ಮಕರ ಸಂಕ್ರಾಂತಿ ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು ?

ಸಾಮಾನ್ಯವಾಗಿ ಮಕರ ಸಂಕ್ರಾಂತಿಯನ್ನು ಜನವರಿ 14 ಅಥವಾ 15 ರಂದು ರಾಜ್ಯದಲ್ಲಿ ರಾಜ್ಯದಲ್ಲಿ ಆಚರಿಸುತ್ತಾರೆ. ಸಂಕ್ರಾಂತಿ ಆಚರಣೆ ಹಲವು ರಾಜ್ಯಗಳಲ್ಲಿ ವಿವಿಧ ನಾಮಗಳಿಂದ ಕರೆಯಲಾಗುತ್ತದೆ.ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ ,ತಮಿಳುನಾಡುಗಳಲ್ಲಿ ಸಂಕ್ರಾಂತಿಯನ್ನು ಆಚರಿಸುತ್ತಾರೆ. ಮುಖ್ಯವಾಗಿ ಈ ಹಬ್ಬವು ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವುದರಿಂದ ಇದನ್ನು ಸಮೃದ್ಧಿ ಸಂಕೇತ ಎನ್ನುವ ನಂಬಿಕೆ ಇದೆ. 

Updated: Jan 15, 2020 , 12:35 AM IST
ಮಕರ ಸಂಕ್ರಾಂತಿ ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು ?

ಬೆಂಗಳೂರು: ಸಾಮಾನ್ಯವಾಗಿ ಮಕರ ಸಂಕ್ರಾಂತಿಯನ್ನು ಜನವರಿ 14 ಅಥವಾ 15 ರಂದು ರಾಜ್ಯದಲ್ಲಿ ರಾಜ್ಯದಲ್ಲಿ ಆಚರಿಸುತ್ತಾರೆ. ಸಂಕ್ರಾಂತಿ ಆಚರಣೆ ಹಲವು ರಾಜ್ಯಗಳಲ್ಲಿ ವಿವಿಧ ನಾಮಗಳಿಂದ ಕರೆಯಲಾಗುತ್ತದೆ.ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ ,ತಮಿಳುನಾಡುಗಳಲ್ಲಿ ಸಂಕ್ರಾಂತಿಯನ್ನು ಆಚರಿಸುತ್ತಾರೆ. ಮುಖ್ಯವಾಗಿ ಈ ಹಬ್ಬವು ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವುದರಿಂದ ಇದನ್ನು ಸಮೃದ್ಧಿ ಸಂಕೇತ ಎನ್ನುವ ನಂಬಿಕೆ ಇದೆ. 

ಮಕರ ಸಂಕ್ರಾಂತಿ ಹಿನ್ನಲೆ: 

ಈ ಹಬ್ಬದ ಹಿನ್ನಲೆಯನ್ನು ನಾವು ವಿವಿಧ ರೀತಿಯಲ್ಲಿ ನೋಡಬಹುದಾಗಿದೆ. ಸಾಮಾನ್ಯವಾಗಿ ಹಿಂದೂ ಧರ್ಮದವರು ಇದನ್ನು ಜೋತಿಷ್ಯದ ತಳಹದಿ ಮೇಲೆ ನೋಡುತ್ತಾರೆ. ಇದರ ಪ್ರಕಾರ ಶುಭಕಾರ್ಯಗಳಿಗೆ ಮುಹೂರ್ತದ  ಕಾಲವನ್ನು ನಿರ್ಣಯಿಸಿ, ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ, ಸೂರ್ಯೋದಯ. ಸೂರ್ಯಾಸ್ತ ಇವುಗಳ ಆಧಾರದ ಮೇಲೆ ಒಳ್ಳೆಯ ಗಳಿಗೆ ಶುಭ ಕಾರ್ಯಗಳಿಗಾಗಿ ನಿರ್ಣಯಿಸುತ್ತಾರೆ.

ಜೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯನು ನಿರ್ಯಾಣ ಮಕರರಾಶಿಯನ್ನು ಪ್ರವೇಶಿಸಿದಾಗ,ಅದು ಮಕರ ಸಂಕ್ರಮಣ ಎಂದಾಗುತ್ತದೆ. ಸಾಮಾನ್ಯವಾಗಿ ಇದು ಕ್ಯಾಲೆಂಡರ್ ಪ್ರಕಾರ ಜನವರಿ 14ಕ್ಕೆ ಬರುತ್ತದೆ.ಈ ಕಾಲವು  ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವುದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಪೈರಿಗೆ ಕಟಾವಿಗೆ ಸೂಕ್ತ ಸಮಯವು ಆಗಿರುತ್ತದೆ ಎನ್ನುವ ನಂಬಿಕೆ ಇದೆ.

ಇನ್ನು ಇದನ್ನು ನಾವು ವೈಜ್ಞಾನಿಕ ಹಿನ್ನಲೆಯಲ್ಲಿ ನೋಡುತ್ತಾ ಹೊರಟಾಗ ಪೂರ್ವದಲ್ಲಿ ಸೂರ್ಯೋದಯ ಮತ್ತು ಪಶ್ಚಿಮದಲ್ಲಿ ಸೂರ್ಯಾಸ್ತಮಾನ ಎಂದು ಹೇಳುತ್ತವೆಯಾದರೂ ಕೂಡ ಈ ಎರಡು ದಿನಗಳಂದು ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯ ಸಮನಾಗಿರುತ್ತದೆ. ಈ ಹಿನ್ನಲೆಯಲ್ಲಿ ಈ ದಿನಗಳನ್ನು ವೈಜ್ಞಾನಿಕವಾಗಿ ಈಕ್ವಿನಾಕ್ಸ್ ಎಂದು ಕರೆಯಲಾಗುತ್ತದೆ. ಆ ಮೂಲಕ ಬೆಳಕು ಮತ್ತು ರಾತ್ರಿಯನ್ನು ಸಮಾನಾಗಿ ಹಂಚಿಕೊಳ್ಳಲಾಗುತ್ತದೆ. ಈ ಹಬ್ಬವನ್ನು ತಮಿಳುನಾಡಿನಲ್ಲಿ ಪೊಂಗಲ್ ಎನ್ನುತ್ತಾರೆ, ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಗೆ "ಲೋಹರಿ ಎಂದು ಕರೆಯುತ್ತಾರೆ.

ಉತ್ತರಾಯಣ ಪುಣ್ಯ ಕಾಲ: 
ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ (ಜನವರಿ 13 ಅಥವಾ 14 ರಂದು) ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯಲಾಗುತ್ತದೆ. ಈ ಕಾಲಾವಧಿಯನ್ನು ಬದುಕುವುದಕ್ಕೆ ಅಷ್ಟೇ ಅಲ್ಲ ಸಾಯುವುದಕ್ಕೂ ಪುಣ್ಯ ಸಮಯ ಎನ್ನುವ ನಂಬಿಕೆ ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿದೆ.ಈ ಹಿನ್ನಲೆಯಲ್ಲಿ ಮಹಾಭಾರತದ ಭೀಷ್ಮನೂ ಕೂಡ ತನ್ನ ದೇಹವನ್ನು ತ್ಯಜಿಸಲು ಉತ್ತರಾಯಣದ ಕಾಲದವರೆಗೂ ಕಾಯ್ದಿದ್ದನೂ ಎನ್ನುವ ಮಾತಿದೆ.ಈ ಹಿನ್ನಲೆಯಲ್ಲಿ ಈ ಕಾಲದಲ್ಲಿ ಶುಭಕಾರ್ಯಗಳಿಗಾಗಿ ಯಜ್ಞ ಯಾಗಾಧಿಗಳನ್ನು ಕೈಗೊಳ್ಳಲಾಗುತ್ತದೆ.

ಹಿಂದೂ ಶಾಸ್ತ್ತ್ರದ ಪ್ರಕಾರ ಸಂಕ್ರಾಂತಿ ಹಬ್ಬದ ಕುರಿತಾಗಿ ಈ ರೀತಿ ಉಲ್ಲೇಖಿಸಲಾಗಿದೆ:

"ಶಿತಸ್ಯಾಂ ಕೃಷ್ಣತೈಲೈಃ ಸ್ನಾನ ಕಾರ್ಯಂ ಚೋದ್ವರ್ತನಂ ಶುಭೈಃ
ತಿಲಾ ದೇಯಾಶ್ಚ ವಿಪ್ರೇಭ್ಯೌ ಸರ್ವದೇವೋತ್ತರಾಯಣೇ
ತಿಲ ತೈಲೇನ ದೀಪಾಶ್ಚ ದೇಯಾಃ ದೇವಗೃಹೇ ಶುಭಾಃಷಿ"

ಮಕರ ಸಂಕ್ರಾಂತಿ ಶುಭದಿನದಂದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ ನಂತರ  ಬ್ರಾಹ್ಮಣರಿಗೆ ಎಳ್ಳು ದಾನ ಕೊಡಬೇಕು. ದೇವಸ್ತಾನಗಳಲ್ಲಿ ಎಳ್ಳೆಣ್ಣೆಯ ದೀಪವನ್ನು ಬೆಳಗಿಸ ಬೇಕು ಎಂದು ಈ ಮೇಲಿನ ಶ್ಲೋಕ ಸಾರುತ್ತದೆ.