ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರ ನುಡಿಮುತ್ತುಗಳು

ಇಂದು ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರು ಜನಿಸಿದ ದಿನ. ಅವರು 1891 ಏಪ್ರಿಲ್ 14 ರಂದು ಜನಿಸಿ ಸಂವಿಧಾನದ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದರು. ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವ ತತ್ವಗಳ ಆಧಾರದ ಮೇಲೆ ಶೋಷಿತ ಸಮುದಾಯಗಳ ಪರವಾಗಿ ಸತತವಾಗಿ ಹೋರಾಡಿದರು. ಇಂದು ಅವರ ಜನ್ಮದಿನ ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಕೆಲವು ಮಹತ್ವದ ನುಡಿ ಮುತ್ತುಗಳನ್ನು ಸ್ಮರಿಸಿಕೊಳ್ಳೋಣ.

Last Updated : Apr 14, 2019, 11:40 AM IST
ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರ ನುಡಿಮುತ್ತುಗಳು  title=

ನವದೆಹಲಿ: ಇಂದು ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರು ಜನಿಸಿದ ದಿನ. ಅವರು 1891 ಏಪ್ರಿಲ್ 14 ರಂದು ಜನಿಸಿ ಸಂವಿಧಾನದ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದರು. ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವ ತತ್ವಗಳ ಆಧಾರದ ಮೇಲೆ ಶೋಷಿತ ಸಮುದಾಯಗಳ ಪರವಾಗಿ ಸತತವಾಗಿ ಹೋರಾಡಿದರು. ಇಂದು ಅವರ ಜನ್ಮದಿನ ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಕೆಲವು ಮಹತ್ವದ ನುಡಿ ಮುತ್ತುಗಳನ್ನು ಸ್ಮರಿಸಿಕೊಳ್ಳೋಣ.

  • ಧರ್ಮದಲ್ಲಿ ಭಕ್ತಿಯು ಆತ್ಮಕ್ಕೆ ಮುಕ್ತಿ ಸಿಗುವ ಮಾರ್ಗವಾಗಿರಬಹುದು.ಆದರೆ ರಾಜಕೀಯದಲ್ಲಿನ ಭಕ್ತಿ ಅಥವಾ ವ್ಯಕ್ತಿ ಆರಾಧನೆ ಮುಂದೆ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ.
  • ಇಂದು ಭಾರತೀಯರು ಎರಡು ವಿಭಿನ್ನ ಸಿದ್ಧಾಂತಗಳಿಂದ ಆಳಲ್ಪಡುತ್ತಿದ್ದಾರೆ. ಒಂದು ಸಂವಿಧಾನದ ಪ್ರಸ್ತಾವನೆಯಲ್ಲಿ ಅವರ ರಾಜಕೀಯ ಆದರ್ಶವು ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವದ ಜೀವನವನ್ನು ದೃಢಪಡಿಸುತ್ತದೆ.ಇನ್ನೊಂದು ಅವರ ಧರ್ಮದಲ್ಲಿ ಅಡಕವಾಗಿರುವ ಸಾಮಾಜಿಕ ವಿಚಾರವು ಅವರನ್ನು ನಿರಾಕರಿಸುತ್ತದೆ.
  • ರಾಜಕೀಯ ಪ್ರಜಾಪ್ರಭುತ್ವಕ್ಕೆ ಸಾಮಾಜಿಕ ಪ್ರಜಾಪ್ರಭುತ್ವದ ಬುನಾದಿ ಇಲ್ಲದಿದ್ದರೆ ಅದು ಧೀರ್ಘಕಾಲ ಬಾಳುವುದಿಲ್ಲ.ಸಾಮಾಜಿಕ ಪ್ರಜಾಪ್ರಭುತ್ವ ಎಂದರೇನು? ಜೀವನ ವಿಧಾನವು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಗುರುತಿಸುವ ಜೀವನದ ಮಾರ್ಗವಾಗಿದೆ.
  • ಪ್ರಜಾಪ್ರಭುತ್ವ ಕೇವಲ ಒಂದು ಸರ್ಕಾರದ ರೂಪವಲ್ಲ. ಇದು ಪ್ರಾಥಮಿಕವಾಗಿ ಸಂಯೋಜಿತ ಜೀವನ, ಸಂಯೋಜಿತ ಸಂವಹನ ಅನುಭವದ ವಿಧಾನವಾಗಿದೆ. ಇದು ಮುಖ್ಯವಾಗಿ ಸಹ ಗೌರವದ ವರ್ತನೆ ಮತ್ತು ಸಹ ವ್ಯಕ್ತಿ ಕಡೆಗೆ ತೋರುವ ಗೌರವವನ್ನು ಹೊಂದಿದೆ. 
  • ರಾಜಕೀಯ ಸರ್ವಾಧಿಕಾರವು  ಸಾಮಾಜಿಕ ಸರ್ವಾಧಿಕಾರಕ್ಕೆ ಹೋಲಿಸಿದಲ್ಲಿ ಅದು ಏನೂ ಅಲ್ಲ ಮತ್ತು ಸಮಾಜವನ್ನು ವಿರೋಧಿಸುವ ಸುಧಾರಣಾವಾದಿ ಸರ್ಕಾರವನ್ನು ವಿರೋಧಿಸುವ ರಾಜಕಾರಣಿಗಿಂತ ಹೆಚ್ಚು ಧೈರ್ಯಶಾಲಿಯಾಗಿರುತ್ತಾನೆ ."
  • ಸಮುದಾಯವೊಂದರ ಬೆಳವಣಿಗೆಯನ್ನು ನಾನು ಮಹಿಳೆಯರ ಸಾಧನೆ ಮೇಲೆ ಅಳೆಯುತ್ತೇನೆ
  • ಸ್ವಾತಂತ್ರ, ಸಮಾನತೆ, ಭಾತೃತ್ವವನ್ನು ಸಾರುವ ಧರ್ಮವನ್ನು ನಾನು ಇಷ್ಟಪಡುತ್ತೇನೆ, 
  • ಎಲ್ಲಿಯವರೆಗೆ ನಿಮಗೆ ಸಾಮಾಜಿಕ ಸ್ವಾತಂತ್ರ ಸಿಗುವುದಿಲ್ಲವೋ ಅಲ್ಲಿಯವರೆಗೆ ಕಾನೂನಿನ ಮೂಲಕ ನೀಡಿರುವ ಎಲ್ಲ ಸ್ವಾತಂತ್ರ್ಯ ನಿಮಗೆ ದೊರಕಲು ಸಾಧ್ಯವಿಲ್ಲ. 
  • ಒಬ್ಬ ಮಹಾನ್ ವ್ಯಕ್ತಿ ಒಬ್ಬ ಶ್ರೇಷ್ಠ ವ್ಯಕ್ತಿಯಿಂದ ಭಿನ್ನವಾಗಿರುತ್ತಾನೆ ಏಕೆಂದರೆ, ಅವನು ಸಮಾಜದ ಸೇವಕನಾಗಲು ಸಿದ್ಧನಾಗಿರುತ್ತಾನೆ"
  • ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ. 

 

Trending News