ಕಿರಾಣಾ ಘರಾಣಾ ಸಂಗೀತಕ್ಕೆ ಧಾರವಾಡದ ಕೊಡುಗೆ

Last Updated : Nov 20, 2017, 06:23 PM IST
ಕಿರಾಣಾ ಘರಾಣಾ ಸಂಗೀತಕ್ಕೆ ಧಾರವಾಡದ ಕೊಡುಗೆ title=

 

 

ದಕ್ಷಿಣ ಭಾರತದಲ್ಲಿ ಹಿಂದೂಸ್ತಾನಿ ಸಂಗೀತದ ವಿಷಯಕ್ಕೆ ಬಂದಾಗ ಧಾರವಾಡಕ್ಕೆ ದೊಡ್ಡ ಹೆಸರಿದೆ.ಈ ಸ್ಥಳವು ಒಂದು ರೀತಿಯಲ್ಲಿ  ಉತ್ತರ ಮತ್ತು ದಕ್ಷಿಣ ಭಾರತದ ಸಂಸ್ಕೃತಿಗಳನ್ನು ಬೆರೆಸಿದಂತಿದೆ.ಇಂತಹ ಮಿಶ್ರಣ ಕೇವಲ ಪ್ರದೇಶವಾರು ಆಗಿರದೆ ಅದು ಇಲ್ಲಿನ ಆಹಾರ,ಉಡುಗೆ,ಹಾಗೂ ಇನ್ನಿತರ ಪದ್ದತಿಗಳುಗಳಲ್ಲೂ ಸಹಿತ ಇಂತಹ ಅಂಶಗಳನ್ನು ನಾವು ಕಾಣಬಹುದು.ಆದರೆ ನಾವು ಈಗ ಹೇಳ ಹೊರಟಿರುವುದು ಇವುಗಳ ಕುರಿತಲ್ಲ, ಬದಲಾಗಿ ಹಿಂದುಸ್ತಾನ ಸಂಗೀತದ ಪ್ರಕಾರವಾದ ಕಿರಣಾ ಘರಾಣಾ.ಹೌದು, ಧಾರವಾಡ ಮತ್ತು ಕಿರಾಣಾ ಘರಾಣಾ ಕಳೆದ ಶತಮಾನಗಳಿಂದ ಇವುಗಳ ನಡುವಿರುವ ಅವಿನಾಭಾವ ಸಂಬಂಧವೇ ಅಂತದ್ದು,ಕಾರಣವಿಷ್ಟೇ ಪ್ರಮುಖವಾಗಿ ಈ ಪ್ರದೇಶವು ಕಿರಣಾ ಘರಾಣಾ ಸಂಗೀತ ಪ್ರಕಾರಕ್ಕೆ ಗಣನೀಯವಾದ ಕೊಡುಗೆಯನ್ನು ಕೊಟ್ಟಿದೆ.ಇದರಲ್ಲಿ ಪ್ರಮುಖವಾಗಿ  ಗಂಗೂಬಾಯಿ ಹಾನಗಲ್,ಭೀಮಸೇನ್ ಜೋಷಿ,ಮಲ್ಲಿಕಾರ್ಜುನ್ ಮನ್ಸೂರ್,ಸವಾಯಿ ಗಂಧರ್ವ,ಬಸವರಾಜ್ ರಾಜಗುರು,ಮಾಧವ್ ಗುಡಿ,ಕುಮಾರ್ ಗಂಧರ್ವ, ಜಯತೀರ್ಥ್ ಮೇವುಂಡಿ ಮತ್ತು ಪಂಡಿತ್ ವೆಂಕಟೇಶ್ ಕುಮಾರ್,ಮಾಧವ್ ಗುಡಿ,ರಾಜಶೇಖರ್ ಮನ್ಸೂರ್ ಈ ಭಾಗದಿಂದಲೇ ಈ ಪ್ರಕಾರದ ಸಂಗೀತದಲ್ಲಿ ಹೆಸರು ಗಳಿಸಿದ್ದಾರೆ. 

ಇದರ ಇತಿಹಾಸದ ಹಿನ್ನಲೆಯನ್ನು ಗಮನಿಸುತ್ತಾ ಹೋದಾಗ ಉಸ್ತಾದ್ ಮಿಯಾನ್ ಈ ಪ್ರಕಾರವನ್ನು ಅಭಿವೃದ್ದಿಗೊಳಿಸಿದರು.ಕಾಲಾಂತರದಲ್ಲಿ ಇದು ಅಬ್ದುಲ್ ಕರಿಂಖಾನ್ ಮತ್ತು ಅಬ್ದುಲ್ ವಾಹಿದಖಾನ್ ರು 20 ನೇಯ ಶತಮಾನದಲ್ಲಿ ಇದನ್ನು ಪ್ರಸಿದ್ದಿಗೊಳಿಸಿದರು.ಇದಕ್ಕೂ ಮೊದಲು 13ನೇ ಶತಮಾನದ  ಸಂಗೀತಗಾರ ಗೋಪಾಲ ನಾಯಕ್ ಮುಸ್ಲಿಮನ ಸೂಫಿ ಸಂಪ್ರದಾಯಕ್ಕೆ ಮತಾಂತರಗೊಂಡು ಈ ರೀತಿಯ ಹೊಸ ಸಂಗೀತದ ಶೈಲಿಯನ್ನು ಸೃಷ್ಟಿಸಿದರು.ಧಾರವಾಡವು ಕಿರಾಣಾ ಘರಾಣಾ ಪ್ರಕಾರದಲ್ಲಿ  ಹೆಸರುಗಳಿಸಲು ಮುಖ್ಯಕಾರಣ  ಉತ್ತರ ಪ್ರದೇಶದ ಕೈರಾಣಾ ಜಿಲ್ಲೆಯವರಾಗಿದ್ದ ಉಸ್ತಾದ್ ಅಬ್ದುಲ್ ಕರೀಂ ಖಾನ್ ಅವರು ಪ್ರತಿ ವರ್ಷ ಮೈಸೂರ ರಾಜರ ದರ್ಬಾರಿಗೆ ಆಗಮಿಸುವ ಸಂಧರ್ಭದಲ್ಲಿ ಧಾರವಾಡದಲ್ಲಿರುವ ತಮ್ಮ ಸಹೋದರನ ಜೊತೆ ಉಳಿಯುತ್ತಿದ್ದರು,ಆ ಸಂಧರ್ಭದಲ್ಲಿ ಅವರ ಶಿಷ್ಯನಾಗಿದ್ದ  ಸವಾಯಿ ಗಂಧರ್ವರಿಗೆ ಈ ಕಿರಾಣಾ ಘರಾಣಾ ಕಲೆಯನ್ನು ಕಲಿಸಿದರು.ಮುಂದೆ ಅವರೇ ಗಂಗೂಬಾಯಿ ಹಾನಗಲ್ ,ಭೀಮಸೇನ್ ಜೋಷಿ ಮತ್ತು ಬಸವರಾಜ್ ರಾಜಗುರುರವರಿಗೆ ಗುರುಗಳಾದರು.ಅಲ್ಲಿಂದ ಈ ಪ್ರದೇಶವು ನಿರಂತರವಾಗಿ ಈ ಪ್ರಕಾರದಲ್ಲಿ ಹೊಸ ಪ್ರತಿಭೆಗಳನ್ನು ತರುತ್ತಲೇ ಇದೆ.ಕಿರಣ ಘರಾಣಾ ಮುಖ್ಯವಾಗಿ ಅದು ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗಿತದ ಎರಡು ಪ್ರಕಾರಗಳಿಂದ ಪ್ರಭಾವಿತಗೊಂಡಿದೆ.

ಸದ್ಯ ಈ ಪ್ರಕಾರದ ಸಂಗೀತವು ಹೆಚ್ಚಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗದಲ್ಲಿ ಹೆಚ್ಚು ಅಭಿವೃದ್ದಿಗೊಂಡಿದೆ ಎಂದು ಹೇಳಬಹುದು.ಅದರಲ್ಲೂ ಧಾರವಾಡವು ದೇಶದಲ್ಲೆಡೆ ಈ ಪ್ರಕಾರದ ಸಂಗೀತಕ್ಕೆ ಹೆಚ್ಚು ಕೊಡುಗೆಯನ್ನು ನೀಡಿದೆ ಎಂದೇ ಹೇಳಬಹುದು. 

Trending News