ಶಿವಾಜಿ ನಗರದಲ್ಲಿ ಮಿಲಿಟರಿ ಹೋಟೆಲ್ ಊಟ ಸವಿದು ವಾವ್ ಎಂದ ನಟ ಆಶಿಶ್ ವಿದ್ಯಾರ್ಥಿ

ನಟ ಆಶಿಶ್ ವಿದ್ಯಾರ್ಥಿ ಒಬ್ಬ ಅಮೋಘ ಕಲಾವಿದ. ಸ್ಯಾಂಡಲ್ ವುಡ್ ನಿಂದ ಹಿಡಿದು, ಟಾಲಿವುಡ್, ಬಾಲಿವುಡ್, ಮಲಯಾಳಂ ಹೀಗೆ ಪ್ರತಿ ಭಾಷೆಯ ಸಿನಿಮಾಗಳಲ್ಲಿನ ಇವರ ಅಭಿನಯಕ್ಕೆ ಮನಸೋಲದವರು ಯಾರು ಇಲ್ಲ.

Written by - Chetana Devarmani | Last Updated : Sep 21, 2022, 12:59 PM IST
  • ನಟ ಆಶಿಶ್ ವಿದ್ಯಾರ್ಥಿ ಒಬ್ಬ ಅಮೋಘ ಕಲಾವಿದ
  • ಅಭಿನಯದ ಮೂಲಕ ಜನರ ಮನಗೆದ್ದ ನಟ ಆಶಿಶ್
  • ಶಿವಾಜಿ ನಗರದಲ್ಲಿ ಮಿಲಿಟರಿ ಹೋಟೆಲ್ ಊಟ ಸವಿದು ವಾವ್ ಎಂದಿದ್ದಾರೆ
ಶಿವಾಜಿ ನಗರದಲ್ಲಿ ಮಿಲಿಟರಿ ಹೋಟೆಲ್ ಊಟ ಸವಿದು ವಾವ್ ಎಂದ ನಟ ಆಶಿಶ್ ವಿದ್ಯಾರ್ಥಿ title=
ನಟ ಆಶಿಶ್ ವಿದ್ಯಾರ್ಥಿ

ನಟ ಆಶಿಶ್ ವಿದ್ಯಾರ್ಥಿ ಒಬ್ಬ ಅಮೋಘ ಕಲಾವಿದ. ಸ್ಯಾಂಡಲ್ ವುಡ್ ನಿಂದ ಹಿಡಿದು, ಟಾಲಿವುಡ್, ಬಾಲಿವುಡ್, ಮಲಯಾಳಂ ಹೀಗೆ ಪ್ರತಿ ಭಾಷೆಯ ಸಿನಿಮಾಗಳಲ್ಲಿನ ಇವರ ಅಭಿನಯಕ್ಕೆ ಮನಸೋಲದವರು ಯಾರು ಇಲ್ಲ. ಅಭಿನಯದ ಮೂಲಕ ಜನರ ಮನಗೆದ್ದ ನಟ ಆಶಿಶ್ ಅವರು ಆಹಾರ ಪ್ರಿಯರು ಕೂಡ ಹೌದು. ಇದಕ್ಕೆ ಸಾಕ್ಷಿ ಇವರು ಯೂಟ್ಯೂಬ್ ನಲ್ಲಿ ಹಂಚಿಕೊಳ್ಳುವ ಆಹಾರದ ವಿಡಿಯೋಗಳೇ ಸಾಕ್ಷಿ.  ಬೆಂಗಳೂರು ಸೇರಿದಂತೆ ನಾನಾ ಕಡೆ ಪ್ರಯಾಣ ಮಾಡುವ ಆಶಿಶ್ ಅವರು ಅಲ್ಲಿನ ಪ್ರಸಿದ್ಧ ಸ್ವಾದಿಷ್ಟಕರ ಊಟ ಸವಿಯುವುದು ಮತ್ತು ಅದರ ವಿಡಿಯೋ ಮಾಡಿ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಳ್ಳುವುದನ್ನು ಮಾತ್ರ ಮರೆಯುವುದೇ ಇಲ್ಲ. 

ಇದನ್ನೂ ಓದಿ : ಹಿರಿಯ ಹಾಸ್ಯನಟ ರಾಜು ಶ್ರೀವಾಸ್ತವ ನಿಧನ, ಏಮ್ಸ್ ನಲ್ಲಿ ಕೊನೆಯುಸಿರು

ಕಳೆದ ಬಾರಿ ಮುದ್ದೆ, ಮಟನ್ ಸಾರು ಊಟ ಮಾಡಿ  ಬೆಂಗಳೂರಿನ ‘ಗೌಡರ ಮುದ್ದೆ ಮನೆ’ಯ ಊಟದ ಪರಿಚಯ ಮಾಡಿಕೊಟ್ಟು ಸೂಪರ್ ಎಂದಿದ್ದ ಆಶಿಶ್ ಅವರು ಇದೀಗ ಸಂಪೂರ್ಣ ಮಾಂಸಾಹಾರ ಊಟದ ರುಚಿಯನ್ನು ಸವಿದು ತೃಪ್ತಿಪಟ್ಟಿರುವುದಲ್ಲದೇ ಆ ಸಂತಸವನ್ನು ಅಭಿಮಾನಿಗಳೊಟ್ಟಿಗೆ ಶೇರ್ ಮಾಡಿದ್ದಾರೆ. ಈ ಬಾರಿ ಅವರು ಬೆಂಗಳೂರಿನ ಶಿವಾಜಿ ನಗರದಲ್ಲಿನ ಒಂದು ಹೋಟೆಲ್ ಮತ್ತು ಅಲ್ಲಿನ ಆಹಾರದ ರುಚಿ, ವಿಶೇಷತೆಯನ್ನು ವಿವರಿಸಿದ್ದಾರೆ. 

 

 

ಹೌದು ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಮಿಲಿಟರಿ ಹೋಟೆಲ್ ನಲ್ಲಿ ಆಹಾರ ಸವಿದ ಅವರು ಊಟ ಮಾಡುತ್ತಲೇ ಊಟ ಯಾವ ರೀತಿಯಲ್ಲಿ ಇದೆ ಎಂಬುದನ್ನು ವಿವರಿಸಿದ್ದಾರೆ. ಶಿವಾಜಿ ನಗರದಲ್ಲಿರುವ ಮಿಲಿಟರಿ ಹೋಟೆಲ್ ನಲ್ಲಿ ದೊನ್ನೆ ಬಿರಿಯಾನಿ, ಚಿಕನ್ ಕರಿ, ಮಟನ್ ಸುಕ್ಕಾ, ಪಾಯಾ ಸೂಪ್ ಹಲವು ಫುಡ್ ಸವಿದು ವಾವ್ ಎಂದಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಆಶಿಶ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹುಭಾಷೆಗಳ ಚಿತ್ರರಂಗಗಳಲ್ಲಿ ಕೆಲಸ ಮಾಡಿರುವ ಆಶಿಶ್ ವಿದ್ಯಾರ್ಥಿ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 

ಇದನ್ನೂ ಓದಿ : ಅತಿಯಾದ ಬಿಸಿ ನೀರು ಸೇವನೆ ನಿಮ್ಮ ಈ ಅಂಗಗಳಿಗೆ ಹಾನಿಕಾರಕವಾಗಬಹುದು, ಎಚ್ಚರ!

ಹಿಂದಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ದೆಹಲಿ ಮೂಲದ ನಟ ಆಶಿಷ್ ವಿದ್ಯಾರ್ಥಿ ಬಳಿಕ ಕಾಣಿಸಿಕೊಂಡದ್ದು ತೆಲುಗು ಸಿನಿಮಾಗಳಲ್ಲಿ. ಸ್ಯಾಂಡಲ್ ವುಡ್ ಗೆ ಎಕೆ 47 ಸಿನಿಮಾ ಮೂಲಕ ಕನ್ನಡಾಭಿಮಾನಿಗಳ ಮೆಚ್ಚುಗೆ ಗಳಿಸಿದರು. ಈ ಸಿನಿಮಾದ ಬಳಿಕ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಅಭಿನಯ ಚತುರತೆ ಮೆರೆದರು. ಜೊತೆಗೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ಮಿಂಚಿದರು. ಇತ್ತೀಚೆಗೆ ಯಾವುದೇ ಕನ್ನಡದ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ಕೊಂಚ ಬೇಸರದ ಸಂಗತಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News