Aamir Khan : ಹಣೆಗೆ ಕುಂಕುಮ ಇಟ್ಟು ಕಲಶ ಪೂಜೆ! ಅಮೀರ್ ಖಾನ್ ಫೋಟೋ ವೈರಲ್

Aamir Khan : ಅಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ಕಿರಣ್ ರಾವ್ ಇತ್ತೀಚೆಗೆ ಅಮೀರ್ ಖಾನ್ ಪ್ರೊಡಕ್ಷನ್ಸ್ ಕಚೇರಿಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಅಮೀರ್ ಮುಖ್ಯ ಪೂಜೆಯನ್ನು ಮಾಡಿದರು ಮತ್ತು ಕಿರಣ್ ಅವರ ಒಟ್ಟಿಗೆ ಆರತಿಯನ್ನು ಮಾಡಿದರು. 

Written by - Chetana Devarmani | Last Updated : Dec 9, 2022, 12:13 PM IST
  • ಹಣೆಗೆ ಕುಂಕುಮ ಇಟ್ಟು ಕಲಶ ಪೂಜೆ
  • ಕಲಶ ಪೂಜೆಯನ್ನು ಮಾಡುತ್ತಿರುವ ಅಮೀರ್ ಖಾನ್‌
  • ಅಮೀರ್ ಖಾನ್ ಫೋಟೋ ವೈರಲ್
Aamir Khan : ಹಣೆಗೆ ಕುಂಕುಮ ಇಟ್ಟು ಕಲಶ ಪೂಜೆ! ಅಮೀರ್ ಖಾನ್ ಫೋಟೋ ವೈರಲ್  title=
ಅಮೀರ್ ಖಾನ್‌

Aamir Khan : ಅಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ಕಿರಣ್ ರಾವ್ ಇತ್ತೀಚೆಗೆ ಅಮೀರ್ ಖಾನ್ ಪ್ರೊಡಕ್ಷನ್ಸ್ ಕಚೇರಿಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಅಮೀರ್ ಮುಖ್ಯ ಪೂಜೆಯನ್ನು ಮಾಡಿದರು ಮತ್ತು ಕಿರಣ್ ಅವರ ಒಟ್ಟಿಗೆ ಆರತಿಯನ್ನು ಮಾಡಿದರು. ಲಾಲ್ ಸಿಂಗ್ ಚಡ್ಡಾ ನಿರ್ದೇಶಕ ಅದ್ವೈತ್ ಚಂದನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಪೂಜೆಯಲ್ಲಿ ಭಾಗವಹಿಸಿದ ಇತರರು ಸಹ ಹಲವಾರು ಫೋಟೋಗಳನ್ನು ಶೇರ್‌ ಮಾಡಿದ್ದಾರೆ.

ಇದನ್ನೂ ಓದಿ : Alia Bhatt: "ನಾನು ರಣಬೀರ್ ಹಾಸಿಗೆಯ ಮೇಲೆ..." ಬೆಡ್‌ರೂಮ್‌ ರಹಸ್ಯ ಬಿಚ್ಚಿಟ್ಟ ಆಲಿಯಾ!

ಅಮೀರ್ ಪೂಜೆಯ ಸಮಯದಲ್ಲಿ ಧಾರ್ಮಿಕ ಕ್ರಿಯೆಯ ಭಾಗವಾಗಿ ಕಲಶವನ್ನು ಸ್ಥಾಪಿಸುವಾಗ ನೆಹರು ಕ್ಯಾಪ್ ಮತ್ತು ಭುಜದ ಸುತ್ತಲೂ ಬಟ್ಟೆಯನ್ನು ಧರಿಸಿದ್ದರು. ಪೂಜೆಯ ಉದ್ದೇಶ ತಿಳಿದಿಲ್ಲವಾದರೂ ಅವರ ಕಚೇರಿಯನ್ನು ಬಣ್ಣಬಣ್ಣದ ಬಲೂನ್‌ಗಳಿಂದ ಅಲಂಕರಿಸಲಾಗಿದೆ. 

 

 

ಅದ್ವೈತ್ ಅವರು ಅಮೀರ್ ಮತ್ತು ಕಿರಣ್ ಅವರು ಪರಸ್ಪರ ಪಕ್ಕದಲ್ಲಿ ನಿಂತು ಆರತಿ ಮಾಡುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಅವರು ಪೂಜೆಯ ತಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡು ಪ್ರಾರ್ಥನೆಯಲ್ಲಿ ತೊಡಗಿರುವುದು ಕಂಡುಬರುತ್ತದೆ. ಕಿರಣ್ ರಾವ್ ಕೂಡ ಉದ್ದನೆಯ ಡೆನಿಮ್ ಶರ್ಟ್ ಮತ್ತು ಲೆಗ್ಗಿಂಗ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಇದನ್ನೂ ಓದಿ : "ಕನ್ನಡ ಸಿನಿಮಾ ಮೇಲೆ ಪ್ರೀತಿ ಇದೆ, ಉಳಿದಿದ್ದು ಅವರಿಗೆ ಬಿಟ್ಟದ್ದು": ರಶ್ಮಿಕಾ ಮಂದಣ್ಣ

ಅಮೀರ್ ಮತ್ತು ಕಿರಣ್ ತಮ್ಮ 15 ವರ್ಷಗಳ ಸುದೀರ್ಘ ದಾಂಪತ್ಯವನ್ನು ಕಳೆದ ವರ್ಷ ಕೊನೆಗೊಳಿಸಿದರು. ಅವರು ತಮ್ಮ ಮಗ ಆಜಾದ್ ರಾವ್ ಖಾನ್, ಸಹ-ಪೋಷಕರಾಗಿ ಮುಂದುವರಿಯುತ್ತಾರೆ. ಆಗಾಗ ಅಮಿರ್‌ ಮತ್ತು ಕಿರಣ್‌ ಪಾರ್ಟಿಗಳು, ವಿಮಾನ ನಿಲ್ದಾಣಗಳು ಅಥವಾ ಇತರ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಅಮೀರ್ ಅವರ ಬಹು ನಿರೀಕ್ಷಿತ ಚಿತ್ರ ಲಾಲ್ ಸಿಂಗ್ ಚಡ್ಡಾ ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷೆಯ ಲಾಭ ಗಳಿಸಲು ಸಾಧ್ಯವಾಗಲಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News