ಚಿತ್ರದುರ್ಗದಲ್ಲಿ ಜ್ಯೋತಿಷಿಯ ಶವ ಪತ್ತೆ: 30 ಲಕ್ಷ ರೂ. ನಗದು, ಅಪಾರ ಪ್ರಮಾಣದ ನಾಣ್ಯಗಳು ಪತ್ತೆ!

ಚಿತ್ರದುರ್ಗದ ಹೊಳಲ್ಕೆರೆಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ 70 ವರ್ಷದ ಜ್ಯೋತಿಷಿ ಗಂಗಾಧರ ಶಾಸ್ತ್ರಿ ಒಂಟಿಯಾಗಿ ವಾಸಿಸುತ್ತಿದ್ದರು. 16 ಎಕರೆ ಜಮೀನನ್ನು ಹೊಂದಿದ್ದ ಇವರು ಸ್ಥಳೀಯವಾಗಿ ಖ್ಯಾತಿಯಾಗಿದ್ದರು.

Written by - Puttaraj K Alur | Last Updated : Jul 1, 2023, 08:27 PM IST
  • ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜ್ಯೋತಿಷಿಯೊಬ್ಬರು ಶವವಾಗಿ ಪತ್ತೆ
  • ಮೃತ ಜ್ಯೋತಿಷಿ ಮನೆಯಲ್ಲಿ 30 ಲಕ್ಷ ರೂ. ನಗದು & ಅಪಾರ ಪ್ರಮಾಣದ ನಾಣ್ಯ ಪತ್ತೆ
  • 70 ವರ್ಷದ ಜ್ಯೋತಿಷಿ ಗಂಗಾಧರ ಶಾಸ್ತ್ರಿ 16 ಎಕರೆ ಆಸ್ತಿಯನ್ನು ಹೊಂದಿದ್ದರು
ಚಿತ್ರದುರ್ಗದಲ್ಲಿ ಜ್ಯೋತಿಷಿಯ ಶವ ಪತ್ತೆ: 30 ಲಕ್ಷ ರೂ. ನಗದು, ಅಪಾರ ಪ್ರಮಾಣದ ನಾಣ್ಯಗಳು ಪತ್ತೆ!  title=
ಚಿತ್ರದುರ್ಗದಲ್ಲಿ ಜ್ಯೋತಿಷಿಯ ಶವ ಪತ್ತೆ!

ಚಿತ್ರದುರ್ಗ: ಜ್ಯೋತಿಷಿಯೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ. ಮೃತ ಜ್ಯೋತಿಷಿ ಮನೆಯಲ್ಲಿ 30 ಲಕ್ಷ ರೂ. ನಗದು ಹಾಗೂ ಅಪಾರ ಪ್ರಮಾಣದ ನಾಣ್ಯಗಳು ಪತ್ತೆಯಾಗಿದ್ದು, ಭಾರೀ ಸುದ್ದಿಯಾಗಿದೆ.

ವಾರದ ಹಿಂದೆ 70 ವರ್ಷದ ಜ್ಯೋತಿಷಿ ಗಂಗಾಧರ ಶಾಸ್ತ್ರಿ ಸಾವನ್ನಪ್ಪಿದ್ದಾರೆ. ತೋಟದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಇವರು ಹೊಳಲ್ಕೆರೆಯಲ್ಲಿ 16 ಎಕರೆ ಆಸ್ತಿಯನ್ನು ಹೊಂದಿದ್ದರು. ಈ ಪೈಕಿ 4 ಎಕರೆ ತೆಂಗಿನ ತೋಟವೂ ಇದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Funny Video: ಈ ವಿಡಿಯೋ ನೋಡಿ ನಗು ತಡೆಯಲಾಗಲ್ಲ.. ಪ್ರಾಣಿಗಳೂ ಹೀಗೆಲ್ಲಾ ಮಾಡುತ್ತವೆಯೇ?

ಅಪಾರ ಪ್ರಮಾಣದ ಭಕ್ತರನ್ನು ಹೊಂದಿದ್ದ ಗಂಗಾಧರ ಶಾಸ್ತ್ರಿಯವರು ಜ್ಯೋತಿಷಿಯಾಗಿ ಹೆಸರು ಮಾಡಿದ್ದರು. ವಿವಿಧ ರೀತಿಯ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿದ್ದ ಇವರು ಸ್ಥಳೀಯವಾಗಿ ಖ್ಯಾತಿ ಗಳಿಸಿದ್ದರು. ಭಕ್ತರ ನೀಡುತ್ತಿದ್ದ ಕಾಣಿಕೆ ಮತ್ತು ಕೃಷಿ ಉತ್ಪನ್ನಗಳು ಶಾಸ್ತ್ರಿಯವರ ಪ್ರಮುಖ ಆದಾಯದ ಮೂಲವಾಗಿತ್ತು.

2 ದಿನಗಳ ಹಿಂದೆ ಭಕ್ತರು ಜ್ಯೋತಿಷಿಯ ಮನೆಗೆ ಭೇಟಿ ನೀಡಿದಾಗ 30 ಲಕ್ಷ ರೂ. ನಗದು ಮತ್ತು ಅಪಾರ ಪ್ರಮಾಣದ ನಾಣ್ಯಗಳು ಪತ್ತೆಯಾಗಿದ್ದವು. ಜುಲೈ 7ರಂದು ಭಕ್ತರು ಸಭೆ ಕರೆದು ಶ್ರೀಗಳ ಹೆಸರಿನಲ್ಲಿ ಸಮಿತಿ ರಚಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಶಾಸ್ತ್ರಿ ಅವರ ಜಮೀನಿನಲ್ಲಿ ಸ್ಮಾರಕ ನಿರ್ಮಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ ತಿಳಿದುಬಂದಿದೆ.

ಇದನ್ನೂ ಓದಿ: ಜುಲೈ 20 ರಿಂದ ಸಂಸತ್ತಿನ ಮಾನ್ಸೂನ್ ಅಧಿವೇಶನ ಆರಂಭ, ಚರ್ಚೆಗೆ ಬರಲಿದೆ ಏಕರೂಪ ನಾಗರೀಕ ಸಂಹಿತೆ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News