ಪೋಷಕರೇ ಗಮನಿಸಿ ! ಶೈಕ್ಷಣಿಕ ವ್ಯವಸ್ಥೆಯಲ್ಲಿ ಮೇಜರ್ ಸರ್ಜರಿ : ಮುಂದಿನ ತರಗತಿಗೆ ಹೋಗಬೇಕಾದರೆ ಇಷ್ಟು ಅಂಕ ತೆಗೆಯಲೇ ಬೇಕು ! 5 ರಿಂದ 8ನೇ ತರಗತಿವರೆಗೂ ಇದು ಅನ್ವಯ

ಇನ್ನು ಮುಂದೆ 5 ಮತ್ತು 8ನೇ ತರಗತಿಯಲ್ಲಿ  ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಅನುಕಂಪದ ಆಧಾರದಲ್ಲಿ ಪಾಸ್ ಮಾಡುವುದಿಲ್ಲ. 5 ಮತ್ತು 8ನೇ ತರಗತಿಯಲಿ  ಫೈಲ್ ಆದರೆ ಅಂಥಹ ವಿದ್ಯಾರ್ಥಿಗಳಿಗೆ 2 ತಿಂಗಳು ಆವಕಾಶ ನೀಡಲಾಗುತ್ತದೆ.  

Written by - Ranjitha R K | Last Updated : Dec 24, 2024, 11:13 AM IST
  • ನೋ ಡಿಟೆನ್ಶನ್ ಪಾಲಿಸಿಯನ್ನು ಕೇಂದ್ರ ಸರ್ಕಾರ ರದ್ದು
  • ಅನುತ್ತೀರ್ಣರಾದರೆ ಅನುಕಂಪದ ಆಧಾರದಲ್ಲಿ ಪಾಸ್ ಮಾಡುವುದಿಲ್ಲ
  • ಪಾಸ್ ಆದರೆ ಮಾತ್ರ ಮುಂದಿನ ತರಗತಿಗೆ ಹೋಗಲು ಅವಕಾಶ
ಪೋಷಕರೇ ಗಮನಿಸಿ ! ಶೈಕ್ಷಣಿಕ ವ್ಯವಸ್ಥೆಯಲ್ಲಿ ಮೇಜರ್ ಸರ್ಜರಿ : ಮುಂದಿನ ತರಗತಿಗೆ ಹೋಗಬೇಕಾದರೆ ಇಷ್ಟು ಅಂಕ ತೆಗೆಯಲೇ ಬೇಕು ! 5 ರಿಂದ 8ನೇ ತರಗತಿವರೆಗೂ ಇದು ಅನ್ವಯ  title=

ಬೆಂಗಳೂರು : ನೋ ಡಿಟೆನ್ಶನ್ ಪಾಲಿಸಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಅಂದರೆ ಇನ್ನು ಮುಂದೆ 5 ಮತ್ತು 8ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಅನುಕಂಪದ ಆಧಾರದಲ್ಲಿ ಪಾಸ್ ಮಾಡುವುದಿಲ್ಲ. 5 ಮತ್ತು 8ನೇ ತರಗತಿಯಲಿ  ಫೈಲ್ ಆದರೆ ಅಂಥಹ ವಿದ್ಯಾರ್ಥಿಗಳಿಗೆ 2 ತಿಂಗಳು ಆವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಮತ್ತೆ ಪುನರ್ ಪರೀಕ್ಷೆ ಬರೆದು ಪಾಸ್ ಆಗಬೇಕು. ಇಲ್ಲಿ ಪಾಸ್ ಆದರೆ ಮಾತ್ರ  ಮುಂದಿನ ತರಗತಿಗೆ ಹೋಗಲು ಅವಕಾಶ ಕಲ್ಪಿಸಲಾಗುವುದು. ಒಂದು ವೇಳೆ ಮರು ಪರೀಕ್ಷೆಯಲ್ಲಿಯೂ ಅನುತ್ತೀರ್ಣರಾದರೆ ಮತ್ತೆ ಅದೇ ತರಗತಿಯಲ್ಲಿ ಓದಬೇಕು. ಆದರೆ, ಮಗುವಿನ ಹೆಸರನ್ನು ಶಾಲೆಯಿಂದ ತೆಗೆಯುವಂತಿಲ್ಲ.

ಈ ಸಂಬಂಧ ಕೇಂದ್ರ ಶಿಕ್ಷಣ ಸಚಿವಾಲಯ ಮಹತ್ವದ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಸೆಂಟ್ರಲ್ ಗವರ್ನಮೆಂಟ್ ಅಧೀನದಲ್ಲಿ ಬರುವ ಶಾಲೆಗಳಲ್ಲಿ ಈ  ನಿಯಮ ಕಡ್ಡಾಯಗೊಳಿಸಲಾಗಿದೆ. ನವೋದಯ ಶಾಲೆ, ಸೈನಿಕ ಶಾಲೆಗಳಲ್ಲಿ ಈ ನಿಮಯ ಕಡ್ಡಾಯವಾಗಿ ಜಾರಿ ಬರಲಿದೆ. ಆದರೆ ರಾಜ್ಯದ ಅನುದಾನಿತ ಶಾಲೆಗಳಲ್ಲಿ ಈ ರೂಲ್ಸ್ ಜಾರಿ ಮಾಡುವ ಹಕ್ಕು ಆಯಾ ರಾಜ್ಯ ಸರ್ಕಾರ ನಿರ್ಧಾರಕ್ಕೆ ಬಿಟ್ಟದ್ದು. ಶಾಲಾ ಶಿಕ್ಷಣವು ರಾಜ್ಯದ ವಿಷಯವಾಗಿರುವುದರಿಂದ, ರಾಜ್ಯಗಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರವಾಗಿವೆ. ಈಗಾಗಲೇ, 16 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು 5 ಮತ್ತು 8 ನೇ ತರಗತಿಗಳಿಗೆ  ಈ ನೀತಿಯನ್ನು  ಕೈ ಬಿಟ್ಟಿವೆ. 

ಇದನ್ನೂ ಓದಿ : ನ್ಯೂ ಇಂಡಿಯ ಅಶುರನ್ಸ್ ಕಂಪನಿ ಲಿಮಿಟೆಡ್ ನಲ್ಲಿರುವ 500 ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ನೋ-ಡೆಟೆನ್ಷನ್ ನೀತಿ ಎಂದರೇನು? :
ಶಿಕ್ಷಣ ಹಕ್ಕು ಕಾಯಿದೆಯಡಿ ನೋ-ಡೆಟೆನ್ಷನ್ ನೀತಿಯ ಪ್ರಕಾರ, 1 ರಿಂದ 8 ನೇ ತರಗತಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ಯಾವುದೇ ವಿದ್ಯಾರ್ಥಿಯನ್ನು ಪರೀಕ್ಷೆಯಲ್ಲಿ ಫೇಲ್ ಮಾಡುವ ಹಾಗೆ ಇರಲಿಲ್ಲ. ಆದರೆ ಕೇಂದ್ರ ಸರ್ಕಾರ ಈಗ ಈ ನೀತಿಯನ್ನು ರದ್ದು ಮಾಡಿದೆ. 

ಡಿಸೆಂಬರ್ 2010 ರಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದ ನಂತರ ಜಾರಿಗೆ ತರಲಾಯಿತು. ಈ ನೀತಿಯನ್ನು ಜಾರಿಗೆ ತಂದಾಗ, ಅದರ ಬಗ್ಗೆ ಅನೇಕ ಪ್ರಶ್ನೆಗಳನ್ನು ಎತ್ತಲಾಯಿತು. ಏಕೆಂದರೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರವೂ ಮುಂದಿನ ತರಗತಿಗೆ ಬಡ್ತಿ ಪಡೆಯುವ ಪದ್ದತಿ ನಿಜಕ್ಕೂ ವಿಚಿತ್ರವಾಗಿತ್ತು. 

ತಮಿಳುನಾಡಿನಲ್ಲಿ 'ನೋ ಫೇಲ್ಯೂರ್ ನೀತಿ'​ ಮುಂದುವರಿಕೆ  : 
ಪರೀಕ್ಷೆಯಲ್ಲಿ ಅನುತ್ತೀರ್ಣರಾದ 5-8 ನೇ ತರಗತಿಯ ವಿದ್ಯಾರ್ಥಿಗಳಿಗೆ 'ನೋ ಫೇಲ್ಯೂರ್ ನೀತಿ'ಯನ್ನು ತಮಿಳುನಾಡು ಮುಂದುವರಿಸಲಿದೆ. ಕಳೆದ ವರ್ಷವೇ ಈ ನೀತಿಯನ್ನು ದೆಹಲಿ ಸರ್ಕಾರ ಕೊನೆಗೊಳಿಸಿತ್ತು. ಅಂಕಿಅಂಶಗಳ ಪ್ರಕಾರ, 9 ನೇ ತರಗತಿಯಲ್ಲಿ ಓದುತ್ತಿರುವ 1 ಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು 11 ನೇ ತರಗತಿಯಲ್ಲಿ ಓದುತ್ತಿರುವ 50 ಸಾವಿರಕ್ಕೂ ಹೆಚ್ಚು ಮಕ್ಕಳು ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಈ ಎಲ್ಲಾ ಮಕ್ಕಳು ಈ ನೀತಿಯ ಲಾಭ ಪಡೆದು ಮುಂದಿನ ತರಗತಿಗೆ ಬಡ್ತಿ ಪಡೆದವರೇ ಆಗಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಒಟ್ಟು 16 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ 5 ಮತ್ತು 8 ನೇ ತರಗತಿಗಳಿಗೆ 'ನೋ-ಡೆಟೆನ್ಷನ್ ನೀತಿ'ಯಿಂದ ಹೊರಬಂದಿವೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News