Shikhar Dhawan Post: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಶಿಖರ್ ಧವನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಪೋಸ್ಟ್’ನಲ್ಲಿ ‘ನವೆಂಬರ್ 19’ರ ದಿನಾಂಕವನ್ನು ಉಲ್ಲೇಖಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ.
19 ನವೆಂಬರ್ 2023… ODI ವಿಶ್ವಕಪ್ ಫೈನಲ್’ನಲ್ಲಿ ಭಾರತ ಸೋಲು ಕಾಣುವ ಮೂಲಕ ICC ಟ್ರೋಫಿ ಗೆಲ್ಲುವ ಕನಸು ನುಚ್ಚುನೂರಾಗಿತ್ತು. 2011 ರ ವಿಶ್ವಕಪ್ ನಂತರ ಭಾರತವು ಯಾವುದೇ 50 ಓವರ್ ಐಸಿಸಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಜ್ವೈನ್ ನೀರು ಕುಡಿದರೆ ಏನಾಗುತ್ತೆ?
ಇದೀಗ ಧವನ್, ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್’ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, “ಒಬ್ಬ ಮನುಷ್ಯ ಎಲ್ಲದರಿಂದ ಚೇತರಿಸಿಕೊಳ್ಳಬಹುದು, ಆದರೆ ನವೆಂಬರ್ 19 ರಿಂದ ಅಲ್ಲ” ಎಂದು ಬರೆದಿದ್ದಾರೆ. ಇದರ ಜೊತೆ ಫೋಟೋ ಕೂಡ ಹಂಚಿಕೊಂಡಿದ್ದಾರೆ. ಅದರಲ್ಲಿ ಹೋರ್ಡಿಂಗ್ ಇದ್ದು, “ Vaishali I am Over You… Not Your, Khanna” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಾಕ್ಷಾತ್ ಗಣಪತಿಯೇ ಮೆಚ್ಚಿದ ರಾಶಿಗಳಿವು… ವಿಘ್ನವೆಂಬುದು ಇವರ ಬಳಿಯೂ ಸೋಕದು! ಸದಾ ಸುಖದ ಜೊತೆ ಹೆಜ್ಜೆಹೆಜ್ಜೆಗೂ ವಿಜಯವೇ
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಆಡುತ್ತಿದೆ. ‘ಎ’ ಗುಂಪಿನ ಎಲ್ಲ ಪಂದ್ಯಗಳನ್ನು ಭಾರತ ಗೆದ್ದು ಸೂಪರ್-8ಗೆ ಲಗ್ಗೆ ಇಟ್ಟಿದೆ. ಇಷ್ಟೇ ಅಲ್ಲ ಸೂಪರ್-8ರ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಮಣಿಸಿ ಭಾರತ ಸೆಮಿಫೈನಲ್ ಕಡೆಗೆ ಹೆಜ್ಜೆ ಹಾಕಿದೆ. ಈ ಟೂರ್ನಿಯನ್ನು ಗೆಲ್ಲುವ ಮೂಲಕ ತಂಡ ಐಸಿಸಿ ಟ್ರೋಫಿ ಬರ ನೀಗಿಸುತ್ತದೆ ಎಂಬ ಭರವಸೆ ಆಟಗಾರರ ಜತೆಗೆ ಭಾರತೀಯ ಅಭಿಮಾನಿಗಳಲ್ಲೂ ಇದೆ.
Men can get over anything, but not 19th November pic.twitter.com/KZRTsx8doe
— Shikhar Dhawan (@SDhawan25) June 21, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ