ಬೆಂಗಳೂರು: ಮನೆ ಬಾಡಿಗೆಗಿದ್ದ ಯುವತಿಯನ್ನ ಹೆದರಿಸಿ ತಲೆಗೆ ಪಿಸ್ತೂಲ್ ಇಟ್ಟು ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಮನೆ ಮಾಲೀಕನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಶಾಂತಿನಗರ ನಿವಾಸಿ ಅನಿಲ್ ರವಿಶಂಕರ್ ಪ್ರಸಾದ್ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನುಪೊಲೀಸರು ಮೂರು ದಿನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಇದನ್ನು ಓದಿ: Photos: ವಯಸ್ಸು 30 ದಾಟಿದರೂ ಮದುವೆಯಾಗಿದಿರುವ ಸ್ಟಾರ್ ನಟಿಮಣಿಗಳು!
ಆರೋಪಿಯು ಟೈಲ್ಸ್ ಬಿಸೆನೆಸ್ ಮಾಡಿಕೊಂಡಿದ್ದು ಶಾಂತಿನಗರದ ನಿವಾಸಿಯಾಗಿದ್ದಾನೆ. ಈತನಿಗೆ ಸೇರಿದ ಮನೆಯಲ್ಲಿ ಪಶ್ಚಿಮ ಬಂಗಾಳದ ಮೂಲದ ಯುವತಿ ಕಳೆದ ಮಾರ್ಚ್ನಿಂದ ವಾಸವಿದ್ದಳು. ಖಾಸಗಿ ಕಾಲೇಜಿನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿದ್ದಳು. ಈ ಮಧ್ಯೆ ಮನೆಗೆ ಸ್ನೇಹಿತರು ಬರುತ್ತಿರುವ ಬಗ್ಗೆ ಮನೆ ಮಾಲೀಕ ಯುವತಿ ಬಳಿ ತಗಾದೆ ತೆಗೆದಿದ್ದ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಮಾತಿನ ಸಂಘರ್ಷ ನಡೆದಿತ್ತು. ಕೆಲ ದಿನಗಳ ಬಳಿಕ ಮನೆಯಲ್ಲಿ ಯುವತಿಯ ಸ್ನೇಹಿತ ತಂಗಿದ್ದ. ಇದನ್ನು ಗಮನಿಸಿದ ಮಾಲೀಕ ಮನೆಯಾಚೆ ನಿಲ್ಲಿಸಿದ್ದ ಸ್ನೇಹಿತನ ಬೈಕ್ಗೆ ಲಾಕ್ ಮಾಡಿ ಮಾರನೇ ದಿನ ಬೆಳಗ್ಗೆ ಪೊಲೀಸರು ಬಂದು ಲಾಕ್ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಹೇಳಿದ್ದ. ಬಾಡಿಗೆ ಕೊಟ್ಟರೆ ಇಲ್ಲಸಲ್ಲದ ಚಟುವಟಿಕೆ ನಡೆಸುತ್ತೀರಾ ಎಂದು ಬೊಬ್ಬೆ ಹೊಡೆದಿದ್ದ. ಪೊಲೀಸರು ಬಂದರೆ ನಿಮ್ಮ ಮೇಲೆ ಕೇಸ್ ದಾಖಲಿಸುತ್ತಾರೆ ಎಂದು ಹೆದರಿಸಿದ್ದ. ನಂತರ ತಾನು ಪೊಲೀಸರೊಂದಿಗೆ ಕೇಸ್ ದಾಖಲಿಸದಂತೆ ಮಾತನಾಡಿರುವುದಾಗಿ ಹೇಳಿ ಅಲ್ಲಿಂದ ಹುಡುಗನನ್ನು ಕಳುಹಿಸಿದ್ದ.
ಇದನ್ನು ಓದಿ: ನಿತ್ಯ ಮುಂಜಾನೆ ಕರಿಬೇವಿನ ಎಲೆ ತಿನ್ನುವುದರಿಂದ ಈ ರೋಗಗಳು ನಿಮ್ಮ ಹತ್ತಿರವೂ ಸುಳಿಯಲ್ಲ
ಘಟನೆ ಬಗ್ಗೆ ಪೋಷಕರಿಗೆ ತಿಳಿಸುವುದಾಗಿ ಯುವತಿಗೆ ಬೆದರಿಸಿದ್ದ. ಕಳೆದ ಏಪ್ರಿಲ್ 11 ರಂದು ಮನೆಗೆ ತೆರಳಿದ ಮಾಲೀಕ ಮಾತನಾಡುವ ನೆಪದಲ್ಲಿ ತನ್ನ ಬಳಿಯಿದ್ದ ಲೈಸೆನ್ಸ್ ರಿವಾಲ್ವರ್ ತಲೆಗೆ ಇಟ್ಟು ತನ್ನೊಂದಿಗೆ ಸಹಕರಿಸುವಂತೆ ಒತ್ತಡ ಹೇರಿದ್ದ. ಬಳಿಕ ನಡೆದಿದ್ದ ಕೃತ್ಯದ ಬಗ್ಗೆ ಇತ್ತೀಚೆಗೆ ಪೋಷಕರ ಬಳಿ ಯುವತಿ ಹೇಳಿಕೊಂಡಿದ್ದಳು. ಸದ್ಯ ಯುವತಿ ನೀಡಿದ ದೂರಿನ ಮೇರೆಗೆ ನಿನ್ನೆ ಮನೆ ಮಾಲೀಕನನ್ನು ಬಂಧಿಸಿರುವ ಅಶೋಕನಗರ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.