ಮಹಾರಾಷ್ಟ್ರ : ಛತ್ರಪತಿ ಸಂಭಾಜಿನಗರದಲ್ಲಿರುವ ವಿಭಾಗೀಯ ಕ್ರೀಡಾ ಸಂಕೀರ್ಣದ ಗುತ್ತಿಗೆ ಸಿಬ್ಬಂದಿ ಹರ್ಷಲ್ ಕುಮಾರ್ ಕ್ಷೀರಸಾಗರ್ ಈಗ ಪರಾರಿಯಾಗಿದ್ದಾರೆ. ಹರ್ಷಲ್ ಗೆ ಬೆಂಬಲ ನೀಡಿದ ಆರೋಪದ ಮೇಲೆ ಆತನ ಸಹೋದ್ಯೋಗಿ ಯಶೋದಾ ಶೆಟ್ಟಿ ಮತ್ತು ಆಕೆಯ ಪತಿ ಬಿಕೆ ಜೀವನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
23ರ ವಯಸ್ಸಿನ ಹರ್ಷಲ್, ಹಣ ದೋಚಲು ಅನುಸರಿಸಿದ್ದ ಪ್ಲ್ಯಾನ್ ತನಿಖೆಯಿಂದ ಬೆಳಕಿಗೆ ಬಂದಿದೆ. ಹರ್ಷಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನ ಹಳೆಯ ಲೆಟರ್‌ಹೆಡ್ ಅನ್ನು ಬ್ಯಾಂಕ್‌ಗೆ ಇಮೇಲ್ ಮಾಡಿ, ಕ್ರೀಡಾ ಸಂಕೀರ್ಣದ ಖಾತೆಗೆ ಲಿಂಕ್ ಮಾಡಲಾದ ಇಮೇಲ್ ವಿಳಾಸದಲ್ಲಿ ಬದಲಾವಣೆಗೆ ಮಾಡುವಂತೆ ವಿನಂತಿಸಿದ್ದ. ಕ್ರೀಡಾ ಸಂಕೀರ್ಣದ ಖಾತೆಯಂತೆಯೇ ವಿಳಾಸದೊಂದಿಗೆ ಹೊಸ ಇಮೇಲ್ ಖಾತೆಯನ್ನು ತೆರೆದಿದ್ದ. ಕೇವಲ ಒಂದು ಅಕ್ಷರವನ್ನು ಮಾತ್ರ ಬದಲಾಯಿಸಿದ್ದ. ಈ ಇಮೇಲ್ ವಿಳಾಸವನ್ನು ಈಗ ಕ್ರೀಡಾ ಸಂಕೀರ್ಣದ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗಿದೆ. ಇದರಿಂದ ಹರ್ಷಲ್ OTP ಗಳು ಮತ್ತು ವಹಿವಾಟುಗಳಿಗೆ ಅಗತ್ಯವಿರುವ ಇತರ ಮಾಹಿತಿಯನ್ನು ಯಾವುದೇ ನಿರ್ಬಂಧ ಇಲ್ಲದೆ ಪ್ರವೇಶಿಸಬಹುದು.
ಇದನ್ನೂ ಓದಿ:ಬಿಗ್ ಬಾಸ್ ಸ್ಪರ್ಧಿ ಕಾಲು ಮುರಿತ..! ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ನಟಿ... ಏನಾಯ್ತು..?
ಈ ಪ್ರಕ್ರಿಯೆ ನಂತರ, ಮುಂದಿನ ಹಂತದಲ್ಲಿ, ಹರ್ಷಲ್ ವಿಭಾಗೀಯ ಕ್ರೀಡಾ ಸಂಕೀರ್ಣ ಸಮಿತಿಯ ಬ್ಯಾಂಕ್ ಖಾತೆಯಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಸಕ್ರಿಯಗೊಳಿಸಿದ್ದಾನೆ. ಈ ವರ್ಷದ ಜುಲೈ 1 ರಿಂದ ಡಿಸೆಂಬರ್ 7 ರ ನಡುವೆ 13 ಬ್ಯಾಂಕ್ ಖಾತೆಗಳಿಗೆ 21.6 ಕೋಟಿ ರೂ. ದೋಚಿದ್ದಾನೆ..
ಈ ಹಣವನ್ನು 1.2 ಕೋಟಿ ರೂಪಾಯಿ ಮೌಲ್ಯದ BMW ಕಾರು, 1.3 ಕೋಟಿ ರೂಪಾಯಿ ಬೆಲೆಯ SUV ಮತ್ತು 32 ಲಕ್ಷ ರೂಪಾಯಿ ಮೌಲ್ಯದ BMW ಬೈಕ್ ಖರೀದಿಸಲು ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರ್ಷಲ್ ತನ್ನ ಗೆಳತಿಗೆ ಛತ್ರಪತಿ ಸಂಭಾಜಿನಗರ ವಿಮಾನ ನಿಲ್ದಾಣದ ಬಳಿ 4 BHK ಫ್ಲಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾನೆ. ಆತ ತನ್ನ ಗೆಳತಿಗಾಗಿ ವಜ್ರಖಚಿತ ಜೋಡಿ ಕನ್ನಡಕವನ್ನು ಸಹ ಆರ್ಡರ್ ಮಾಡಿದ್ದು, ತನಿಖೆಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ:ʼಲೈಂಗಿಕ ಶಿಕ್ಷಣʼ ಇದ್ರೆ ಏನ್ ಬಂತು, ʼಪ್ರಾಕ್ಟಿಕಲ್ʼ ಆಗಿ ಮಾಡೋಕೆ ಚಾನ್ಸ್ ಕೊಡ್ಬೇಕು..! ನಟಿ ಓಪನ್ ಟಾಕ್..
ಈ ವಂಚನೆ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಹಣ ದೋಚಲು ಬಳಸಿದ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಹರ್ಷಲ್‌ನನ್ನು ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದು, ಐಷಾರಾಮಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕ್ರೀಡಾ ಇಲಾಖೆಯ ಅಧಿಕಾರಿಯೊಬ್ಬರು ಹಣಕಾಸಿನ ಅವ್ಯವಹಾರವನ್ನು ಗಮನಿಸಿ ದೂರು ದಾಖಲಿಸಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.