ಬೆಂಗಳೂರಿನಲ್ಲಿ ಐಎಎಫ್ ಕೆಡೆಟ್ ಮೃತದೇಹ ಪತ್ತೆ: 6 ಅಧಿಕಾರಿಗಳ ಮೇಲೆ ಕೊಲೆ ಕೇಸ್ ದಾಖಲು

ಮೃತ ಯುವಕನನ್ನು 27 ವರ್ಷದ ಅಂಕಿತ್ ಕುಮಾರ್ ಝಾ ಎಂದು ಗುರುತಿಸಲಾಗಿದ್ದು, ಜಾಲಹಳ್ಳಿ ಕ್ಯಾಂಪಸ್‌ನಲ್ಲಿರುವ ಎಎಫ್‌ಟಿಸಿಯಲ್ಲಿ ಒಂದೂವರೆ ವರ್ಷಗಳಿಂದ ತರಬೇತಿ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Written by - Bhavishya Shetty | Last Updated : Sep 25, 2022, 07:58 PM IST
    • ಟ್ರೈನಿ ಕೆಡೆಟ್ ಅನುಮಾನಾಸ್ಪದ ಸಾವಿನ ಪ್ರಕರಣ

    • ಭಾರತೀಯ ವಾಯುಪಡೆಯ ಆರು ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲು

    • ಯುವಕನ ಕುಟುಂಬದಿಂದ ಮಗನನ್ನು ಕೊಂದಿದ್ದಾರೆ ಎಂದು ಆರೋಪ

ಬೆಂಗಳೂರಿನಲ್ಲಿ ಐಎಎಫ್ ಕೆಡೆಟ್ ಮೃತದೇಹ ಪತ್ತೆ: 6 ಅಧಿಕಾರಿಗಳ ಮೇಲೆ ಕೊಲೆ ಕೇಸ್ ದಾಖಲು title=
IAF Cadet

ಬೆಂಗಳೂರಿನ ಏರ್ ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ (ಎಎಫ್‌ಟಿಸಿ) ಟ್ರೈನಿ ಕೆಡೆಟ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಯ ಆರು ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಹನ್ನೊಂದು ತಿಂಗಳ ಮಗು ತೊಟ್ಟಿಯಲ್ಲಿ ಬಿದ್ದು ಸಾವು

ಮೃತ ಯುವಕನನ್ನು 27 ವರ್ಷದ ಅಂಕಿತ್ ಕುಮಾರ್ ಝಾ ಎಂದು ಗುರುತಿಸಲಾಗಿದ್ದು, ಜಾಲಹಳ್ಳಿ ಕ್ಯಾಂಪಸ್‌ನಲ್ಲಿರುವ ಎಎಫ್‌ಟಿಸಿಯಲ್ಲಿ ಒಂದೂವರೆ ವರ್ಷಗಳಿಂದ ತರಬೇತಿ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯದ ವಿಚಾರಣೆ ವೇಳೆ, ಅಂಕಿತ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಯುವಕನ ಕುಟುಂಬದವರು ತಮ್ಮ ಮಗನನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಮೃತರು ತಮ್ಮ ಆತ್ಮಹತ್ಯಾ ಪತ್ರದಲ್ಲಿ ಏರ್ ಕಮೋಡೋರ್, ಗ್ರೂಪ್ ಕ್ಯಾಪ್ಟನ್ ಮತ್ತು ಇಬ್ಬರು ವಿಂಗ್ ಕಮಾಂಡರ್‌ಗಳು ಸೇರಿದಂತೆ ಆರು ಐಎಎಫ್ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲಾ ವಿದ್ಯಾರ್ಥಿಗಳಿಂದ ಕೆರೆ ಸ್ವಚ್ಛತಾ ಆಂದೋಲನ

ತರಬೇತಿ ಅಧಿಕಾರಿ ತನ್ನ ಸಹೋದರನನ್ನು ಕೊಂದು ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದಾರೆ ಎಂದು ಮೃತನ ಸಹೋದರ ಅಮನ್ ಆರೋಪಿಸಿದ್ದಾರೆ. ಗಂಗಮ್ಮನಗುಡಿ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಎರಡೂ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News