NEET 2022: ಎಂಬಿಬಿಎಸ್ ಸೀಟ್‌ಗಳ ಸಂಖ್ಯೆ ಹೆಚ್ಚಳ: ಯಾವ ರಾಜ್ಯಕ್ಕೆ ಎಷ್ಟು ಸೀಟು?

ಇನ್ನು ಸಂಸತ್ತಿನಲ್ಲಿ ಕೇಂದ್ರ ಆರೋಗ್ಯ ಸಚಿವರು ನೀಡಿದ ಹೇಳಿಕೆಯ ನಂತರ ಸೀಟು ಹೆಚ್ಚಳದ ಬಗ್ಗೆ ಚರ್ಚೆಗಳು ಆರಂಭವಾಗಿದೆ.

Written by - Bhavishya Shetty | Last Updated : Jul 31, 2022, 12:02 PM IST
  • ದೇಶದ 16 ರಾಜ್ಯಗಳಲ್ಲಿ 3495 ಎಂಬಿಬಿಎಸ್ ಸೀಟುಗಳು ಹೆಚ್ಚಾಗಲಿವೆ
  • ರಾಜಸ್ಥಾನದಲ್ಲಿ ಗರಿಷ್ಠ 700, ಮಧ್ಯಪ್ರದೇಶದಲ್ಲಿ 600 ಸೀಟುಗಳು ಹೆಚ್ಚಳ ಸಾಧ್ಯತೆ
  • ಹಳೆಯ ವೈದ್ಯಕೀಯ ಕಾಲೇಜುಗಳಲ್ಲಿ ಮಾತ್ರ ಈ ಸೀಟುಗಳು ಹೆಚ್ಚಾಗಲಿವೆ
NEET 2022: ಎಂಬಿಬಿಎಸ್ ಸೀಟ್‌ಗಳ ಸಂಖ್ಯೆ ಹೆಚ್ಚಳ:  ಯಾವ ರಾಜ್ಯಕ್ಕೆ ಎಷ್ಟು ಸೀಟು? title=
Medical

ವೈದ್ಯಕೀಯಕ್ಕೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಎಲ್ಲವೂ ಸರಿಯಾಗಿ ನಡೆದರೆ ಶೀಘ್ರದಲ್ಲೇ ದೇಶದ 16 ರಾಜ್ಯಗಳಲ್ಲಿ 3495 ಎಂಬಿಬಿಎಸ್ ಸೀಟುಗಳು ಹೆಚ್ಚಾಗಲಿವೆ. ಸೀಟು ಹೆಚ್ಚಳಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ವರದಿಯ ಪ್ರಕಾರ ರಾಜಸ್ಥಾನದಲ್ಲಿ ಗರಿಷ್ಠ 700 ಮತ್ತು ಮಧ್ಯಪ್ರದೇಶದಲ್ಲಿ 600 ಸೀಟುಗಳನ್ನು ಹೆಚ್ಚಿಸಲಾಗುವುದು. ಆದರೆ, ಈಗ ಬಂದಿರುವ ಮಾಹಿತಿ ಪ್ರಕಾರ ಹಳೆಯ ವೈದ್ಯಕೀಯ ಕಾಲೇಜುಗಳಲ್ಲಿ ಮಾತ್ರ ಈ ಸೀಟುಗಳು ಹೆಚ್ಚಾಗಲಿವೆ. 

ಇದನ್ನೂ ಓದಿ: ʼಮಂಕಿಪಾಕ್ಸ್‌ ಅಲ್ಲ ಚಿಕನ್‌ಪಾಕ್ಸ್‌ʼ: ಬೆಂಗಳೂರು ಪ್ರಕರಣಕ್ಕೆ ಸಚಿವರ ಸ್ಪಷ್ಟನೆ

ಇನ್ನು ಸಂಸತ್ತಿನಲ್ಲಿ ಕೇಂದ್ರ ಆರೋಗ್ಯ ಸಚಿವರು ನೀಡಿದ ಹೇಳಿಕೆಯ ನಂತರ ಸೀಟು ಹೆಚ್ಚಳದ ಬಗ್ಗೆ ಚರ್ಚೆಗಳು ಆರಂಭವಾಗಿದೆ.

ಕೇಂದ್ರ ಆರೋಗ್ಯ ಸಚಿವರು ಹೇಳಿದ್ದೇನು?
ಕೇಂದ್ರ ಆರೋಗ್ಯ ಸಚಿವ ಮನುಸಖ್ ಮಾಂಡವೀಯ ಅವರು ಸಂಸತ್ತಿನಲ್ಲಿ ಡಾ.ಹೀನಾ ಗಾವಿತ್ ಮತ್ತು ಡಾ.ಶ್ರೀಕಾಂತ್ ಏಕನಾಥ್ ಶಿಂಧೆ ಅವರ ಪ್ರಶ್ನೆಗೆ ಉತ್ತರಿಸಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಕೇಂದ್ರ ಪ್ರಾಯೋಜಿತ ಯೋಜನೆಯಡಿ (ಸಿಎಸ್‌ಎಸ್) ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದರು. ಇದರ ಅಡಿಯಲ್ಲಿ ಈಗಿರುವ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳನ್ನು ಹೆಚ್ಚಿಸಲಾಗುವುದು. 16 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 3495 ಎಂಬಿಬಿಎಸ್ ಸೀಟುಗಳನ್ನು ಅನುಮೋದಿಸಲಾಗಿದೆ.  ಅಲ್ಲಿ ವೈದ್ಯಕೀಯ ಪಿಜಿ ಸೀಟುಗಳು ಹೆಚ್ಚಾಗುತ್ತವೆ ಮತ್ತು ಹೊಸ ಪಿಜಿ ವಿಷಯಗಳು ಪ್ರಾರಂಭವಾಗುತ್ತವೆ ಎಂದರು.

ಯಾವ ರಾಜ್ಯದಲ್ಲಿ ಎಷ್ಟು ಸೀಟು ಹೆಚ್ಚಾಗಲಿದೆ?
ವರದಿ ಪ್ರಕಾರ ರಾಜಸ್ಥಾನದಲ್ಲಿ 700, ಮಧ್ಯಪ್ರದೇಶದಲ್ಲಿ 600, ಕರ್ನಾಟಕದಲ್ಲಿ 550, ತಮಿಳುನಾಡಿನಲ್ಲಿ 345, ಗುಜರಾತ್‌ನಲ್ಲಿ 270, ಒಡಿಶಾದಲ್ಲಿ 200, ಆಂಧ್ರಪ್ರದೇಶದಲ್ಲಿ 150, ಮಹಾರಾಷ್ಟ್ರದಲ್ಲಿ 150, ಜಾರ್ಖಂಡ್, ಪಂಜಾಬ್‌, ಪಶ್ಚಿಮ ಬಂಗಾಳದಲ್ಲಿ 100, ಜಮ್ಮು ಮತ್ತು ಕಾಶ್ಮೀರದಲ್ಲಿ 60, ಮಣಿಪುರದಲ್ಲಿ 50, ಯುಪಿಯಲ್ಲಿ 50, ಉತ್ತರಾಖಂಡದಲ್ಲಿ 50 ಮತ್ತು ಹಿಮಾಚಲ ಪ್ರದೇಶದಲ್ಲಿ 20 ಸೀಟುಗಳು ಹೆಚ್ಚಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಮುಹಮ್ಮದ್ ಫಾಝಿಲ್ ಪ್ರಕರಣ : ಕೊಲೆಗೆ ಬಳಸಿದ್ದ ಕಾರು-ಮಾಲೀಕ ಪೊಲೀಸ್ ವಶಕ್ಕೆ

ತಮಿಳುನಾಡಿನಲ್ಲಿ ಹೆಚ್ಚಿನ ಸ್ಥಾನಗಳು
ಪ್ರಸ್ತುತ ದೇಶದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 91927 ಎಂಬಿಬಿಎಸ್ ಸೀಟುಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು. ಇವುಗಳಲ್ಲಿ 48012 ಸೀಟುಗಳು ಸರ್ಕಾರಿ ಮತ್ತು 43915 ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿವೆ. ಇಲ್ಲಿ 10725 ಸೀಟುಗಳೊಂದಿಗೆ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಕರ್ನಾಟಕ 10145 ಸೀಟ್‌ಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದೆ. 9895 ಸೀಟುಗಳೊಂದಿಗೆ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶದಲ್ಲಿ 9053 ಸ್ಥಾನಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News