ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಿಗ್ಗೆಯಷ್ಟೇ ಬಂಧನವಾಗಿದ್ದ ಚಿತ್ರ ನಟ ದುನಿಯಾ ವಿಜಯ್'ಗೆ ನಿರೀಕ್ಷಣಾ ಜಾಮೀನು ದೊರೆತಿದೆ.
ಬೆಂಗಳೂರಿನ 65ನೇ ಸೆಷನ್ಸ್ ನ್ಯಾಯಾಲಯ ಒಂದು ಲಕ್ಷ ರೂ. ಬಾಂಡ್ ಹಾಗೂ ಸಾಕ್ಷಿ ನಾಶಪಡಸದಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ. 'ಮಾಸ್ತಿ ಗುಡಿ' ಚಿತ್ರದ ಚಿತ್ರೀಕರಣ ವೇಳೆ ಸಹ ನಟರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಟ ದುನಿಯಾ ವಿಜಯ್ ಅವರನ್ನು ಬೆಂಗಳೂರಿನ ಚೆಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಇಂದು ಬೆಳಿಗ್ಗೆ ತಮಿಳುನಾಡಿನ ರೆಸಾರ್ಟ್ ಒಂದರಲ್ಲಿ ವಿಜಯ್ ಅವರನ್ನು ಬಂಧಿಸಿದ್ದರು.
ತಮಿಳುನಾಡಿನಲ್ಲಿ ನಟ ದುನಿಯಾ ವಿಜಯ್ ಬಂಧನ
2016ರ ನವೆಂಬರ್ 7ರಂದು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ 'ಮಾಸ್ತಿಗುಡಿ' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಹೆಲಿಕಾಪ್ಟರ್ನಿಂದ ಜಿಗಿದು ಉದಯೋನ್ಮುಖ ನಟರಾದ ಉದಯ್ ಹಾಗೂ ಅನಿಲ್ ಅವರು ದುರಂತ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ರಾಮನಗರ ಜೆಎಂಎಫ್'ಸಿ ನ್ಯಾಯಾಲಯ ಚಿತ್ರದ ನಿರ್ಮಾಪಕ ಸುಂದರ್ ಪಿ. ಗೌಡ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಿ ಬಂಧನದ ಆದೇಶ ಹೊರಡಿಸಿತ್ತು. ಸುಂದರ್ ಪಿ. ಗೌಡ ಅವರನ್ನು ಬಂಧಿಸಲು ತೆರಳಿದಾಗ ದುನಿಯಾ ವಿಜಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಸುಂದರ್ ಪಿ.ಗೌಡ ಅವರು ತಪ್ಪಿಸಿಕೊಳ್ಳುವಂತೆ ಮಾಡಿದ್ದರು.