ವಿಶ್ವ ಪರಿಸರ ದಿನ: ಮುಂದಿನ ಪೀಳಿಗೆಗಾಗಿ ಸ್ವಚ್ಛ ಪರಿಸರಕ್ಕೆ ಒಂದು ಸಣ್ಣ ಹೆಜ್ಜೆ

ವಿಶ್ವ ಪರಿಸರ ದಿನದಂದು ಪ್ರಪಂಚದಾದ್ಯಂತ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗುತ್ತದೆ. 

Last Updated : Jun 5, 2018, 10:13 AM IST
ವಿಶ್ವ ಪರಿಸರ ದಿನ: ಮುಂದಿನ ಪೀಳಿಗೆಗಾಗಿ ಸ್ವಚ್ಛ ಪರಿಸರಕ್ಕೆ ಒಂದು ಸಣ್ಣ ಹೆಜ್ಜೆ  title=

ನವದೆಹಲಿ: ಜೂನ್ 5 ರಂದು ವಿಶ್ವ ಪರಿಸರ ದಿನದಂದು ಆಚರಿಸಲಾಗುತ್ತದೆ. ಪರಿಸರ ದಿನ ಆಚರಿಸುವ ಪ್ರಮುಖ ಉದ್ದೇಶವೆಂದರೆ ಜನರಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವುದು. ಈ ಸಂದರ್ಭದಲ್ಲಿ, ಪ್ರಪಂಚದಾದ್ಯಂತ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗುತ್ತದೆ. ಇದರಿಂದಾಗಿ ಮಾನವರು ಮತ್ತು ಪ್ರಾಣಿಗಳು ಶುದ್ಧ ಪರಿಸರದಲ್ಲಿ ಮುಕ್ತವಾಗಿ ಉಸಿರಾಡಬಹುದು.

ಗ್ರಾಮೀಣ ಪ್ರದೇಶಗಳಲ್ಲಿ ಪರಿಸರವನ್ನು ಸುರಕ್ಷಿತವಾಗಿಡಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ಇಂತಹ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ದೀರ್ಘಕಾಲದವರೆಗೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜನರು ಕಡಿಮೆ ಸಮಯವನ್ನು ಹೊಂದಿದ್ದು, ಅವರಿಗೆ ಪರಿಸರದ ಬಗ್ಗೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಕೆಲವರು ದೂರುತ್ತಾರೆ. ಪರಿಸರವನ್ನು ಉಳಿಸಬಹುದಾದ ಕೆಲವು ಸಲಹೆಗಳನ್ನು ನಾವು ನಿಮಗೆ ನೀಡುತ್ತೇವೆ. ಅದು ನಿಮ್ಮ ಮಕ್ಕಳಿಗೆ ಒಂದು ಸ್ವಚ್ಛ ಪರಿಸರವನ್ನು ಕೂಡ ನೀಡುತ್ತದೆ.

-ನಿಮ್ಮ ಮನೆಯ ಮುಂದೆ ಪ್ರತಿ ವರ್ಷ ಒಂದು ಸಸ್ಯವನ್ನು ನೆಟ್ಟು, ಅದನ್ನು ಆರೈಕೆ ಮಾಡಿ ಮತ್ತು ಅದು ಮರವಾಗುವವರೆಗೆ ಅದನ್ನು ಪೋಷಿಸಿ ಬೆಳೆಸಿ. ಅದು ವಿಷಕಾರಿ ಅನಿಲಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

-ನಿಮ್ಮ ಕಟ್ಟಡದಲ್ಲಿ, ಅದು ವೈಯಕ್ತಿಕ ಅಥವಾ ಸರ್ಕಾರಿ ಕಚೇರಿಯಾಗಿರಲಿ, ಮಳೆನೀರು ಕೊಯ್ಲು ವ್ಯವಸ್ಥೆ ತಂತ್ರಜ್ಞಾನವನ್ನು ಬಳಸಿ.

-ಫ್ಯಾನ್, ಟ್ಯೂಬ್ ಲೈಟ್, ಕೂಲರ್, ಎಸಿ, ಕಂಪ್ಯೂಟರ್ ಮುಂತಾದ ವಿದ್ಯುತ್ ಉಪಕರಣಗಳನ್ನು ನಿಮ್ಮ ಕೆಲಸ ಮುಗಿದ ಕೂಡಲೇ ಸ್ವಿಚ್ ಆಫ್ ಮಾಡಿ.

-ವಾತಾವರಣದಲ್ಲಿ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಲು ಸೌರಶಕ್ತಿ ಮತ್ತು ಶುದ್ಧ ಇಂಧನವನ್ನು ಬಳಸಿ.

-ನೀರನ್ನು ಬಳಸಿದ ನಂತರ, ತಕ್ಷಣ ಟ್ಯಾಪ್ ಅನ್ನು ಆಫ್ ಮಾಡಿ. ಬಟ್ಟೆ ಒಗೆದ ನಂತರ, ಆ ನೀರಿನಿಂದ ನೆಲವನ್ನು ಸ್ವಚ್ಛಗೊಳಿಸಬಹುದು. ಇದರಿಂದ ಅದನ್ನು ಮರುಬಳಕೆ ಮಾಡಿದಂತಾಗುತ್ತದೆ. ಅದೇ ರೀತಿ ನೀರನ್ನು ಮರುಬಳಕೆ ಮಾಡಬಹುದಾದ ಮತ್ತು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಬಳಸುವುದನ್ನು ಮರೆಯದಿರಿ.

-ಪ್ಲಾಸ್ಟಿಕ್ ಲೋಟಗಳು, ಪ್ಲಾಸ್ಟಿಕ್ ಬಾಟಲ್ ಗಳು ಮತ್ತು ಪ್ಲೇಟ್ ಗಳ ಬಳಕೆಯನ್ನು ತಪ್ಪಿಸಿ.

-ಬೆಳೆಗಳ ಅವಶೇಷಗಳನ್ನು ಸುಡುವುದರಿಂದ ಜೀವಂತ ಜೀವಿಗಳು ಸಾಯುತ್ತವೆ, ಜೊತೆಗೆ ವಾಯುಮಾಲಿನ್ಯ ಹೆಚ್ಚಾಗುತ್ತದೆ.

-ಪುಸ್ತಕಗಳು, ನೋಟ್ ಬುಕ್ ಗಳು ಅಥವಾ ಹರಿದ ಪುಟಗಳನ್ನು ಬಿಸಾಡುವ ಮೊದಲು ಒಮ್ಮೆ ಮರುಬಳಕೆ ಮಾಡಬಹುದೇ ಎಂಬುದನ್ನು ಪರಿಗಣಿಸಿ.

Trending News