Snake Venom K72-K76 Price: ರೇವ್ ಪಾರ್ಟಿಗಳಲ್ಲಿ ಸಿಗುವ ಹಾವಿನ ವಿಷದ ಬೆಲೆ ಎಷ್ಟು? ಪೊಲೀಸರಿಂದ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ!

Price Of Snake Venom K72 K76 Intoxication In Rave Parties:  ಯಾವ ಹಾವಿನ ವಿಷದಿಂದ ಮನುಷ್ಯನ ಪ್ರಾಣ ಹೋಗುತ್ತದೆಯೋ, ಅದೇ ಹಾವಿನ ವಿಷವನ್ನು ಹಲವು ಜನರು ರೇವ್ ಪಾರ್ಟಿಗಳಲ್ಲಿ ಮತ್ತು ಬಾರಿಸಿಕೊಳ್ಳಲು ಬಳಸುತ್ತಾರೆ ಎಂಬ ಸಂಗತಿ ಕೇಳಿ ನೀವೂ ಬೆಚ್ಚಿಬೀಳಬಹುದು. ಅಷ್ಟೇ ಅಲ್ಲ ಅದಕ್ಕಾಗಿ ಭಾರಿ ಬೆಲೆ ಕೂಡ ನೀಡುತ್ತಾರೆ. ಇಲ್ಲಿದೆ ಈ ಕುರಿತಾದ ಒಂದು ವರದಿ. (Crime News In Kananda)  

Written by - Nitin Tabib | Last Updated : Mar 20, 2024, 04:10 PM IST
  • ಯಾವುದೇ ವ್ಯಕ್ತಿಯು ನಶೆ ಅಥವಾ ಅಮಲು ಏರಿಸಿಕೊಳ್ಳಲು ಬಯಸಿದಾಗ, ಆತ ಮೊದಲು ಸಿಗರೇಟ್ ಮತ್ತು ಬಿಯರ್‌ನಂತಹ ಲಘು ಚಟಗಳಿಗೆ ಆದ್ಯತೆ ನೀಡುತ್ತಾನೆ,
  • ನಂತರ ಆತ ಅವುಗಳಿಗಿಂತಲೂ ಸ್ಟ್ರಾಂಗ್ ಚಟ ಮಾಡುತ್ತಾನೆ, ನಂತರ ಹಶಿಶ್, ಗಾಂಜಾ ಮತ್ತು ಕೊಕೇನ್ ನಂತಹ ಪದಾರ್ಥಗಳ ಬಳಕೆ ಆರಂಭಿಸುತ್ತಾನೆ.
  • ಬಳಿಕ ಈ ಡ್ರಗ್ಸ್ ಗಳನ್ನು ಹೆಚ್ಚು ಆನಂದಿಸದ ಸಮಯವೊಂದು ಬರುತ್ತದೆ ಮತ್ತು ನಂತರ ಅವನು ಹೆಚ್ಚು ಕಿಕ್ ಪಡೆಯಲು ಹಾವಿನ ಡ್ರಗ್ಸ್ ತೆಗೆದುಕೊಳ್ಳಲು ಪ್ರಾರಂಭಿಸುತ್ತಾನೆ.
Snake Venom K72-K76 Price: ರೇವ್ ಪಾರ್ಟಿಗಳಲ್ಲಿ ಸಿಗುವ ಹಾವಿನ ವಿಷದ ಬೆಲೆ ಎಷ್ಟು? ಪೊಲೀಸರಿಂದ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ! title=

Snake Venom In Rave Parties: ಇತ್ತೀಚೆಗಷ್ಟೇ ರೇವ್ ಪಾರ್ಟಿಗಳಲ್ಲಿ ಹಾವಿನ ವಿಷವನ್ನು ಪೂರೈಸಿದ ಪ್ರಕರಣದಲ್ಲಿ ಖ್ಯಾತ ಯೂಟ್ಯೂಬರ್ ಎಲ್ವಿಶ್ ಯಾದವ್ (Elvish Yadav Cobra Krait) ಹೆಸರು ಬಹಿರಂಗಗೊಂಡಿದೆ. ಈ ಕುರಿತು ಇದೀಗ ದೆಹಲಿಯ ಆಂಟಿ ನಾರ್ಕೋಟಿಕ್ಸ್ ಯೂನಿಟ್ (Delhi Anti-Narcotics Unit) ಸಾಕಷ್ಟು ಸಕ್ರಿಯವಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಪೊಲೀಸರು ಈ ಡ್ರಗ್ ವ್ಯವಹಾರ ಸಂಘಟಿತ ಡ್ರಗ್ ಕಾರ್ಟೆಲ್ (Syndicate Drug Kartail) ಅನಿಸುವುದಿಲ್ಲ ಎಂದಿದ್ದಾರೆ, ಏಕೆಂದರೆ ಇದರ ಗ್ರಾಹಕರ ಸಂಖ್ಯೆ ಸೀಮಿತವಾಗಿದೆ ಮತ್ತು ಬೆಲೆ ತುಂಬಾ ಹೆಚ್ಚಾಗಿದೆ ಎಂದು ಪೊಲೀಸರು ಹೇಳಿದ್ದಾರೆ.(Crime News In Kannada)

ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ (Use Of Snake Venom In Rave Parties)
ಯಾವುದೇ ವ್ಯಕ್ತಿಯು ನಶೆ ಅಥವಾ ಅಮಲು ಏರಿಸಿಕೊಳ್ಳಲು ಬಯಸಿದಾಗ, ಆತ ಮೊದಲು ಸಿಗರೇಟ್ ಮತ್ತು ಬಿಯರ್‌ನಂತಹ ಲಘು ಚಟಗಳಿಗೆ ಆದ್ಯತೆ ನೀಡುತ್ತಾನೆ, ನಂತರ ಆತ ಅವುಗಳಿಗಿಂತಲೂ ಸ್ಟ್ರಾಂಗ್ ಚಟ ಮಾಡುತ್ತಾನೆ, ನಂತರ ಹಶಿಶ್, ಗಾಂಜಾ ಮತ್ತು ಕೊಕೇನ್ ನಂತಹ ಪದಾರ್ಥಗಳ ಬಳಕೆ ಆರಂಭಿಸುತ್ತಾನೆ. ಬಳಿಕ ಈ ಡ್ರಗ್ಸ್ ಗಳನ್ನು ಹೆಚ್ಚು ಆನಂದಿಸದ ಸಮಯವೊಂದು ಬರುತ್ತದೆ ಮತ್ತು ನಂತರ ಅವನು ಹೆಚ್ಚು ಕಿಕ್ ಪಡೆಯಲು ಹಾವಿನ ಡ್ರಗ್ಸ್ ತೆಗೆದುಕೊಳ್ಳಲು ಪ್ರಾರಂಭಿಸುತ್ತಾನೆ.

ಹಾವಿನ ವಿಷ ಹೇಗೆ ಬಳಸುತ್ತಾರೆ? (How Snake Venome Is Used)
ಹಾವುಗಳ ವಿಷವನ್ನು 'ಕೆ 72' ಅಥವಾ 'ಕೆ 76' (Snake Venom K72 And K76) ಎಂದು ಕರೆಯಲಾಗುತ್ತದೆ, ಇದನ್ನು ಕೆಲವು ರಾಸಾಯನಿಕ ಪದಾರ್ಥಗಳನ್ನು ಬಳಸಿ ದುರ್ಬಲಗೊಳಿಸಲಾಗುತ್ತದೆ. ಇದನ್ನು ಪುಡಿ ಅಥವಾ ದ್ರವ ರೂಪದಲ್ಲಿ ತೆಗೆದುಕೊಳ್ಳಲಾಗುತ್ತದೆ. ಕೆಲವರು ಈ ವಿಷವನ್ನು ನೇರವಾಗಿ ನಾಲಿಗೆಗೆ ತೆಗೆದುಕೊಳ್ಳುತ್ತಾರೆ. ಇದು ವಿಪರೀತ ನಶೆಯುಂಟು ಮಾಡುತ್ತದೆ.  ಇದೆ ಕಾರಣದಿಂದ ರೇವ್ ಪಾರ್ಟಿಗಳಲ್ಲಿ ಹಾವು ಮೋಡಿ ಮಾಡುವವರನ್ನು ವಿಶೇಷವಾಗಿ ಕರೆಯಿಸಲಾಗುತ್ತದೆ.

ಇದನ್ನೂ ಓದಿ-ಮದುವೆಗೆ ಪೋಷಕರು ವಿರೋಧ: ವಿಷ ಸೇವಿಸಿದ ಪ್ರೇಮಿಗಳು
 
'ಕೆ ಡ್ರಗ್' ಸುಮಾರು ಒಂದು ದಶಕದಿಂದ ಮಾರುಕಟ್ಟೆಯಲ್ಲಿದೆ ಮತ್ತು ವಿಶೇಷವಾಗಿ ಪ್ರೇಮಿಗಳ ದಿನದಂದು ಇದರ ಬೇಡಿಕೆ ನಿರಂತರವಾಗಿ ಹೆಚ್ಚಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ, ಇದು ಆಲ್ಕೋಹಾಲ್ನೊಂದಿಗೆ ಬೆರೆಸುವ ಪುಡಿಯಾಗಿ ಆರಂಭಗೊಂಡರು,  ಕ್ರಮೇಣ ಅದನ್ನು ನೇರವಾಗಿ ಹಾವುಗಳ ಮುಖಾತರ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ ಯತ್ನ, ಯುವಕ ಸಾವು

ಹಾವಿನ ವಿಷದ ಬೆಲೆ ಎಷ್ಟು? (Price Of Snake Venom K72 K76 Intoxication In Rave Parties)
ಸಿಂಥೆಟಿಕ್ ಡ್ರಗ್ ಮತ್ತು ರಾಸಾಯನಿಕಗಳಂತೆ ವಿದ್ಯಾರ್ಥಿಗಳು ಹಾವಿನ ವಿಷದ ಪ್ರಾಥಮಿಕ ಗ್ರಾಹಕರಲ್ಲ ಎಂದು ಪೊಲೀಸ್ ಅಧಿಕಾರಿ ಹೇಳುತ್ತಾರೆ. ಇದಕ್ಕಾಗಿ, ಕೆಲಸ ಮಾಡುವ ವೃತ್ತಿಪರರು ಮತ್ತು ಉದ್ಯಮಿಗಳನ್ನು ಸಂಪರ್ಕಿಸಲಾಗುತ್ತದೆ, ಅವರು ಡ್ರಗ್ಸ್‌ನ ಈ ಕೇಸರಿನಲ್ಲಿ ಹೆಚ್ಚು ಮುಳುಗಿರುತ್ತಾರೆ. ಹಾವಿನ ವಿಷಕ್ಕೆ ನಿಗದಿತ ಬೆಲೆ ಇಲ್ಲ. ಒಂದು ನಾರ್ಮಲ್ ಸ್ನೇಕ್ ಶಾಟ್ ಗೆ ನೀವು ಸಾಮಾನ್ಯವಾಗಿ 15,000 ರೂಪಾಯಿಗಳನ್ನು ಪಾವತಿಸಬೇಕು, ಆದರೆ ನೀವು ನಾಗರಹಾವು ಮತ್ತು ಕ್ರೈಟ್ ಹಾವುಗಳ ವಿಷದಿಂದ ಅಮಲೇರಿಸಿಕೊಳ್ಳಲು ಬಯಸುತ್ತಿದ್ದರೆ,  ನೀವು ಒಂದು ಶಾಟ್ ಗೆ 35,000 ರಿಂದ 50,000 ರೂ. ಪಾವತಿಸಬೇಕಾಗಬಹುದು. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News