ತಂದೆಯ ಹುಟ್ಟುಹಬ್ಬಕ್ಕೆ 'ಮಹೀಂದ್ರಾ ಎಕ್ಸ್‌ಯುವಿ700' ಉಡೊಗೊರೆ ಕೊಟ್ಟ ಖ್ಯಾತ ನಟ

ಮರಾಠಿ ಕಿರುತೆರೆಯ ಜನಪ್ರಿಯ ನಟ ಹರ್ದೀಕ್ ಜೋಶಿ ಅಪ್ಪನಿಗೆ ಹುಟ್ಟುಹಬ್ಬದ ಪ್ರಯುಕ್ತ ಮಹೀಂದ್ರಾ ಎಕ್ಸ್‌ಯುವಿ700 ಕಾರನ್ನು ಉಡೊಗೊರೆಯಾಗಿ ನೀಡಿದ್ದಾರೆ. ಸದ್ಯ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Written by - Zee Kannada News Desk | Last Updated : Mar 30, 2024, 08:39 PM IST
  • ಮಹೀಂದ್ರಾ ಎಕ್ಸ್‌ಯುವಿ700 ಕಾರನ್ನು ಉಡೊಗೊರೆಯಾಗಿ ನೀಡಿದ್ದಾರೆ.
  • ನಟ ಹರ್ದೀಕ್ ಜೋಶಿ ಅಪ್ಪನಿಗೆ ಹುಟ್ಟುಹಬ್ಬದ ಪ್ರಯುಕ್ತ ಮಹೀಂದ್ರಾ ಎಕ್ಸ್‌ಯುವಿ700 ಕಾರನ್ನು ಉಡೊಗೊರೆಯಾಗಿ ನೀಡಿದ್ದಾರೆ.
  • ಹರ್ದೀಕ್ ಜೋಶಿ ಮರಾಠಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಖ್ಯಾತಿ ಗಳಿಸಿದ್ದಾರೆ.
ತಂದೆಯ ಹುಟ್ಟುಹಬ್ಬಕ್ಕೆ 'ಮಹೀಂದ್ರಾ ಎಕ್ಸ್‌ಯುವಿ700' ಉಡೊಗೊರೆ ಕೊಟ್ಟ ಖ್ಯಾತ ನಟ  title=

ಹರ್ದೀಕ್ ಜೋಶಿ ಮರಾಠಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಖ್ಯಾತಿ ಗಳಿಸಿದ್ದು,  ತಮ್ಮ ತಂದೆಗೆ ಹೊಚ್ಚ ಹೊಸ ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಎಸ್‌ಯುವಿಯನ್ನು ಗಿಫ್ಟ್ ನೀಡಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಕಾರನ್ನು ಕುಟುಂಬದೊಂದಿಗೆ ವಿತರಣೆ ಪಡೆಯುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿರುವ ಹರ್ದೀಕ್, 'ವಿಶೇಷವಾದವರಿಗೆ ಜನ್ಮದಿನದ ಉಡುಗೊರೆ. ಹುಟ್ಟುಹಬ್ಬದ ಶುಭಾಶಯಗಳು ಪಪ್ಪಾ' ಎಂದು ಶೀರ್ಷಿಕೆ ಬರೆದಿದ್ದಾರೆ.

ಇದನ್ನು ಓದಿ : ತಮಿಳು ಚಿತ್ರದಲ್ಲಿಯೂ ನಟಿಸ್ತೀನಿ, ನಿಮ್ಮ ಪ್ರೀತಿ ನೋಡಿ ಖುಷಿಯಾಗಿದೆ ಎಂದ ಕಿಸ್ ನಟಿ

ನಟ ಹರ್ದೀಕ್ ಜೋಶಿ ಮಹೀಂದ್ರಾ ಎಕ್ಸ್‌ಯುವಿ700 ಕಾರಿನ ಯಾವ ರೂಪಾಂತರವನ್ನು ಖರೀದಿಸಿದ್ದಾರೆ ಎನ್ನುವುದರ ಕುರಿತು ಮಾಹಿತಿಯಿಲ್ಲ. ಭಾರತದ ಮಾರುಕಟ್ಟೆಯಲ್ಲಿ ಈ ಕಾರು ರೂ.13.99 ಲಕ್ಷದಿಂದ ರೂ.26.99 ಲಕ್ಷ ಎಕ್ಸ್ ಶೋರೂಂ ದರದಲ್ಲಿ ದೊರೆಯುತ್ತದೆ. ಎಎಕ್ಸ್3, ಎಎಕ್ಸ್5, ಎಎಕ್ಸ್7 ಒಳಗೊಂಡಂತೆ ವಿವಿಧ ರೂಪಾಂತರ ಹಾಗೂ ಎವರೆಸ್ಟ್ ವೈಟ್, ಮಿಡ್ನೈಟ್ ಬ್ಲಾಕ್, ನಪೋಲಿ ಬ್ಲಾಕ್ ಸೇರಿದಂತೆ ಆಕರ್ಷಕ ಬಣ್ಣಗಳೊಂದಿಗೂ ಲಭ್ಯವಿದೆ. ಈ ಕಾರು ಎರಡು ಪವರ್ ಟ್ರೈನ್ ಆಯ್ಕೆಯಲ್ಲಿ ಲಭ್ಯವಿದೆ. 

ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 200 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 380 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಿತ್ತದೆ. 2.2-ಲೀಟರ್ ಡೀಸೆಲ್ ಎಂಜಿನ್ 185 ಪಿಎಸ್ ಪವರ್ ಹಾಗೂ 450 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ ಮಹೀಂದ್ರಾ ಎಕ್ಸ್‌ಯುವಿ700, 6-ಸ್ವೀಡ್ ಮ್ಯಾನುವಲ್ ಅಥವಾ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಸಿಗುತ್ತದೆ. FWD (ಫ್ರಂಟ್ ವೀಲ್ ಡ್ರೈವ್) ಮತ್ತು AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, 17 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. ಈ ಕಾರು 5, 6 ಮತ್ತು 7 ಆಸನ ಆಯ್ಕೆ ವ್ಯವಸ್ಥೆಯಲ್ಲಿಯೂ ಲಭ್ಯವಿದೆ.

ಇದನ್ನು ಓದಿ : Aadujeevitham : ಎರಡೇ ದಿನದಲ್ಲಿ ಆಡು ಜೀವಿತಂ ಚಿತ್ರದ ಕಲೆಕ್ಷನ್ ಎಷ್ಟು ಗೊತ್ತೇ ?

ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿಯು ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 6-ವೇ ಪವರ್ ಡ್ರೈವರ್ ಸೀಟ್, 12 ಸ್ಪೀಕರ್‌, ದೊಡ್ಡದಾದ ಸನ್‌ರೂಫ್, ಡುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಇನ್-ಬಿಲ್ಟ್ ಅಲೆಕ್ಸಾ ಕನೆಕ್ಟಿವಿಟಿಯನ್ನು ಪಡೆದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News