ನವದೆಹಲಿ : ಬಾಲಿವುಡ್ ಖಾನ್ ತ್ರಯರಲ್ಲಿ ಒಬ್ಬರಾದ ಅಮೀರ್ ಖಾನ್ (Aamir Khan) ಪುತ್ರಿ ಈರಾ ಖಾನ್ (Ira Khan) ಇಡೀ ಬಾಲಿವುಡ್ ಬೆಚ್ಚಿ ಬೀಳುವ ವಿಚಾರವನ್ನು ಹೊರ ಹಾಕಿದ್ದಾರೆ. ತಾನು 14ನೇ ವರ್ಷದವಳಾಗಿದ್ದಾಗ ತನ್ನ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು ಈರಾ ಖಾನ್ ಹೇಳಿಕೊಂಡಿದ್ದಾರೆ.
ತನ್ನ 14ನೇ ವಯಸ್ಸಿನಲ್ಲಿ ತನ್ನ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು ಎಂದು ವಿಡಿಯೋದಲ್ಲಿ ಈರಾ ಖಾನ್ ಹೇಳಿಕೊಂಡಿದ್ದಾರೆ. ಘಟನೆಯ ಸಂದರ್ಭ ವ್ಯಕ್ತಿ ಏನು ಮಾಡುತ್ತಿದ್ದಾನೆ ಎಂದು ತಿಳಿದಿರಲಿಲ್ಲ. ನಂತರ ಈ ಬಗ್ಗೆ ತಂದೆ ಮತ್ತು ತಾಯಿಯೊಂದಿಗೆ ಘಟನೆಯನ್ನು ವಿವರಿಸಿರುವುದಾಗಿ ಈರಾ ಹೇಳಿಕೊಂಡಿದ್ದಾರೆ. ಈಗ ಜೀವನದಲ್ಲಿ ಮುಂದುವರೆದಿರುವುದಾಗಿಯೂ ಈರಾ ಹೇಳಿದ್ದಾರೆ.
ನಾನು ಡಿಪ್ರೆಶನ್ನಲ್ಲಿದ್ದೇನೆ- ಸೋಶಿಯಲ್ ಮಿಡಿಯಾದಲ್ಲಿ ಅಮೀರ್ ಖಾನ್ ಪುತ್ರಿ ಇರಾ ಖಾನ್
ಈರಾ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ (Social media)ಆಕ್ಟಿವ್ ಆಗಿದ್ದು, ತನ್ನ ಅನೇಕ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಬೋಲ್ಡ್ ಪೋಟೋಗಳನ್ನೇ ಹೆಚ್ಚಾಗಿ ಹಂಚಿಕೊಳ್ಳುತ್ತಿದ್ದು, ಇದರಿಂದ ಅನೇಕ ವೇಳೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಈರಾ ಖಾನ್ ಮಾನಸಿಕ ಖಿನ್ನತೆಗೆ (Depression) ಒಳಗಾಗಿದ್ದರು ಎಂಬ ಸುದ್ದಿಯೂ ಕೇಳಿ ಬಂದಿತ್ತು.