ್ದೆಗಳ ವಿವರ: 125 ಕೇಂದ್ರದ ಉಸ್ತುವಾರಿ, 250 ಕೇಂದ್ರ ವಿಸ್ತರಣಾಧಿಕಾರಿ ಮತ್ತು 750 ಸೆಂಟರ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ.  

ವೇತನ: BPNLನಲ್ಲಿ ಸೆಂಟರ್ ಇನ್ಚಾರ್ಜ್ ಹುದ್ದೆಗೆ ತಿಂಗಳಿಗೆ 43,500 ರೂ., ಸೆಂಟರ್ ಎಕ್ಸ್ಟೆನ್ಷನ್ ಇನ್ಚಾರ್ಜ್ ಹುದ್ದೆಗೆ 40,500 ರೂ. ಮತ್ತು ಸೆಂಟರ್ ಅಸಿಸ್ಟೆಂಟ್ ಹುದ್ದೆಗೆ 37,500 ರೂ. ವೇತನ ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ: ಸೆಂಟರ್ ಇನ್ಚಾರ್ಜ್‌ಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸೆಂಟರ್ ಎಕ್ಸ್ಟೆನ್ಷನ್ ಆಫೀಸರ್‌ಗೆ ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಸೆಂಟರ್ ಅಸಿಸ್ಟೆಂಟ್ ಹುದ್ದೆಗೆ 10ನೇ ತರಗತಿ ತೇರ್ಗಡೆ ಹೊಂದಿರಬೇಕು. 

ವಯೋಮಿತಿ: BPNL ನೇಮಕಾತಿಗೆ ವಯಸ್ಸಿನ ಮಿತಿ 18 ರಿಂದ 40 ವರ್ಷಗಳು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ: BPNL ನೇಮಕಾತಿಗೆ ಅರ್ಜಿ ಶುಲ್ಕವು ಎಲ್ಲಾ ಹುದ್ದೆಗಳಿಗೆ ವಿಭಿನ್ನವಾಗಿರುತ್ತದೆ. ಕೇಂದ್ರದ ಉಸ್ತುವಾರಿ ಹುದ್ದೆಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಲು 944 ರೂ. ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಕೇಂದ್ರ ವಿಸ್ತರಣಾಧಿಕಾರಿ ಹುದ್ದೆಗೆ 826 ರೂ. ಮತ್ತು ಸೆಂಟರ್ ಅಸಿಸ್ಟೆಂಟ್ ಹುದ್ದೆಗೆ 708 ರೂ. ಶುಲ್ಕವಿರುತ್ತದೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 50 ಅಂಕಗಳ ಲಿಖಿತ ಪರೀಕ್ಷೆ ಮತ್ತು 50 ಅಂಕಗಳ ಸಂದರ್ಶನ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಇದನ್ನೂ ಓದಿ: Lok Sabha Election 2024: 4600 ಕೋಟಿಗೂ ಅಧಿಕ ದಾನ! ಇಲೆಕ್ಟೋರಲ್ ಬಾಂಡ್ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಚುನಾವಣಾ ಆಯೋಗ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News