Allu arjun house : ಪುಷ್ಪ 2 ಚಿತ್ರದ ಪ್ರಿಮಿಯರ್ ವೇಳೆ ಸಂಧ್ಯಾ ಥಿಯೇಟರ್ನಲ್ಲಿ ನಡೆದ ನೂಕುನುಗ್ಗಲು ಉಂಟಾಗಿ ಒರ್ವ ಮಹಿಳೆ ಸಾವನ್ನಪ್ಪಿ ಆಕೆಯ ಮಗ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ನಟನ ಬಂಧನವೂ ಆಗಿತ್ತು. ಇದೀಗ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.
ಈ ಘಟನೆಯನ್ನು ತೆಲಂಗಾಣ ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತಿದ್ದರೆ, ಅಲ್ಲು ಅರ್ಜುನ್ ಗೆ ಬಿಜೆಪಿ ಮತ್ತು ಬಿಆರ್ ಎಸ್ ಬೆಂಬಲ ನೀಡುತ್ತಿರುವುದು ಗೊತ್ತೇ ಇದೆ. ವಿಧಾನಸಭೆ ವೇದಿಕೆಯಲ್ಲೇ ಅಲ್ಲು ಅರ್ಜುನ್ ವಿರುದ್ಧ ಸಿಎಂ ರೇವಂತ್ ರೆಡ್ಡಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಖುಷಿಯಾಗಿರೋ ದೊಡ್ಮನೆಗೆ ಮತ್ತೆ ಎಂಟ್ರಿ ಕೊಡ್ತಾರಾ ಗೋಲ್ಡ್ ಸುರೇಶ್..? ಎಲ್ಲರೂ ಶಾಕ್!!
ಇನ್ನೊಂದೆಡೆ ಅಲ್ಲು ಅರ್ಜುನ್ ಕೂಡ ರಾತ್ರಿ ಪ್ರೆಸ್ ಮೀಟ್ ನಡೆಸಿ ತಮ್ಮದೇ ಶೈಲಿಯಲ್ಲಿ ವಿವರಣೆ ನೀಡಿದ್ದಾರೆ. ತೆಲಂಗಾಣ ಡಿಜಿಪಿ ಕೂಡ ಅಲ್ಲು ಅರ್ಜುನ್ ಮೇಲೆ ನಮಗೆ ಯಾವುದೇ ಕೋಪವಿಲ್ಲ, ಅವರನ್ನು ಜನಸಾಮಾನ್ಯರಂತೆ ನಡೆಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಅದಲ್ಲದೆ ಸೆಲೆಬ್ರಿಟಿಗಳಿಗೆ ಒಂದು ಕಾನೂನು, ಸಾಮಾನ್ಯರಿಗೆ ಇನ್ನೊಂದು ಕಾನೂನಿಲ್ಲ. ಮತ್ತೊಂದೆಡೆ ಕಾಂಗ್ರೆಸ್ ಸಚಿವರು, ಮುಖಂಡರು ಕೂಡ ಅಲ್ಲು ಅರ್ಜುನ್ ಸಿಎಂ ರೇವಂತ್ ರೆಡ್ಡಿಗೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ವಿಧಾನಸಭೆಯಲ್ಲಿ ಸಿಎಂ ರೇವಂತ್ ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ಕೋಮಟಿ ರೆಡ್ಡಿ ಹೇಳಿದ್ದಾರೆ. ಇದರ ನಡುವೆ ಅಲ್ಲು ಅರ್ಜುನ್ ವರ್ತನೆಗೆ ಒಯು ಜಿಎಸಿ ಸಂಘಟನೆ ಕೂಡ ಕೋಪಗೊಂಡಿದೆ ಎಂದು ಗೊತ್ತಾಗಿದೆ. ಈ ಘಟನೆಯಲ್ಲಿ ಸಾವಿಗೀಡಾದ ರೇವತಿ ಕುಟುಂಬಕ್ಕೆ ನಟ ಸರಿಯಾಗಿ ಸ್ಪಂದಿಸದೇ ಕೆಲಸದಿಂದ ವಜಾ ಮಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಇವರೇ ನೋಡಿ ಭಾರತದ 10 ಸುಂದರ IAS-IPS ಮಹಿಳಾ ಅಧಿಕಾರಿಗಳು..! ಇವ್ರು ಸ್ಟಾರ್ ನಟಿಯರಿಗಿಂತಲೂ ಕ್ಯೂಟ್..
ಈ ಕ್ರಮದಲ್ಲಿ ಅಲ್ಲು ಅರ್ಜುನ್ ಮನೆಗೆ ಒಯು ಜೆಎಸಿ ಮುತ್ತಿಗೆ ಹಾಕಲು ಯತ್ನಿಸಿದೆ.. ಕೆಲ ಒಯು ಜಾಕ್ ಮುಖಂಡರು ನಟನ ಮನೆಗೆ ತೆರಳಿ ಪ್ರತಿಭಟನೆ ನಡೆಸಿದರು. ಅಲ್ಲಿದ್ದ ಹೂವಿನ ಕುಂಡಗಳನ್ನು ನಾಶ ಪಡಿಸಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ವಿಡಿಯೋ ವೈರಲ್ ಆಗಿದೆ..
Tomatoes Pelted at Allu Arjun’s Residence; Flower Pots Damaged
A group of miscreants, claiming to be associated with the OU JAC, attacked Allu Arjun’s residence, hurling tomatoes. Flower pots inside the premises were damaged during the incident, creating chaos.
The group raised… pic.twitter.com/8QUoqdn33E
— Sudhakar Udumula (@sudhakarudumula) December 22, 2024
ಅಂತೆಯೇ.. ಘೋಷಣೆಗಳನ್ನು ಕೂಗುತ್ತಲೇ ಅವರ ಮನೆಯ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ವೇಳೆ ಅಲ್ಲು ಅರ್ಜುನ್ ಕುಟುಂಬಸ್ಥರು ಹೊರಗೆ ಕಾಣಿಸಲಿಲ್ಲ ಎಂದು ಗೊತ್ತಾಗಿದೆ. ಮತ್ತೊಂದೆಡೆ ಕೆಲವರು ಗೋಡೆ ಹಾರಿ ಒಳ ಪ್ರವೇಶಿಸಲು ಯತ್ನಿಸಿದರು. ಇದರಿಂದ ಅಲ್ಲಿನ ಭದ್ರತಾ ಸಿಬ್ಬಂದಿ ಪ್ರತಿಭಟನಾ ಕಾರರು ಒಳಹೋಗದಂತೆ ತಡೆದರು. ಈ ಘಟನೆಯಿಂದ ಅಲ್ಲು ಅರ್ಜುನ್ ಮನೆ ಬಳಿ ಹೈ ಟೆನ್ಶನ್ ನಿರ್ಮಾಣವಾಗಿದೆ ಎನ್ನಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.