ಕಿರುತೆರೆ ನಟಿ ನಿಧನ: ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಫ್ಯಾಟ್‌ನಲ್ಲಿ ಪತ್ತೆ

ಅಸ್ವಾಭಾವಿಕ ಸಾವು ಎಂದು ಪರಿಗಣಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ಪಲ್ಲವಿ ಕುಟುಂಬಸ್ಥರು " ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ. ಈ ಸಾವಿನ ಹಿಂದೆ ಹುನ್ನಾರ ಇದೆ. ಸೂಕ್ತ ತನಿಖೆ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ. 

Written by - Bhavishya Shetty | Last Updated : May 16, 2022, 11:03 AM IST
  • ಬಂಗಾಳಿ ಕಿರುತೆರೆ ನಟಿ ಆತ್ಮಹತ್ಯೆ
  • ನಟಿ ಪಲ್ಲವಿ ಡೇ ಮೃತದೇಹ ಫ್ಲ್ಯಾಟ್‌ನಲ್ಲಿ ಪತ್ತೆ
  • ಬಂಗಾಳ ಪೊಲೀಸರಿಂದ ಪರಿಶೀಲನೆ
ಕಿರುತೆರೆ ನಟಿ ನಿಧನ: ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಫ್ಯಾಟ್‌ನಲ್ಲಿ ಪತ್ತೆ title=
Pallavi Dey

ಬಂಗಾಳಿ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಟಿ ಪಲ್ಲವಿ ದೇ ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಫ್ಲ್ಯಾಟ್‌ವೊಂದರಲ್ಲಿ ವಾಸವಾಗಿದ್ದ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. 

ಇದನ್ನು ಓದಿ: Shocking News: ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಮಗು ಸ್ಮಶಾನದಲ್ಲಿ ಜೀವಂತ!

ಅಸ್ವಾಭಾವಿಕ ಸಾವು ಎಂದು ಪರಿಗಣಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ಪಲ್ಲವಿ ಡೇ ಕುಟುಂಬಸ್ಥರು " ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ. ಈ ಸಾವಿನ ಹಿಂದೆ ಹುನ್ನಾರ ಇದೆ. ಸೂಕ್ತ ತನಿಖೆ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ. 

ಪಲ್ಲವಿ ಅವರು ತನ್ನ ಗೆಳೆಯ ಸಾಗ್ನಿಕ್‌ ಚಕ್ರವರ್ತಿ ಜೊತೆ ಕೊಲ್ಕತ್ತಾದ ಗರ್ಫಾದಲ್ಲಿರುವ ಫ್ಲ್ಯಾಟ್‌ನಲ್ಲಿ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದರು.  ಸದ್ಯ ಸಾಗ್ನಿಕ್ ಚಕ್ರವರ್ತಿಯನ್ನು ಪೊಲೀಸರು ತನಿಖೆ ನಡೆಸುವ ಸಾಧ್ಯತೆಯಿದೆ. 

ಘಟನಾ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು, "ಪಲ್ಲವಿಯವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾದರೂ ಅವರು ಬದುಕುಳಿಯಲಿಲ್ಲ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ಹೇಳಿದ್ದಾರೆ.  

ಇದನ್ನು ಓದಿ: ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ ಈ 4 ವಸ್ತುಗಳು, ನಿಮ್ಮ ಡಯಟ್ ನಲ್ಲಿರಲಿ ಇವುಗಳಿಗೆ ಜಾಗ

ರೇಷಮ್‌ ಝಾನ್ಪಿ, ಅಮಿ ಸಿರ್ಜೇರ ಬೇಗಮ್‌ ಹೀಗೆ ಹಲವಾರು ಪ್ರಸಿದ್ಧ ಧಾರಾವಾಹಿಗಳಲ್ಲಿ ಪಲ್ಲವಿ ಅಭಿನಯಿಸಿ ಜನಪ್ರಿಯತೆ ಗಳಿಸಿದ್ದರು. ಇತ್ತೀಚಿನ ದಿನಗಳಲ್ಲಿ ಪಲ್ಲವಿ 'ಮೊನ್ ಮನೆ ನಾ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದರು. ಇದರಲ್ಲಿ ಪಲ್ಲವಿಗೆ ಸ್ಯಾಮ್ ಭಟ್ಟಾಚಾರ್ಯ ಜೋಡಿಯಾಗಿ ಕಾಣಿಸಿಕೊಂಡಿದ್ದರು. 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News