PFI ಗೆ ಸಂಬಂಧಿಸಿದ 40 ಠಿಕಾಣಿಗಳ ಮೇಲೆ NIA ದಾಳಿ, ಆಂಧ್ರ-ತೆಲಂಗಾಣದಿಂದ ನಾಲ್ವರ ಬಂಧನ

NIA Raid: ಈ ಕುರಿತು ಮಾಹಿತಿ ನೀಡಿರುವ ಎನ್ಐಎ ವಕ್ತಾರರೊಬ್ಬರು, ತೆಲಂಗಾಣದಲ್ಲಿರುವ 38 ಸ್ಥಳಗಳಲ್ಲಿ ಹಾಗೂ ಆಂಧ್ರಪ್ರದೇಶದ ಎರಡು ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಒಟ್ಟು ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕಾರ್ಯಾಚರಣೆಯ ವೇಳೆ, ಡಿಜಿಟಲ್ ಉಪಕರಣಗಳು, ದಾಖಲೆಗಳು, ಎರಡು ಕಠಾರಿಗಳು ಮತ್ತು 8.31 ಲಕ್ಷ ರೂಪಾಯಿ ಮೌಲ್ಯದ ನಗದು ಸೇರಿದಂತೆ ಇತರ ದೋಷಾರೋಪಣೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.  

Written by - Nitin Tabib | Last Updated : Sep 18, 2022, 05:38 PM IST
  • ತೆಲಂಗಾಣದ 38 ಸ್ಥಳಗಳು ಮತ್ತು ಆಂಧ್ರಪ್ರದೇಶದ 2 ಸ್ಥಳಗಳಲ್ಲಿ ನಡೆಸಲಾಗಿರುವ ಈ ಶೋಧ ಕಾರ್ಯಾಚರಣೆಯ ವೇಳೆ ನಾಲ್ವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.
  • ಕಾರ್ಯಾಚರಣೆಯ ವೇಳೆ ಡಿಜಿಟಲ್ ಉಪಕರಣಗಳು, ದಾಖಲೆಗಳು, ಎರಡು ಕಠಾರಿಗಳು ಮತ್ತು 8.31 ಲಕ್ಷ ರೂ.ಗೂ ಅಧಿಕ ನಗದು ಸೇರಿದಂತೆ ದೋಷಾರೋಪಣೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
PFI ಗೆ ಸಂಬಂಧಿಸಿದ 40 ಠಿಕಾಣಿಗಳ ಮೇಲೆ NIA ದಾಳಿ, ಆಂಧ್ರ-ತೆಲಂಗಾಣದಿಂದ ನಾಲ್ವರ ಬಂಧನ title=
NIA Raid

NIA Raid: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವಿರುದ್ಧ ಭಾರಿ ಕಾರ್ಯಾಚರಣೆ ನಡೆಸಿರುವ ಎನ್ಐಎ,  ತೆಲಂಗಾಣ ಮತ್ತು ಆಂಧ್ರಪ್ರದೇಶದ ವಿವಿಧ 40 ಸ್ಥಳಗಳಲ್ಲಿ ಭಾನುವಾರ ದಾಳಿ ನಡೆಸಿ ಶೋಧಕಾರ್ಯ ನಡೆಸಿದೆ. ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ತರಬೇತಿ ಶಿಬಿರಗಳನ್ನು ಆಯೋಜಿಸಿದ್ದಕ್ಕಾಗಿ ಮತ್ತು ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಆರೋಪದ ಪ್ರಕರಣದಲ್ಲಿ ಪಿಎಫ್‌ಐ ವಿರುದ್ಧ ಈ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.

ತೆಲಂಗಾಣದ 38 ಸ್ಥಳಗಳು ಮತ್ತು ಆಂಧ್ರಪ್ರದೇಶದ 2 ಸ್ಥಳಗಳಲ್ಲಿ ನಡೆಸಲಾಗಿರುವ ಈ ಶೋಧ ಕಾರ್ಯಾಚರಣೆಯ ವೇಳೆ ನಾಲ್ವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ. ಕಾರ್ಯಾಚರಣೆಯ ವೇಳೆ ಡಿಜಿಟಲ್ ಉಪಕರಣಗಳು, ದಾಖಲೆಗಳು, ಎರಡು ಕಠಾರಿಗಳು ಮತ್ತು 8.31 ಲಕ್ಷ ರೂ.ಗೂ ಅಧಿಕ ನಗದು ಸೇರಿದಂತೆ ದೋಷಾರೋಪಣೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಜುಲೈ 4 ರಂದು ತೆಲಂಗಾಣದ ನಿಜಾಮಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಾಜ್ಯ ಪೊಲೀಸರ ತನಿಖೆಯ ವೇಳೆ ನಾಲ್ವರು ಆರೋಪಿಗಳಾದ ಅಬ್ದುಲ್ ಕಾದರ್, ಶೇಖ್ ಸಹದುಲ್ಲಾ, ಮೊಹಮ್ಮದ್ ಇಮ್ರಾನ್ ಮತ್ತು ಮೊಹಮ್ಮದ್ ಅಬ್ದುಲ್ ಮೊಬಿನ್ ಅವರನ್ನು ಬಂಧಿಸಲಾಯಿತು.

ಇದನ್ನೂ ಓದಿ-ಭಾರತದಲ್ಲಿ ಚಿರತೆಯನ್ನು ನಾಯಿಯಂತೆ ಸಾಕಲಾಗುತ್ತಿತ್ತು ಗೊತ್ತೇ..!

ನಂತರ, ತನಿಖೆಯನ್ನು ಮುಂದುವರೆಸಲಾಗಿದ್ದು, ಎನ್‌ಐಎ ಆಗಸ್ಟ್ 26 ರಂದು ಪ್ರಕರಣವನ್ನು ಮರು ನೋಂದಾಯಿಸಿದೆ ಎಂದು ವಕ್ತಾರರು ತಿಳಿಸಿದ್ದಾರೆ. ತೆಲಂಗಾಣದ 38 ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, ನಿಜಾಮಾಬಾದ್‌ನಲ್ಲಿ ಗರಿಷ್ಠ 23, ಜಗ್ತ್ಯಾಲ್‌ನಲ್ಲಿ 7, ಹೈದರಾಬಾದ್‌ನಲ್ಲಿ 4, ನಿರ್ಮಲ್‌ನಲ್ಲಿ 2 ಮತ್ತು ಆದಿಲಾಬಾದ್ ಮತ್ತು ಕರೀಂನಗರ ಜಿಲ್ಲೆಗಳಲ್ಲಿ ತಲಾ ಒಂದೊಂದು ದಾಳಿ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ-60 ಹಾಸ್ಟೆಲ್ ವಿದ್ಯಾರ್ಥಿನಿಯರ ವಿಡಿಯೋ ಲೀಕ್..!...ಚಂದಿಗಡ ವಿವಿ ಹೇಳಿದ್ದೇನು ಗೊತ್ತೇ?

ಆಂಧ್ರಪ್ರದೇಶದ ಕರ್ನೂಲ್ ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಕಾದರ್ ಮತ್ತು ಇತರ 26 ಮಂದಿಗೆ ಸಂಬಂಧಿಸಿದ ಪ್ರಕರಣದಲ್ಲಿ ತಲಾ ಒಂದು ಸ್ಥಳದಲ್ಲಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅಲ್ಲದೆ, ಆರೋಪಿಗಳು ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಮತ್ತು ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲು ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News